ವಿದ್ಯಾರ್ಥಿಗಳಿಗೆ ಭತ್ತ ನಾಟಿ ಅರಿವು

Contributed by: sureshcheriyamane@gmail.com|Vijaya Karnataka•
paddy cultivation awareness of agriculture without the language barrier for students
--------------

ವಿದ್ಯಾರ್ಥಿಗಳಿಗೆ ಭತ್ತ ನಾಟಿ ಅರಿವು
*ಸಂಸ್ಕೃತಿ ಉಳಿವಿಗೆ ಸಂಘ-ಸಂಸ್ಥೆಗಳು ಮುಂದಾಗಬೇಕು | ಉದ್ಯಮಿ ಶರಣ್ ಪೂಣಚ್ಚ ಹೇಳಿಕೆ

ವಿಕ ಸುದ್ದಿಲೋಕ ಶನಿವಾರಸಂತೆ

ಸಂಘ-ಸಂಸ್ಥೆಗಳು ಭತ್ತ ನಾಟಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಜನರಲ್ಲಿಕೃಷಿ ಹಾಗೂ ನಶಿಸುತ್ತಿರುವ ಗದ್ದೆಗಳಲ್ಲಿಭತ್ತ ನಾಟಿ ಮಾಡುವ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಶರಣ್ ಪೂಣಚ್ಚ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಸಮೀಪದ ಕಡ್ಲೆಮಕ್ಕಿ ಗ್ರಾಮದ ಕೃಷ್ಣಪ್ಪ ಅವರ ಗದ್ದೆಯಲ್ಲಿಆಯೋಜಿಸಿದ್ದ 2ನೇ ವರ್ಷದ ಭತ್ತ ನಾಟಿ ಹಾಗೂ ಮಕ್ಕಳಿಗೆ ನಾಟಿ ಪದ್ಧತಿಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘‘ಗದ್ದೆಗಳಲ್ಲಿಭತ್ತ ನಾಟಿ ಮಾಡುವುದರಿಂದ ಭೂಮಿಯಲ್ಲಿನೀರಿನ ಮಟ್ಟ ಹೆಚ್ಚಾಗುವುದರ ಜತೆಗೆ ಪರಿಸರ ಸಮೃದ್ಧಿಯಾಗುತ್ತದೆ. ಇದರಿಂದ ಪ್ರಕೃತಿಗೆ ಕೊಡುಗೆ ನೀಡಿದಂತಾಗುತ್ತದೆ,’’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ವಿಶ್ವ ಕುಂಬೂರು ವಹಿಸಿದ್ದರು. ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ, ವಿರಾಜಪೇಟೆ ಘಟಕದ ಅಧ್ಯಕ್ಷ ರಜಿತ್ ಕುಮಾರ್ ಗುಹ್ಯ, ಗದ್ದೆ ಮಾಲೀಕ ಕೃಷ್ಣಪ್ಪ, ಪ್ರೆಸ್ ಕ್ಲಬ್ ನಿರ್ದೇಶಕ ತೇಜಸ್ ಪಾಪಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಮುಳ್ಳೂರು, ಪತ್ರಕರ್ತರಾದ ವಿಜಯ್ ಹಾನಗಲ್ , ಲಕ್ಷ್ಮಿಕಾಂತ್ ಕೊಮರಪ್ಪ, ಬಿ.ಇ.ಭಾಸ್ಕರ್ , ಹಿರಿಕರ ರವಿ ಹಾಗೂ ದಿನೇಶ್ ಮಾಲಂಬಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿಸರ್ಕಾರಿ ಶಾಲೆಯ ಮಕ್ಕಳು ಉತ್ಸಾಹದಿಂದ ಗದ್ದೆಗೆ ಇಳಿದು ಭತ್ತ ನಾಟಿ ಮಾಡುವ ಮೂಲಕ ಹೊಸ ಅನುಭವ ಪಡೆದರು. ವಸತಿ ಶಾಲೆಯ ಸಿಬ್ಬಂದಿಯೂ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.

ಈ ಸಂದರ್ಭದಲ್ಲಿಗದ್ದೆ ಮಾಲೀಕ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

*ಫೋಟೊ ಇದೆ

ಕಡ್ಲೆಮಕ್ಕಿ ಗ್ರಾಮದ ಕೃಷ್ಣಪ್ಪ ಅವರ ಗದ್ದೆಯಲ್ಲಿಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ನಡೆದ ಭತ್ತ ನಾಟಿ ಕಾರ್ಯಕ್ರಮದಲ್ಲಿಪತ್ರಕರ್ತರು, ಉದ್ಯಮಿ ಶರಣ್ ಪೂಣಚ್ಚ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.