ತೀರ್ಥಹಳ್ಳಿ ಮಲೆನಾಡು ಸಿರಿ ಸೌಹಾರ್ದ ಸಹಕಾರ ನಿಯಮಿತ ಉದ್ಘಾಟನೆ
ಪಾರದರ್ಶಕ ವ್ಯವಹಾರದಿಂದ ಜನರಲ್ಲಿನಂಬಿಕೆವಿಕಸುದ್ದಿಲೋಕ ತೀರ್ಥಹಳ್ಳಿ
ಗ್ರಾಮೀಣ ಭಾಗದಲ್ಲಿನ ಸಹಕಾರ ಸಂಸ್ಥೆಗಳ ಆರ್ಥಿಕ ವಹಿವಾಟು ಸಮುದಾಯದ ಏಳಿಗೆಯಲ್ಲಿಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಜನರು ಸಂಸ್ಥೆಗಳ ಏಳಿಗೆಗೆ ಸಹಕಾರ ನೀಡುತ್ತಿರುವುದು ಅಭಿವೃದ್ಧಿಗೆ ವೇಗ ನೀಡಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿಸೋಮವಾರ ತೀರ್ಥಹಳ್ಳಿ ಮಲೆನಾಡು ಸಿರಿ ಸೌಹಾರ್ದ ಸಹಕಾರ ನಿಯಮಿತ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಹಿಂದೆ ಸಾಲ ಪಡೆಯಲು ಬ್ಯಾಂಕ್ ನಲ್ಲಿಸರದಿ ನಿಲ್ಲಿಬೇಕಿತ್ತು. ಅಡಕೆ ಬೆಳೆ ಮಲೆನಾಡು ಭಾಗದಲ್ಲಿಜನರಿಗೆ ಆರ್ಥಿಕ ಚೈತನ್ಯ ನೀಡಿದೆ. ಬೆಳೆಗಾರರು ಬ್ಯಾಂಕ್ , ಸಹಕಾರ ಸಂಸ್ಥೆಗಳಲ್ಲಿಹಣವನ್ನು ಠೇವಣಿ ಇರಿಸುತ್ತಿದ್ದಾರೆ. ಹೆಚ್ಚು ಬಡ್ಡಿ ನೀಡಿದರೆ ಇನ್ನಷ್ಟು ಹಣ ಠೇವಣಿ ಇಡುವಂತಹ ಶಕ್ತಿ ದೊರಕಿದೆ. ಸಹಕಾರ ಸಂಸ್ಥೆಗಳು ಪಾರದರ್ಶಕವಾಗಿ ವ್ಯವಹರಿಸಿದಾಗ ಜನರಲ್ಲಿನಂಬಿಕೆ ಪಡೆಯಲು ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆರ್ಶೀವಚನ ನೀಡಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ , ಎಂಎಡಿಬಿ ಅಧ್ಯಕ್ಷ ಆರ್ .ಎಂ.ಮಂಜುನಾಥಗೌಡ, ಸಹ್ಯಾದ್ರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಸವಾನಿ ವಿಜಯದೇವ್ , ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜಶೆಟ್ಟಿ ಮಾತನಾಡಿದರು. ಮಲೆನಾಡು ಸಿರಿ ಸೌಹಾರ್ದ ಸಹಕಾರ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು.