ಸಿದ್ಧೇಶ್ವರ ಶ್ರೀ ಕನಸು ನನಸು

Contributed by: utkolekar@gmail.com|Vijaya Karnataka•
joyful moments of siddheswara shri garden inauguration
ಸಿದ್ಧೇಶ್ವರ ಶ್ರೀ ಕನಸು ನನಸು

ವಿಕ ಸುದ್ದಿಲೋಕ ಇಂಡಿ
‘‘ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಸದಾ ನಿರ್ಸಗದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ ನಿಸರ್ಗದಲ್ಲಿದೇವರನ್ನು ಕಾಣಿ ಎಂದು ತಮ್ಮ ವಾಣಿಯಲ್ಲಿಜನರನ್ನು ಜಾಗೃತಗೊಳಿಸುತ್ತಿದ್ದರು. ಅವರ ಕನಸು ಇಂದು ನನಸಾಗಿದೆ’’ ಎಂದು ವೈವಿಪಿ ಫೌಂಡೇಶನ್ ಪಡನೂರ ಗೌರವಾಧ್ಯಕ್ಷೆ, ಶಾಸಕ ಯಶವಂತರಾಯಗೌಡ ಪಾಟೀಲ ಪುತ್ರಿ ಶಿವಲೀಲಾಗೌಡತಿ ಪಾಟೀಲ ಹೇಳಿದರು.

ಸಮೀಪದ ಸಾವಳಸಂಗ ಗುಡ್ಡದ ಪ್ರದೇಶದಲ್ಲಿಸಿದ್ಧೇಶ್ವರ ಶ್ರೀ ವೃಕ್ಷೋದ್ಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘‘ಶ್ರೀಗಳ ಹೆಸರಿನಲ್ಲೇ ಒಂದು ಶಕ್ತಿ ಅಡಗಿದೆ. ವೃಕ್ಷೋದ್ಯಾನ ಪ್ರವೇಶ ಮಾಡುತ್ತಿದಂತೆ ರೋಮಾಂಚನದ ಅನುಭವವಾಗುತ್ತದೆ. ಅವರು ಬಿಟ್ಟು ಹೋದ ಕುರುಹಗಳು ನಮ್ಮಗೆಲ್ಲಪ್ರೇರಣೆಯಾಗಬೇಕು’’ ಎಂದರು.

ಬಸವಲಿಂಗ ಶ್ರೀ, ಅಮೃತಾನಂದ ಶ್ರೀ, ಅಮೋಘ ಸಿದ್ದೇಶ್ವರ ಸ್ವಾಮೀಜಿ, ಶಾಸಕ ಯಶವಂತರಾಯಗೌಡ ಪಾಟೀಲ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್ .ಕವಲಗಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ ಮತ್ತಿತರರು ಇದ್ದರು.

ಪೋಟೋ - 31 ಇಂಡಿ02*

ಸಾವಳಸಂಗ ಗುಡ್ಡದ ಪ್ರದೇಶದಲ್ಲಿಸಿದ್ಧೇಶ್ವರ ಶ್ರೀ ವೃಕ್ಷೋದ್ಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಲೀಲಾಗೌಡತಿ ಪಾಟೀಲ ಮಾತನಾಡಿದರು.

ಓದಲೇ ಬೇಕಾದ ಸುದ್ದಿ