ಸಾಧನೆಗೆ ಕಠಿಣ ಪರಿಶ್ರಮ ಅವಶ್ಯ

Contributed by: nijaguni.dindalkoppa@timesofindia.com|Vijaya Karnataka•
towards achievement with hard work
31ನಿಜಗುಣಿ4

ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ.ವೀಣಾ ಬಿರಾದಾರ
ಸಾಧನೆಗೆ ಕಠಿಣ ಪರಿಶ್ರಮ ಅವಶ್ಯ

ವಿಕ ಸುದ್ದಿಲೋಕ ಧಾರವಾಡ

ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಅವಶ್ಯ ಎಂದು ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ.ವೀಣಾ ಬಿರಾದಾರ ಹೇಳಿದರು.

ನಗರದ ಮಕ್ಕಳ ಅಕಾಡೆಮಿ ವಿಠ್ಠಲ್ ಆಸ್ಪತ್ರೆಯ ತೇಜ್ ಸಭಾಭವನದಲ್ಲಿಹಮ್ಮಿಕೊಂಡ ತ್ರಿ ಭಾಷಾ ಕವಿಗೋಷ್ಠಿಯಲ್ಲಿವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿಯಶಸ್ಸು ಸಾಧಿಸಬೇಕಾದರೆ ಕರ್ತವ್ಯ ಪ್ರಜ್ಞೆ, ಸಮಯ ಪಾಲನೆ, ಪ್ರಾಮಾಣಿಕತೆ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಇರಬೇಕು ಎಂದರು.

ಮಕ್ಕಳ ಅಕಾಡೆಮಿ ಅಧ್ಯಕ್ಷ ಡಾ.ರಾಜನ್ ದೇಶಪಾಂಡೆ ಮಾತನಾಡಿ, ಮಕ್ಕಳ ಅಕಾಡೆಮಿ ಬೆಳೆದು ಬಂದ ದಾರಿಯನ್ನು ಕುರಿತು ವಿವರಿಸಿದರು.

ಕವಿಗೋಷ್ಠಿಯಲ್ಲಿ80ಕ್ಕಿಂತ ಹೆಚ್ಚು ನಗರ ಹಾಗೂ ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್ , ಹಿಂದಿ ಉರ್ದು ಭಾಷೆಗಳಲ್ಲಿಸ್ವರಚಿತ ಕವನ ವಾಚಿಸಿದರು.

ನಿರ್ಣಾಯಕರಾಗಿ ಶ್ರೀನಿವಾಸ ವಾಡಪ್ಪಿ, ಡಾ.ಯು.ಎ.ಹುಂಡೇಕಾರ, ಡಾ.ಇರ್ಷಾದ ಹುಯಿಲಗೊಳ ಆಗಮಿಸಿದ್ದರು. ಡಾ.ಎನ್ .ಬಿ.ನಾಲತವಾಡ, ಡಾ.ಐ.ಎಸ್ .ಮಾಳೆಕರ್ , ಕವಿತಾ ದೇಶಪಾಂಡೆ ಭಾಗವಹಿಸಿದ್ದರು. ಮಕ್ಕಳ ಅಕಾಡೆಮಿ ಉಪಾಧ್ಯಕ್ಷ ಸಿ.ಯು.ಬೆಳ್ಳಕ್ಕಿ ಸ್ವಾಗತಿಸಿದರು. ಶ್ರೀಕಾಂತ ದೊಡವಾಡ ಪರಿಚಯಿಸಿದರು. ಪ್ರೊ.ಸಿ.ಗು.ಹಿರೇಮಠ ನಿರೂಪಿಸಿ ವಂದಿಸಿದರು.

ಬಾಕ್ಸ್ ..

ಕವಿಗೋಷ್ಠಿ ವಿಜೇತರು:

ಕನ್ನಡ ಭಾಷೆಯಲ್ಲಿವೇದಾಂತ ಬೆಣ್ಣಿ (ಪ್ರಥಮ), ಪ್ರಿಯಾ ಗುಡಿಗೇರಿ (ದ್ವಿತೀಯ), ಸ್ಪೂರ್ತಿ ಮುತ್ತಿ (ತೃತೀಯ), ಶೃತಿ ಗಂಗೇರಿ ಸಮಾಧಾನಕರ ಬಹುಮಾನ ಪಡೆದರು. ಹಿಂದಿ ಭಾಷೆಯಲ್ಲಿಹಜಾರಾ ಮೈಸೂರು (ಪ್ರಥಮ), ಆಧ್ಯಶ್ರೀ ಚಂದಾ (ದ್ವಿತೀಯ), ರುಸ್ಕಾರ ಮುಲ್ಲಾ(ತೃತೀಯ), ಆಸ್ಮೀಯಾ ಬೆಂಗೇರಿ ಸಮಾಧಾನಕರ ಬಹುಮಾನ. ಇಂಗ್ಲೀಷ್ ಭಾಷೆಯಲ್ಲಿರೋಷನ್ ಮೇಶ್ರಮಕರ (ಪ್ರಥಮ), ಧನ್ಯಾ ಹಿರೇಗೌಡರ (ದ್ವಿತೀಯ), ಮನ್ವಿ ದೊಡವಾಡ (ತೃತೀಯ), ಆರಾಧ್ಯಾ ವಾಘಮುಡೆ ಸಮಾಧಾನಕರ ಬಹುಮಾನ ಪಡೆದರು.

ಫೋಟೊ: 31ನಿಜಗುಣಿ4

ಧಾರವಾಡ ಮಕ್ಕಳ ಅಕಾಡೆಮಿ ವಿಠ್ಠಲ್ ಆಸ್ಪತ್ರೆಯ ತೇಜ್ ಸಭಾ ಭವನದಲ್ಲಿಹಮ್ಮಿಕೊಂಡಿದ್ದ ತ್ರಿ ಭಾಷಾ ಕವಿಗೋಷ್ಠಿಯಲ್ಲಿಬಹುಮಾನ ಪಡೆದ ಮಕ್ಕಳೊಂದಿಗೆ ಗಣ್ಯರು.

ಓದಲೇ ಬೇಕಾದ ಸುದ್ದಿ