ಇಂದೇ

Contributed by: Veeresh.Handigi@timesgroup.com|Vijaya Karnataka•
world arthritis day celebration walkathon for joint surgery patients
ವಾಕಥಾನ್ ನಾಳೆ

ರಾಣೇಬೆನ್ನೂರ: ಅ.25ರ ಬೆಳಗ್ಗೆ 10ಕ್ಕೆ ವಿಶ್ವ ಸಂಧಿವಾತ ದಿನಾಚರಣೆ ಅಂಗವಾಗಿ ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗೆ ಒಳಗಾದವರಿಂದ ನಗರದ ಪೋಸ್ಟ್ ಸರ್ಕಲ್ ಬಳಿಯಿಂದ ಬಸ್ ನಿಲ್ದಾಣ ರಸ್ತೆಯ ಅನಂತ ಹೋಟೆಲ್ ವರೆಗೆ ವಾಕಥಾನ್ ಆಯೋಜಿಸಲಾಗಿದೆ ಎಂದು ಕೀಲು, ಮೂಳೆ ತಜ್ಞ ಡಾ.ಸಂಜೀವ ಮುದ್ರಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು,‘‘ಶಾಸಕ ಪ್ರಕಾಶ ಕೋಳಿವಾಡ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ವಾಕಥಾನ್ ಗೆ ಚಾಲನೆ ನೀಡಲಿದ್ದಾರೆ. ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗೆ ಒಳಗಾದವರ ಜೀವನ ಶೈಲಿ ಜನರಲ್ಲಿಜಾಗೃತಿ ಮೂಡಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ’’ ಎಂದರು.

ಸಂಕಪ್ಪ ಮಾರನಾಳ ಸುದ್ದಿಗೋಷ್ಠಿಯಲ್ಲಿದ್ದರು.