ಹಳ್ಳಿಗಳ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಪ್ರಮುಖ

Contributed by: puru.dpete1987@gmail.com|Vijaya Karnataka•
new heights for village development through cooperative sector
-ಜಿಲ್ಲಾಮಟ್ಟದ ಪ್ರೌಢಶಾಲೆ, ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ವಿಕ ಸುದ್ದಿಲೋಕ ಚಾಮರಾಜನಗರ
ಸಹಕಾರ ಕ್ಷೇತ್ರ ಬಹಳ ವಿಸ್ತಾರವಾಗಿ ಬೆಳೆದಿದ್ದು, ಹಳ್ಳಿಗಳ ಅಭಿವೃದ್ಧಿಯಲ್ಲಿಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಜಿಲ್ಲಾಸಹಕಾರ ಯೂನಿಯನ್ ಅಧ್ಯಕ್ಷ, ಚಾಮುಲ್ ನಿರ್ದೇಶಕ ಎಚ್ .ಎಸ್ .ನಂಜುಂಡಪ್ರಸಾದ್ ತಿಳಿಸಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರಾಜ್ಯ ಸಹಕಾರ ಮಹಾಮಂಡಲ, ಚಾಮರಾಜನಗರ ಜಿಲ್ಲಾಸಹಕಾರ ಯೂನಿಯನ್ , ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘‘ನಮ್ಮ ದೇಶ ಹಳ್ಳಿಗಳಿಂದ ಕೂಡಿದ ರೈತಾಪಿ ವರ್ಗವನ್ನು ಹೊಂದಿರುವ ದೊಡ್ಡ ರಾಷ್ಟ್ರ. ರೈತರೇ ಈ ದೇಶದ ಬೆನ್ನೆಲುಬು. ಸಹಕಾರ ಕ್ಷೇತ್ರ ಬೆಳೆದಷ್ಟು ಈ ಪ್ರದೇಶದ ಜನರು, ಆ ವೃತ್ತಿಯಲ್ಲಿರುವವರು ಆರ್ಥಿಕಾಭಿವೃದ್ಧಿ ಹೊಂದುತ್ತಾರೆ. ಇದಕ್ಕೆ ಉತ್ತಮ ನಿದರ್ಶನ ನಮ್ಮ ಸಹಕಾರ ಹಾಲು ಮಹಾಮಂಡಲ ನಮ್ಮ ಕಣ್ಮುಂದೆಯೇ ಇದೆ,’’ಎಂದು ತಿಳಿಸಿದರು.

ನಿರ್ದೇಶಕರಾದ ಎಚ್ .ಎಂ.ಬಸವಣ್ಣ, ಮುದ್ದಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿಜಿಲ್ಲಾಸಹಕಾರ ಯೂನಿಯನ್ ನಿರ್ದೇಶಕ ಎಂ.ಎಂ. ಪ್ರಭುಸ್ವಾಮಿ, ತೀರ್ಪುಗಾರರಾಗಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಮಲ್ಲೇಶ್ , ಮೈಸೂರಿನ ಕೆ.ಐ.ಸಿ.ಎಂ. ಪ್ರಾಂಶುಪಾಲೆ ಪಿ.ಗೀತಾ, ಜಿಲ್ಲಾಸಹಕಾರ ಯೂನಿಯನ್ ಸಿಇಒ ಮನುಜ, ಮ್ಯಾನೇಜರ್ ಮಲ್ಲಿಕಾರ್ಜುನ್ , ನೌಕರರಾದ ಮಲ್ಲೇಶ್ , ಕೆಂಡಗಣ್ಣಸ್ವಾಮಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಂದ ಉಪನ್ಯಾಸಕರು, ಶಿಕ್ಷಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಿಎಚ್ ಎನ್ 29ಎಸ್ ಎಂಆರ್ 3

ಚಾಮರಾಜನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆದ ಜಿಲ್ಲಾಮಟ್ಟದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಯೂನಿಯನ್ ಅಧ್ಯಕ್ಷ ಎಸ್ .ಎಸ್ . ನಂಜುಂಡಪ್ರಸಾದ್ ಬಹುಮಾನ ವಿತರಿಸಿದರು.