ಇನ್ನೊಬ್ಬರ ಪ್ರಾಣಕ್ಕೆ ಕುತ್ತು ಬಂದಾಗ ಬಹು ಮುಖ್ಯವಾಗಿ ಬೇಕಿರುವ ರಕ್ತವನ್ನು ದಾನವಾಗಿಯೋ ಅಥವಾ ಬೇರೆ ಮೂಲಕವಾಗಿಯೋ ವ್ಯವಸ್ಥೆ ಮಾಡುವುದರಿಂದ ಒಂದು ಜೀವದ ಮೂಲಕ ಒಂದು ಕುಟುಂಬವನ್ನು ಕಾಪಾಡಿದಂತಾಗುತ್ತದೆ. ಅಂತಹ ಸೇವೆ ನಿಜಕ್ಕೂ ಸಾರ್ಥಕವೆನಿಸಿದೆ ಎಂದು ಮೆಗಾಪ್ಯಾನ್ಸ್ ಅಸೋಸಿಯೇಷನ್ ನ ಸಿ.ವಿ. ನಾಗರಾಜು ತಿಳಿಸಿದರು.ಅವರ ರಕ್ತದಾನ ಸೇವೆ ಗುರುತಿಸಿ ಬೆಂಗಳೂರಿನ ಯಲಹಂಕದಲ್ಲಿರುವ ಬಿಎಸ್ ಎಫ್ ಕಚೇರಿಯಲ್ಲಿಬಿಎಸ್ ಎಫ್ ಇನ್ ಸ್ಪೆಕ್ಟರ್ ಜನರಲ್ (ಮೆಡಿಕಲ್ ) ವತಿಯಿಂದ ಸರ್ಟಿಫಿಕೆಟ್ ಆಫ್ ಔಟ್ ಸ್ಟ್ಯಾಂಡಿಂಗ್ ಕಾಂಟ್ರಿಬ್ಯೂಷನ್ ಪ್ರಶಂಸಾ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ರಕ್ತದಾನ ಕೇವಲ ದಾನವಲ್ಲ, ಅಪಾಯದಲ್ಲಿರುವ ಜೀವವೊಂದಕ್ಕೆ ನೆರವಾಗುವ ಮಹತ್ವದ ಮಾನವೀಯ ಕಾರ್ಯ. ಆ ನಿಟ್ಟಿನಲ್ಲಿಯುವ ಜನರನ್ನು ಹಾಗೂ ಸಾರ್ವಜನಿಕರನ್ನು ರಕ್ತದಾನದತ್ತ ಪ್ರೇರೇಪಿಸಿ, ಅಗತ್ಯವಿರುವವರಿಗೆ ರಕ್ತ ಲಭ್ಯವಾಗುವಂತೆ ನೆರವು ನೀಡುತ್ತಿರುವುದು ನಿಜಕ್ಕೂ ಸಾರ್ಥಕವೆನಿಸಿದೆ. ಇದೀಗ ಈ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಸನ್ಮಾನ ಕಾರ್ಯಕ್ರಮದಲ್ಲಿಮಾರ್ಟಿನ್ , ರಾಮಾಂಜಿ, ರಮೇಶ್ , ನರೇಶ್ ಸೇರಿದಂತೆ ಬಿಎಸ್ ಎಫ್ ಸಿಬ್ಬಂದಿ ಉಪಸ್ಥಿತರಿದ್ದು, ನಾಗರಾಜು ಅವರ ಸಮಾಜಮುಖಿ ಸೇವೆಯನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲೂಇದೇ ರೀತಿಯ ಮಾನವೀಯ ಸೇವಾ ಕಾರ್ಯಗಳನ್ನು ಮುಂದುವರಿಸುವಂತೆ ಶುಭ ಹಾರೈಸಿದರು.
30ಸಿಎಮ್ ವೈವಿ6
ಚಿಂತಾಮಣಿಯ ಸಿ.ವಿ. ನಾಗರಾಜ್ ಅವರಿಗೆ ಯಲಹಂಕದ ಬಿಎಸ್ ಎಫ್ ಕಚೇರಿಯಲ್ಲಿಅಧಿಕಾರಿಗಳು ಅಭಿನಂದಿಸಿದರು.