ಸಮಾಜಕ್ಕೆ ಸವಿತಾ ಸಮಾಜದವರ ಕೊಡುಗೆ ಅಪಾರ

Contributed by: puruapo@gmail.com|Vijaya Karnataka•
the message of savita community a symbol of service and unity
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೆಮನೆ ವಿಶ್ವನಾಥ ಹೇಳಿಕೆ

ಸಮಾಜಕ್ಕೆ ಸವಿತಾ ಸಮಾಜದವರ ಕೊಡುಗೆ ಅಪಾರ
ವಿಕ ಸುದ್ದಿಲೋಕ ನರಸಿಂಹರಾಜಪುರ

ಸಮಾಜಕ್ಕೆ ಸವಿತಾ ಸಮಾಜದವರ ಕೊಡುಗೆ ಅಪಾರ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೆಮನೆ ವಿಶ್ವನಾಥ ತಿಳಿಸಿದರು.

ನರಸಿಂಹರಾಜಪುರದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಚೇರಿಯಲ್ಲಿನರೇಂದ್ರ ಮೋದಿ ಅವರ 25 ವರ್ಷಗಳ ಯಶಸ್ವಿ ಆಡಳಿತದ ಹಿನ್ನೆಲೆಯಲ್ಲಿಸವಿತಾ ಸಮಾಜದ 26 ಜನರಿಗೆ ಅನುಕೂಲವಾಗುವ ಕಿಟ್ ಮತ್ತು ಸಿಹಿಯನ್ನು ವಿತರಿಸಿ ಮಾತನಾಡಿದರು.

ಕೊರೊನಾ ಸಂದರ್ಭದಲ್ಲಿಸವಿತಾ ಸಮಾಜದ ಸ್ನೇಹಿತರು ತಮ್ಮ ಪ್ರಾಣದ ಹಂಗು ತೊರೆದು ಮನೆ ಮನೆಗಳಿಗೆ ತೆರಳಿ ತಮ್ಮ ಕರ್ತವ್ಯ ಮಾಡಿದರು. ಜಾತಿ, ಮತ ,ಧರ್ಮ, ಶ್ರೀಮಂತ ಬಡವ ಎಂಬ ಭೇದವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ಸೇವೆ ನೀಡಿರುತ್ತಾರೆ ಎಂದರು.

ಸವಿತಾ ಸಮಾಜದ ಅಧ್ಯಕ್ಷ ಕುಮಾರ ಮಾತನಾಡಿ, ನಮ್ಮ ಸಮಾಜದವರನ್ನು ಗುರುತಿಸಿ ಅವಶ್ಯಕ ಕಿಟ್ ಗಳನ್ನು ನೀಡಿರುವುದು ಸಂತಸ ತಂದಿದೆ ಎಂದರು.

ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಂಚಿನಮನೆ ರಾಘು, ನಗರ ಅಧ್ಯಕ್ಷ ಅಕ್ಷತಾ ಇದ್ದರು.

22ಎನ್ .ಅರ್ .ಪಿ.ಪೊಟೋ1

ನರಸಿಂಹರಾಜಪುರದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಚೇರಿಯಲ್ಲಿನಡೆದ ಕಾರ್ಯಕ್ರಮದಲ್ಲಿಗದ್ದೆಮನೆ ವಿಶ್ವನಾಥ ಅವರು ಸವಿತಾ ಸಮಾಜದ 26 ಜನರಿಗೆ ಕಿಟ್ ಮತ್ತು ಸಿಹಿಯನ್ನು ವಿತರಿಸಿದರು.