ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮಕ್ಕೆ ಆಗ್ರಹ

Contributed bybhrahmanand.arali@timesgroup.com|Vijaya Karnataka

ಕಲಬುರಗಿಯಲ್ಲಿ ಹೊಸದಾಗಿ ಆರಂಭವಾದ ಬಾಲಕರ ವಸತಿ ನಿಲಯದ ವಾರ್ಡನ್‌ ವಿರುದ್ಧ ರಾಜ್ಯ ಸರಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘ ಪ್ರತಿಭಟನೆ ನಡೆಸಿತು. ವಾರ್ಡನ್‌ ಕಾನೂನು ಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಕಲಿ ಬಿಲ್‌ ಸೃಷ್ಟಿಸಿ ಸರಕಾರಿ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಈತನ ವಿರುದ್ಧ ಕೂಡಲೇ ಕ್ರಮ ಜರುಗಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

anger against hostel warden demand for action

9ಜಿಎಲ್ ಬಿ10

ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.

**

ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ

ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮಕ್ಕೆ ಆಗ್ರಹ

ವಿಕ ಸುದ್ದಿಲೋಕ ಕಲಬುರಗಿ

ನಗರದಲ್ಲಿಹೊಸದಾಗಿ ಪ್ರಾರಂಭವಾದ ಮೆಡಿಕಲ್ , ಎಂಜಿನಿಯರಿಂಗ್ ಬಾಲಕರ ವಸತಿ ನಿಲಯದ ವಾರ್ಡನ್ ಕಾನೂನು ಬಾಹಿರ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.

ವಸತಿ ನಿಲಯ ಖಾಸಗಿ ಕಟ್ಟಡದಲ್ಲಿಪ್ರಾರಂಭಿಸಲು ಅನುಮೋದನೆ ಪಡೆದಿದೆ. ಆದರೆ, ಎರಡು ತಿಂಗಳಿಂದ ಇಲ್ಲಿವಿದ್ಯಾರ್ಥಿಗಳೇ ಇಲ್ಲ. ವಸತಿ ನಿಲಯದ 4 ಅಡಿಗೆ ಸಿಬ್ಬಂದಿಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರದೆ ವಾರ್ಡನ್ ನೇಮಕ ಮಾಡಿಕೊಂಡು ತನಗಾಗಿ ಅಡುಗೆ ಮಾಡಿಸಿಕೊಂಡು ಊಟ ಪ್ರಾರಂಭಿಸಿದ್ದಾರೆ. ನಕಲಿ ಬಿಲ್ ಸೃಷ್ಟಿಸಿ ಅಡುಗೆ ಸಿಬ್ಬಂದಿ ಹೆಸರಿನಲ್ಲಿಹಾಜರಾತಿ ತೋರಿಸಿ ಸರಕಾರದ ಹಣ ಎತ್ತಿಹಾಕುವ ಕುತಂತ್ರ ನಡೆಸಲಾಗುತ್ತಿದೆ ಎಂದು ದೂರಿದರು.

ಈ ಹಿಂದೆ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸರಕಾರದ ಆದೇಶವಿದೆ. ಆದರೆ, ಈತ ಹೊಸ ಅಡುಗೆ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾನೆ ಎಂದು ದೂರಿದರು.

ಈ ವಾರ್ಡನ್ ಹಿಂದಿನಿಂದಲೂ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿಭಾಗಿಯಾಗಿದ್ದು, ಪಿಎಸ್ ಐ ಪರೀಕ್ಷೆ ಅಕ್ರಮ ಹಗರಣದಲ್ಲಿಆರೋಪಿಯಾಗಿದ್ದಾನೆ. ಅಲ್ಲದೆ ರಾಜಕೀಯ ಪುಡಾರಿಯಂತೆ ವರ್ತಿಸುತ್ತಾನೆ. ಕೂಡಲೇ ಈತನನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಪರಶುರಾಮ ಹಡಲಗಿ, ಮೇಘರಾಜ ಕಠಾರೆ, ಕಾಶಿನಾಥ ಬಂಡಿ, ನಾಗರತ್ನ ಮದನಕ, ಮಮ್ಮದ ಜಮಿರೋದ್ದಿನ್ ಬಾಬಾ, ರಾಮಚಂದ್ರ ಪವಾರ, ಅಲ್ಲಾ ಪಟೇಲ್ ಇತರರಿದ್ದರು.