ನಿಧನ

Contributed by: prasadsarali@gmail.com|Vijaya Karnataka•
progressive farmer karimbila keshava prabhu from kerala passes away
ಕರಿಂಬಿಲ ಕೇಶವ ಪ್ರಭು

ಬದಿಯಡ್ಕ: ಕೇರಳಂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉದ್ಯೋಗಿ, ಪ್ರಗತಿಪರ ಕೃಷಿಕ ಕರಿಂಬಿಲ ಕೇಶವ ಪ್ರಭು(90) ನಿಧನರಾದರು. ಸೂರಂಬೈಲ್ ಶಾಲೆಯಲ್ಲಿಪೇದೆಯಾಗಿ ಸರಕಾರಿ ಕೆಲಸಕ್ಕೆ ನಿಯುಕ್ತರಾದ ಅವರು ಬಳಿಕ ಮಲೇರಿಯ ನಿಯಂತ್ರಣ ಬೋರ್ಡ್ ನಲ್ಲಿಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಕೇರಳ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆಗೊಂಡು ಪೆರ್ಲ ಚೆಕ್ ಪೋಸ್ಟ್ ಸಹಿತ ಕಣ್ಣೂರು, ಕಾಸರಗೋಡು ಜಿಲ್ಲೆಯ ನಾನಾ ಕಡೆಗಳಲ್ಲಿ35 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಪ್ರಗತಿಪರ ಕೃಷಿಕರಾದ ಅವರು ಅಡಿಕೆ ತೋಟ ಕೃಷಿಯ ಜತೆ ಗದ್ದೆ ಬೇಸಾಯದಲ್ಲೂತೊಡಗಿಸಿಕೊಂಡಿದ್ದರು. ಕುಟ್ಟಿಪುಂಜೆ ಎಂಬ ಭತ್ತದ ಬೆಳೆಯನ್ನು ಕಾಸರಗೋಡು ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಬೆಳೆಸಿ ಬಳಿಕ 25 ವರ್ಷಗಳ ಕಾಲದ ಗದ್ದೆ ಬೇಸಾಯದಲ್ಲಿಭತ್ತದ ತಳಿಯ ಬೆಳ್ಳಿ ಹಬ್ಬವನ್ನಾಚರಿಸಿ ಯಶಸ್ವಿಯಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರಲ್ಲಿಒಬ್ಬರು ಈ ಹಿಂದೆಯೇ ತೀರಿಕೊಂಡಿದ್ದಾರೆ.
31 ಬಿಎ ಪ್ರಭು

ಓದಲೇ ಬೇಕಾದ ಸುದ್ದಿ