ಸಂಕ್ಷಿಪ್ತ ಸುದ್ದಿಗಳು

Contributed by: raju.manjunath67@gmail.com|Vijaya Karnataka•
invitation for applications and loan scheme for the year 2026 27 key information
ಅರ್ಜಿ ಆಹ್ವಾನ

ರಾಮನಗರ: 2026-27ನೇ ಸಾಲಿನಲ್ಲಿಪಿ.ಎಚ್ .ಡಿಗೆ ನೋಂದಣಿಯಾಗಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್ , ಜೈನ್ , ಬೌದ್ಧ, ಸಿಖ್ ಮತ್ತು ಪಾರ್ಸಿ) ವಿದ್ಯಾರ್ಥಿಗಳು ಅರ್ಜಿಯನ್ನು ಆನ್ ಲೈನ್ ಮೂಲಕ hಠಿಠಿps://sಛಿvasಜ್ಞಿdh್ಠ.ka್ಟ್ಞaಠಿaka.ಜಟv.ಜ್ಞಿ/sಛಿvasಜ್ಞಿdh್ಠ/ಈಛಿpa್ಟಠಿಞಛ್ಞಿಠಿಖಛ್ಟಿvಜ್ಚಿಛಿs ಲಿಂಕ್ ಮೂಲಕ 2026ರ ಅಕ್ಟೋಬರ್ 31ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ, ಅಲ್ಪಸಂಂಖ್ಯಾತರ ಕಲ್ಯಾಣ ಇಲಾಖೆ ಕೊಠಡಿ ಸಂಖ್ಯೆ : 308 ಕಂದಾಯಭವನ ರಾಮನಗರ ಇಲ್ಲಿಕಛೇರಿಯ ವೇಳೆಯಲ್ಲಿಖುದ್ದು ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ: 080-27271104 ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ: 8277799990 ಅಥವಾ ಮಾಹಿತಿ ಕೇಂದ್ರದ ಸಿಬ್ಬಂದಿಗಳ ದೂರವಾಣಿ ಸಂಖ್ಯೆ 7795757850, 9880297132 ಮತ್ತು 7019775955 ಇವರನ್ನು ಸಂಪರ್ಕಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಅಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.
-------------

ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ರಾಮನಗರ: ಜಿಲ್ಲೆಗಳಲ್ಲಿಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ 2026-27 ನೇ ಸಾಲಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು hಠಿಠಿp://shp.ka್ಟ್ಞaಠಿaka.ಜಟv.ಜ್ಞಿ/ಚ್ಚಿಡಿdಅನ್ನು ಸಂಪರ್ಕಿಸಿ ಆನ್ ಲೈನ್ ಮೂಲಕ ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು. ತಾಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರಕಾರದ ಆದೇಶಕ್ಕಾಗಿ ಇಲಾಖೆಯ ವೆಬ್ ಸೈಟ್ hಠಿಠಿp://ಚ್ಚಿಡಿd.ka್ಟ್ಞaಠಿaka.ಜಟv.ಜ್ಞಿ/ಅನ್ನು ನೋಡಬಹುದು. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿಚ್ಚಿಡಿdhಛ್ಝಿp್ಝಜ್ಞಿಛಿಃಜಞaಜ್ಝಿ.್ಚಟಞ ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲೂಕು ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ: 8050770004 ಅನ್ನು ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಅಧಿಕಾರಿಗಳು ಪ್ರಕಟಣೆಯಲ್ಲಿತಿಳಿಸಿದ್ದಾರೆ.

-------------

ಜಿಲ್ಲಾವಾರ್ಷಿಕ ಸಾಲ ಯೋಜನೆ

ರಾಮನಗರ: ಜಿಲ್ಲಾಮಾರ್ಗದರ್ಶಿ ಬ್ಯಾಂಕ್ ವತಿಯಿಂದ ನಗರದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿಸೋಮವಾರ ಜೂನ್ 2026ಕ್ಕೆ ಅಂತ್ಯಗೊಂಡ ತ್ರೈಮಾಸಿಕಕ್ಕೆ ಸಂಬಂಧಿಸಿದ ಜಿಲ್ಲಾಸಲಹಾ ಸಮಿತಿ (ಡಿಸಿಸಿ) ಹಾಗೂ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ (ಡಿಎಲ್ ಆರ್ ಸಿ) ಸಭೆ ನಡೆಯಿತು.

ಈ ವೇಳೆ 2026-27ನೇ ಹಣಕಾಸು ವಷÜರ್ ದ ಜಿಲ್ಲಾವಾರ್ಷಿಕ ಸಾಲ ಯೋಜನೆ ಕುರಿತು ಜಿಲ್ಲೆಯ ನಾನಾ ಕ್ಷೇತ್ರಗಳಿಗೆ ಸಾಲದ ಹರಿವು ಹೆಚ್ಚಿಸುವುದು ಹಾಗೂ ಹಣಕಾಸು ಒಳಗೊಳ್ಳುವಿಕೆಯನ್ನು ಬಲಪಡಿಸುವ ಕುರಿತು ಹಾಗೂ ಬೆಳೆ ಸಾಲ, ಕೃಷಿ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ಆದ್ಯತಾ ವಲಯದ ವಸತಿ, ಶಿಕ್ಷಣ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಸಮಗ್ರವಾಗಿ ಪರಿಶೀಲಿಸಿ ಚರ್ಚಿಸಲಾಯಿತು. ಬ್ಯಾಂಕುಗಳ ಸಾಲ-ಠೇವಣಿ (ಸಿಡಿ) ಅನುಪಾತ, ಎಸಿಪಿ ಗುರಿ ಮತ್ತು ಸಾಧನೆ, ಪಿಎಂಎಂವೈ ಸಾಲ ವಿತರಣೆ, ಸ್ವಸಹಾಯ ಸಂಘಗಳ ಸಾಲ ಸಂಪರ್ಕ ಹಾಗೂ ಪಿಎಂ ವಿಶ್ವಕರ್ಮ, ಪಿಎಂ ಸ್ವಾನಿಧಿ ಮತ್ತು ಪಿಎಂಇಜಿಪಿ ಯೋಜನೆಗಳ ಅನುಷ್ಠಾ್ಠನದ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯಲ್ಲಿಬೆಂಗಳೂರು ದಕ್ಷಿಣ ಜಿಲ್ಲಾಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್ , ಜಿಲ್ಲಾಮಾರ್ಗದರ್ಶಿ ಮುಖ್ಯ ವ್ಯವಸ್ಥಾಪಕ ಮೋಹನ್ ಕುಮಾರ್ , ಭಾರತೀಯ ರಿಸವ್ ರ್ ಬ್ಯಾಂಕ್ ನ ಬೆಂಗಳೂರು ಕಚೇರಿಯ ಲೀಡ್ ಜಿಲ್ಲಾಅಧಿಕಾರಿ ಅರುಣ್ ಕುಮಾರ್ ಪಿ, ನಬಾರ್ಡ್ ನ ಜಿಲ್ಲಾಅಭಿವೃದ್ಧಿ ಅಧಿಕಾರಿ ನೀನು ಸುರೇಶ್ , ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಸತೀಶ್ ಸಾಲುಂಕೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಪ್ರತಿನಿಧಿಗಳು ಸಭೆಯಲ್ಲಿಭಾಗವಹಿಸಿದ್ದರು.