ಚಾಂಗಲೇರಾ ಪಿಎಚ್ ಸಿಗೆ ಬೇಕಿದೆ ಕಾಯಕಲ್ಪ

Contributed by: Vijaykumar.belde@timesofindia.com|Vijaya Karnataka•
revitalization needed for changalera phc the deteriorating health center
ಚಿತ್ರ:ಚಾಂಗಲೇರಾ1: ಚಿಟಗುಪ್ಪಾ ತಾಲೂಕಿನ ಚಾಂಗಲೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರನೋಟ.

ಚಿತ್ರ:ಚಾಂಗಲೇರಾ2: ಚಿಟಗುಪ್ಪಾ ತಾಲೂಕಿನ ಚಾಂಗಲೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳನೋಟ.
ಚಿತ್ರ:ಚಾಂಗಲೇರಾ1: ಅವ್ಯವಸ್ಥೆಯ ಆಗರವಾದ ಚಿಟಗುಪ್ಪಾ ತಾಲೂಕಿನ ಚಾಂಗಲೇರಾ ಪ್ರಾಥಮಿಕ ಆರೋಗ್ಯ ಕೇಂದ್ರ .

* ಸೌಲಭ್ಯ ವಂಚಿತ ಸರಕಾರಿ ಆಸ್ಪತ್ರೆ | ಆಸ್ಪತ್ರೆಗಿಲ್ಲನೀರಿನ ಸಂಪರ್ಕ

ಚಾಂಗಲೇರಾ ಪಿಎಚ್ ಸಿಗೆ ಬೇಕಿದೆ ಕಾಯಕಲ್ಪ

ವಿಜಯಕುಮಾರ ಬೆಲ್ದೆ ಚಿಟಗುಪ್ಪ (ಬೀದರ್ )

ಗ್ರಾಮೀಣ ಭಾಗದ ಬಡಜನರಿಗೆ ಸಂಜೀವಿನಿಯಾಗಬೇಕಿದ್ದ ಚಾಂಗಲೇರಾ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ ಸಿ) ಸರಕಾರಿ ಆಸ್ಪತ್ರೆಯೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ನರಳುವಂತಾಗಿದೆ.

ಸುಸಜ್ಜಿತ ಕಟ್ಟಡವಿದ್ದರೂ ಮೂಲಸೌಕರ್ಯಗಳಿಲ್ಲ. ಆಸ್ಪತ್ರೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ವರ್ಷಗಳೇ ಕಳೆದಿವೆ. ಆದರೆ ಈ ಕಡೆ ಜಿಲ್ಲಾಡಳಿತ ಗಮನಹರಿಸದಿರುವುದು ವಿಪರ್ಯಾಸ. ಹಳ್ಳಿಗಳ ಜನರಿಗೆ ಸ್ಥಳದಲ್ಲೇ ಉತ್ತಮ ವೈದ್ಯಕೀಯ ಸೇವೆ ಸಿಗಲೆಂಬ ಉದ್ದೇಶದಿಂದ ಸರಕಾರ ಕೋಟ್ಯಂತರ ರೂ. ವೆಚ್ಚದಲ್ಲಿಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸುತ್ತದೆ. ಆದರೆ ಚಾಂಗಲೇರಾದಲ್ಲಿಕಟ್ಟಡ ಸುಂದರವಾಗಿದ್ದರೂ ಅಲ್ಲಿಅಗತ್ಯವಿರುವ ಮೂಲಸೌಕರ್ಯ ಇಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಆಸ್ಪತ್ರೆ ಇದ್ದರೂ ಚಿಕಿತ್ಸೆ ಸಿಗದೆ ರೋಗಿಗಳು ನೆರೆಯ ಮನ್ನಾಏಖೇಳ್ಳಿ ಅಥವಾ ಬೇಮಳಖೇಡ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಉಳ್ಳವರು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ತೆತ್ತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ತಕ್ಷಣ ಎಚ್ಚೆತ್ತು ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಕಾಯಕಲ್ಪ ನೀಡಬೇಕು ಎಂದು ಜನಾಗ್ರಹ ಕೇಳಿ ಬಂದಿದೆ.

*ಬಾಕ್ಸ್

3 ತಿಂಗಳಿಂದ ಶೂನ್ಯ ಹೆರಿಗೆ

ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಓರ್ವ ವೈದ್ಯಾಧಿಕಾರಿ, ತರಬೇತಿ ಪಡೆದ ಮೂವರು ಹಿರಿಯ ಶುಶ್ರೂಷಕಿಯರು (ಸ್ಟಾಫ್ ನರ್ಸ್ ), ಓರ್ವ ಫಾರ್ಮಾಸಿಸ್ಟ್ ಹಾಗೂ ಗ್ರೂಪ್ -ಡಿ ನೌಕರರಿದ್ದಾರೆ. ಆದರೆ ಹೆರಿಗೆ ಮಾಡಿಸಲು ಬೇಕಾದ ಕನಿಷ್ಠ ಮೂಲಸೌಕರ್ಯಗಳೂ ಇಲ್ಲಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ. ಹೀಗಾಗಿ ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲಿಒಂದೇ ಒಂದು ಹೆರಿಗೆ ಸಹ ನಡೆದಿಲ್ಲಎಂಬ ಆರೋಪಗಳು ಜನರಿಂದ ಕೇಳಿಬರುತ್ತಿದೆ. ಆಸ್ಪತ್ರೆ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ ಗಳು ಕೆಳಗೆ ಬಿದ್ದು ಒಡೆದು ಹೋಗಿವೆ. ಸೋಲಾರ್ ವಾಟರ್ ಹೀಟರ್ ಹಾಳಾಗಿ ವರ್ಷವೇ ಕಳೆಯಿತು. ಆಸ್ಪತ್ರೆಗೆ ಕನಿಷ್ಠ ನೀರಿನ ಸಂಪರ್ಕವೇ ಇಲ್ಲದಿರುವಾಗ ಹೆರಿಗೆ ಮಾಡಿಸುವುದು ಹೇಗೆ? ಎಂದು ಹೆಸರು ಹೇಳಲಿಚ್ಛಿಸದ ಕರ್ತವ್ಯನಿರತ ನರ್ಸ್ ಒಬ್ಬರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

*ಬಾಕ್ಸ್

ಹಾಜರಿಗಷ್ಟೇ ಸೀಮಿತ ಸಿಬ್ಬಂದಿ

ಇಲ್ಲಿನ ವೈದ್ಯಾಧಿಕಾರಿ ಬೆಳಗ್ಗೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ ಹೋದರೆ ಮತ್ತೆ ಅವರ ದರ್ಶನ ಸಿಗುವುದಿಲ್ಲ. ಹಗಲು ಹೊತ್ತು ಅಲ್ಲದೆ ರಾತ್ರಿಯಲ್ಲೂಅದೇ ಸಮಸ್ಯೆಯಿದೆ. ಕರ್ತವ್ಯದ ಬಗ್ಗೆ ಪ್ರಶ್ನಿಸಿದರೆ ಯಾರು ಬಂದ್ರೂ ನನಗೇನೂ ಮಾಡಕ್ಕಾಗಲ್ಲಎಂಬ ಉಡಾಫೆಯ ಉತ್ತರ ವೈದ್ಯಾಧಿಕಾರಿಯಿಂದ ಬರುತ್ತಿದೆ ಎಂದು ದೂರುತ್ತಾರೆ ಗ್ರಾಮಸ್ಥರು. ಇನ್ನು ತುರ್ತು ಸೇವೆಗೆ ಬಳಕೆಯಾಗಬೇಕಾದ ಆಂಬುಲೆನ್ಸ್ ಕೇವಲ ಪ್ರದರ್ಶನದ ವಸ್ತುವಾಗಿದೆ. ಆಂಬುಲೆನ್ಸ್ ಚಾಲಕ ಹಾಜರಿ ಹಾಕಿ ಮನೆಗೆ ಹೋದರೆ ದಿನವಿಡೀ ವಾಪಸ್ ಬರುವುದೇ ಇಲ್ಲ. ಆಸ್ಪತ್ರೆಯ ದುಸ್ಥಿತಿ ಕುರಿತು ಸಾರ್ವಜನಿಕರು ಹಲವು ಬಾರಿ ದೂರು ನೀಡಿದ್ದರೂ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ವ್ಯವಸ್ಥೆ ಸರಿಪಡಿಸಲು ಹಿರಿಯ ಅಧಿಕಾರಿಗಳಿಗೆ ಸಮಯವೇ ಇಲ್ಲದಂತಾಗಿದೆ.

*ಕೋಟ್

ಚಾಂಗಲೇರಾ ಆಸ್ಪತ್ರೆಯ ಅವ್ಯವಸ್ಥೆ ಸುಧಾರಣೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸಣ್ಣ-ಪುಟ್ಟ ಕೆಲಸಗಳಾಗಿವೆ. ನೀರಿನ ಟ್ಯಾಂಕ್ ಅಳವಡಿಸಲಾಗುತ್ತಿದೆ. ಮುಂಬರುವ ಒಂದು ವಾರದೊಳಗೆ ಎಲ್ಲಸಮಸ್ಯೆ ಬಗೆಹರಿಸಲಾಗುವುದು.

-ಡಾ.ಹಾದಿ ಎಂ.ಎ. ವೈದ್ಯಾಧಿಕಾರಿ ಪಿಎಚ್ ಸಿ ಚಾಂಗಲೇರಾ

======

ಸುಸಜ್ಜಿತ ಆಸ್ಪತ್ರೆಗೆ ಕಟ್ಟಡವಿದೆ. ಆದರೆ ಮೂಲಸೌಲಭ್ಯ ಕೊರತೆ ಕಾಡುತ್ತಿದೆ. ಆಸ್ಪತ್ರೆ ಕನಿಷ್ಠ ನೀರಿನ ಸಂಪರ್ಕವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿಕೆಲಸ ಮಾಡುವುದಾದರೂ ಹೇಗೆ? ನಾವು ಸಮಯಕ್ಕೆ ಬಂದು ಹಾಜರಿ ಹಾಕಿ ಕುಳಿತು ಹೋಗುತ್ತೇವೆ. ಸೌಲಭ್ಯ ಇಲ್ಲದ ಕಾರಣ ಜನ ಸಹ ಆಸ್ಪತ್ರೆಗೆ ಬರೋದಿಲ್ಲ.

-ಹೆಸರು ಹೇಳಲಿಚ್ಛಿಸದ ನರ್ಸ್ .

=======

ಚಾಂಗಲೇರಾ ಆಸ್ಪತ್ರೆಯಲ್ಲಿವೈದ್ಯರೇ ಇರುವುದಿಲ್ಲ. ಸ್ಟಾಫ್ ನರ್ಸ್ ಗಳು ಸಹ ಇಲ್ಲ. ಕಟ್ಟಡವಿದೆ. ಆದರೆ ಚಿಕಿತ್ಸೆಯೇ ಸಿಗುವುದಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮೂಲಸೌಲಭ್ಯ ಕಲ್ಪಿಸುವ ಜನತೆಯ ಆರೋಗ್ಯ ರಕ್ಷಿಸಬೇಕು.

-ಪರಮೇಶ್ವರಯ್ಯ ಸ್ವಾಮಿ, ಸ್ಥಳೀಯರು, ಚಾಂಗಲೇರಾ

ಓದಲೇ ಬೇಕಾದ ಸುದ್ದಿ