ಡಾ. ಎಂ.ಎನ್ . ರಾಜೇಂದ್ರ ಕುಮಾರ್ ಅವರಿಗೆ ‘ನಮ್ಮ ಕುಡ್ಲ’ ಗೌರವ

Contributed by: mahammed.arif@timesgroup.com|Vijaya Karnataka•
dr mn rajendra kumar receives namma kudla honor a prestigious award
ವಿಕ ಸುದ್ದಿಲೋಕ ಮಂಗಳೂರು

ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಸಹಕಾರ ರತ್ನ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಅವರನ್ನು ‘ ನಮ್ಮ ಕುಡ್ಲ ’ ವಾಹಿನಿ ವತಿಯಿಂದ ಸೋಮವಾರ ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿಸನ್ಮಾನಿಸಲಾಯಿತು.
‘ನಮ್ಮ ಕುಡ್ಲ’ ವತಿಯಿಂದ ಇತ್ತೀಚೆಗೆ ‘ನಮ್ಮ ಕುಡ್ಲಕಂಬಳ ಪ್ರಶಸ್ತಿ- 2026’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿಕಂಬಳದ ಪ್ರೇಮಿ ಹಾಗೂ ಪ್ರೋತ್ಸಾಹಕರಾಗಿರುವ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.

ಕರಾವಳಿ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿಗಣನೀಯ ಕೊಡುಗೆ ನೀಡಿರುವ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಕಂಬಳ ಸೇರಿದಂತೆ ತುಳುನಾಡಿನ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯ ಪ್ರೋತ್ಸಾಹಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಕಂಬಳ ಪ್ರೋತ್ಸಾಹವನ್ನು ಗುರುತಿಸಿ ‘ನಮ್ಮ ಕುಡ್ಲಕಂಬಳ ಪ್ರಶಸ್ತಿ-2026’ರ ಪ್ರಯುಕ್ತ ಈ ಸನ್ಮಾನ ನೆರವೇರಿಸಲಾಯಿತು.

‘ನಮ್ಮ ಕುಡ್ಲ’ ವಾಹಿನಿಯ ಮುಖ್ಯಸ್ಥ ಲೀಲಾಕ್ಷ ಕರ್ಕೇರ ಅವರು ಡಾ. ಎಂ.ಎನ್ . ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿದರು. ಉದ್ಯಮಿಗಳಾದ ಜಯಪ್ರಕಾಶ್ ತುಂಬೆ, ಪುಷ್ಪರಾಜ್ ಜೈನ್ , ನಮ್ಮ ಕುಡ್ಲವಾಹಿನಿಯ ಮಾರ್ಕೆಟಿಂಗ್ ಮ್ಯಾನೇಜರ್ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು.

ಫೊಟೊ-31ಎಂ=ರಾಜೇಂದ್ರ ಕುಮಾರ್

ಮಂಗಳೂರಿನಲ್ಲಿಸೋಮವಾರ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಅವರನ್ನು ‘ನಮ್ಮ ಕುಡ್ಲ’ ವಾಹಿನಿಯಿಂದ ಸನ್ಮಾನಿಸಲಾಯಿತು.