ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮ ಪಂಚಾಯಿತಿಯಲ್ಲಿಸೋಮವಾರ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಸಿಪಿಟಿ ನಿರ್ಮಾಣ ಕಾಮಗಾರಿ ಸ್ಥಳದಲ್ಲಿಯೋಜನೆ ಹಾಗೂ ಜಾಬ್ ಕಾರ್ಡ್ ಮೇಳದ ಕುರಿತು ಜನ ಜಾಗೃತಿ ಅಭಿಯಾನ ಜರುಗಿತು.ಅಭಿಯಾನದಲ್ಲಿಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈ.ಪಿ.ಬೋಳಶೆಟ್ಟಿ ಮಾತನಾಡಿ, ‘‘ಕೂಲಿಕಾರರಿಗೆ ವಿಬಿ-ಜಿ ರಾಮ್ -ಜಿ ಯೋಜನೆ ಉದ್ದೇಶ ಹಾಗೂ ಉಪಯೋಗ ಬಗ್ಗೆ ತಿಳಿಸಿದರು. ಕೂಲಿ ಮೊತ್ತ 370 ರಿಂದ 382 ರೂ. ಗೆ ಹೆಚ್ಚಿಸಿದ್ದು, ವಾರ್ಷಿಕ ಮಾನವ ದಿನಗಳು 100 ರಿಂದ 125ಕ್ಕೆ ಹೆಚ್ಚಳವಾಗಿವೆ. ಸೆಪ್ಟೆಂಬರ್ 15ರ ವರೆಗೆ ಜಾಬ್ ಕಾರ್ಡ್ ಮೇಳ ಆರಂಭವಾಗಿದ್ದು, ಹೊಸ ಉದ್ಯೋಗ ಚೀಟಿ ಹಾಗೂ ಕುಟುಂಬ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕು,’’ಎಂದು ತಿಳಿಸಿದರು.
ತಾಪಂ ಐಇಸಿ ಸಂಯೋಜಕ ಮಲೀಕಜಾನ್ ಮೋಮಿನ್ ಮಾತನಾಡಿ, ‘‘ನೂತನ ಯೋಜನೆಯಡಿ 318 ಕಾಮಗಾರಿ ಮಾಡಲು ಅವಕಾಶವಿದ್ದು, ವಿಬಿ-ಜಿ ರಾಮ್ -ಜಿ ಯೋಜನೆಯಡಿ ಕೂಲಿ ಕೆಲಸದ ಜತೆಗೆ ಕೃಷಿಹೊಂಡ, ದನದ ಶೆಡ್ , ಕುರಿ, ಮೆಕೆ ಸಾಕಾಣಿಕೆಗಾಗಿ ಶೆಡ್ ನಿರ್ಮಾಣ ಸೇರಿದಂತೆ ಹಲವು ವೈಯಕ್ತಿಕ ಕಾಮಗಾರಿಗಳು ಮತ್ತು ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಎಲ್ಲರೂ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು,’’ ಎಂದರು.
ಗ್ರಾಪಂ ಅಧ್ಯಕ್ಷೆ ಶೇಖವ್ವ ತಿಮ್ಮೇಶ, ಕಾರ್ಯದರ್ಶಿ ಸುಶೀಲಾ ವೀರೇಶನವರ, ತಾಂತ್ರಿಕ ಸಹಾಯಕ ಮಹಾಂತೇಶ ರಾಠೋಡ್ , ಗ್ರಾಪಂ ಸದಸ್ಯರಾದ ಹಸನಸಾಬ್ ಬಾರಿಗಿಡದ, ಕೃಷ್ಣಾ ಕಂಬಾರ, ಮಂಜುನಾಥ ಪಮ್ಮಾರ, ಸುರೇಶ ಲಮಾಣಿ, ಈರಪ್ಪ ಮಾದರ, ಲಕ್ಷಿತ್ರ್ಮೕ ಲಮಾಣಿ, ಮಲ್ಲಿಕಾರ್ಜುನ ಶಿಂದೋಗಿ ಹಾಗೂ ಕೂಲಿ ಕಾರ್ಮಿಕರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.
31ಯಕ್ಕಂಡಿ1: ಯಕ್ಕುಂಡಿಯಲ್ಲಿವಿಬಿಧಿ-ಜಿ ರಾಮ್ -ಜಿ ಯೋಜನೆ ಹಾಗೂ ಜಾಬ್ ಕಾರ್ಡ್ ಮೇಳ ಕುರಿತು ಜನ ಜಾಗೃತಿ ಅಭಿಯಾನ ಜರುಗಿತು.