ಕೋಲಾರ: ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಅಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮವು ಅಂತಾರಾಷ್ಟ್ರೀಯ ನೇಮಕಾತಿ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸಲು ಸೆ.06ರಂದು ವಿದೇಶದಲ್ಲಿಅಧ್ಯಯನ-2026 ಕಾರ್ಯಕ್ರಮವನ್ನು ಗೇಟ್ ನಂ.4, ಗಾಯತ್ರಿ ಗ್ರಾಂಡ್ , ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರಿನಲ್ಲಿಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ10ಕ್ಕೂ ಹೆಚ್ಚು, ದೇಶಗಳ 75ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿದ್ದು, ಉನ್ನತ ಶಿಕ್ಷಣಕ್ಕಾಗಿ ವಿದೇಶಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ವಿದೇಶಿ ಅಧ್ಯಯನದ ಅವಕಾಶಗಳು, ಪ್ರವೇಶ ಪ್ರಕ್ರಿಯೆಗಳು, ವಿದ್ಯಾರ್ಥಿ ವೀಸಾ ಮಾಹಿತಿ, ಹಣಕಾಸು ಮಾರ್ಗದರ್ಶನ, ಆರೋಗ್ಯ ವಿಮೆ ಮಾರ್ಗದರ್ಶನ, ಭಾಷಾ ನೈಪುಣ್ಯತೆಗೆ ನೆರವು ಹಾಗೂ ವಿದ್ಯಾರ್ಥಿ ವೇತನ ಪಡೆಯುವಿಕೆ ಬಗ್ಗೆ ಮಾಹಿತಿಯನ್ನು ಒಂದೇ ವೇದಿಕೆಯಡಿ ಕಾರ್ಯಕ್ರಮದಲ್ಲಿನೀಡಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಆಕಾಂಕ್ಷಿಗಳು ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ವೆಬ್ ಸೈಟ್ ವಿಳಾಸ hಠಿಠಿps:/sಠ್ಠಿdyaಚ್ಟಿಟad.ksd್ಚka್ಟ್ಞaಠಿaka.್ಚಟಞ ಕ್ಕೆ ಲಾಗಿನ್ ಆಗಿ ಸೆ.06 ಸಂಜೆ:05.00 ಗಂಟೆಯೊಳಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಕೌಶಲ್ಯಾಭಿವೃದ್ಧಿ ಕಚೇರಿ, ಕೋಲಾರ ಅಥವಾ ಮೊಬೈಲ್ ಸಂಖ್ಯೆ: 7338674791, 7338674794, 7338674798, 7338674792ಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.=
ಕಂತು ಪಡೆಯಲು ಇ-ಕೆವೈಸಿ ಕಡ್ಡಾಯ
ಕೋಲಾರ: ಜಿಲ್ಲೆಯಲ್ಲಿಭೀಕರ ಬರ ಎದುರಾಗಿದೆ. ಬೆಳೆ ಪರಿಹಾರ ನಿರೀಕ್ಷೆಯಲ್ಲಿರೈತರಿದ್ದಾರೆ, ಈ ಮಧ್ಯೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್ ) ಯೋಜನೆಯಡಿ ಮುಂದಿನ ಕಂತಿನ ನೆರವು ಪಡೆಯಲು ಅರ್ಹ ರೈತರು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿಬ್ಯಾಂಕ್ ಖಾತೆಗೆ ಪಿಎಂ ಕಿಸಾನ್ ನೆರವಿ ಹಣ ಬರುವುದು ಅನುಮಾನ. ಆಗಸ್ಟ್ ಯೋಜನೆಯ 2ನೇ ಕಂತಿನ 2000 ರೂ. ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 15ರ ವೇಳೆಗೆ ಇ-ಕೆವೈಸಿ ಮಾಡಿಸದ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ತಡೆಯಾಗಲಿದೆ ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಸೆಪ್ಟೆಂಬರ್ 15ರೊಳಗೆ ಎಲ್ಲಾಅರ್ಹ ರೈತರು ಇ-ಕೆವೈಸಿ ಮಾಡಿಸಲೇಬೇಕಾದ ಅನಿವಾರ್ಯತೆ ಇದೆ. ಮಾಡಿಸದೇ ಇದ್ದರೆ ನೆರವಿನ ಹಣ ಬಾರದೇ ಹೋಗಬಹುದು. ಜಿಲ್ಲೆಯಲ್ಲಿಇನ್ನೂ 1,02,382 ರೈತರು ಇ-ಕೆವೈಸಿ ಮಾಡಿಸಲು ಬಾಕಿ ಇದ್ದು, ಮುಖ ಆಧಾರಿತ ಇ-ಕೆವೈಸಿ ಬೆರಳಚ್ಚು ನೀಡಲು ಸಾಧ್ಯವಾಗದ ಅಥವಾ ವೃದ್ಧ ರೈತರಿಗೆ ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಫೇಸ್ ಇ-ಕೆವೈಸಿ ಮಾಡಲು ಸರಳ ಅವಕಾಶ ಕಲ್ಪಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ನಿಂದ Pಋ - ಓಓಐಖಅN ಋಟಚಿಜ್ಝಿಛಿ ಅpp ಡೌನ್ ಲೋಡ್ ಮಾಡಿಕೊಳ್ಳಬೇಕು. ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಬೇಕು. ಆಧಾರ್ ಸಂಖ್ಯೆ ನಮೂದಿಸಿ ಮುಖವನ್ನು ಸ್ಕ್ಯಾ ನ್ ಮಾಡುವ ಮೂಲಕ ಇಕೆವೈಸಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ನೇರವಾಗಿ ಇ-ಕೆವೈಸಿ ಮಾಡಿಸಲು ಬಯಸುವ ರೈತರು ತಮ್ಮ ಹತ್ತಿರದ ಸಿಎಸ್ ಸಿ ಕೇಂದ್ರ, ಗ್ರಾಮ ಒನ್ ಕರ್ನಾಟಕ ಒನ್ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದು ಜಂಟಿ ಕೃಷಿ ನಿರ್ದೇಶಕಿ ಎಂ.ಎನ್ . ಮಂಜುಳ ಪ್ರಕಟಣೆಯಲ್ಲಿತಿಳಿಸಿದ್ದಾರೆ.