ಕಾಸರಗೋಡು : ಕೇರಳ ನಗರಸಭಾ ಕಾರ್ಪರೇಶನ್ ಕಂಟಿಜೆಂಟ್ ಎಂಪೊ್ಲೕಯೀಸ್ ಅಸೋಸಿಯೇಶನ್ (ಐಎನ್ ಟಿಯುಸಿ) ಕಾಸರಗೋಡು ನಗರಸಭಾ ಘಟಕದ ನೇತೃತ್ವದಲ್ಲಿಎಸ್ಸೆಸ್ಸೆಲ್ಸಿ, ಪ್ಲಸ್ ಟು ಪರೀಕ್ಷೆಗಳಲ್ಲಿಹಾಗೂ ಇತರ ವಲಯಗಳಲ್ಲಿಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ನಗರಸಭಾಧ್ಯಕ್ಷೆ ಶಾಹಿನ ಸಲೀಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಸಮಿತಿ ಸದಸ್ಯ ಕೆ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಉಪಾಧ್ಯಕ್ಷ ಕೆ. ಎನ್ . ಹನೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಘಟಕ ಕಾರ್ಯದರ್ಶಿ ಪುರುಷೋತ್ತಮ ಮುದಲಪಾರೆ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಮೆಹರುನ್ನಿಸಾ ಹಮೀದ್ , ಹಮೀದ್ ಬೆದಿರ, ಜಾಫರ್ ಕಮಾಲ್ , ಸಮೀನ ಮುಜೀಬ್ , ರಂಜಿಶ, ಕೆಎಂಸಿಸಿಇಸಿ ಘಟಕ ಅಧ್ಯಕ್ಷ ಅರ್ಜುನನ್ ತಾಯಲಂಗಾಡಿ, ಘಟಕ ಉಪಾಧ್ಯಕ್ಷ ಸಂತೋಷ್ , ರವೀಂಧ್ರನ್ ಮಾತನಾಡಿದರು.ಚಿತ್ರ: 18ಕೆಎಸ್ ಎಲ್ ಅಭಿನಂದನೆ