ರೋಗಕ್ಕೆ ಬಸವಳಿದ ಮಾವು

Contributed bygurudatta.bhat@timesofindia.com|Vijaya Karnataka

ಹಾವೇರಿ ಜಿಲ್ಲೆಯ ಮಾವು ಬೆಳೆಗಾರರು ಬ್ಲಾಸಮ್‌ ಬ್ಲೈಟ್‌ ರೋಗದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಡಿಸೆಂಬರ್‌ನಲ್ಲಿ ಆದ ಹವಾಮಾನ ಬದಲಾವಣೆಯಿಂದಾಗಿ ಶೇ.80 ರಷ್ಟು ಮಾವಿನ ಬೆಳೆ ಹಾನಿಯಾಗಿದೆ. ಹೂವುಗಳು ಒಣಗಿ ಉದುರುತ್ತಿವೆ. ಇದರಿಂದ ರೈತರ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರೈತರು ಸರ್ಕಾರದಿಂದ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

haveri mango crops severely affected by blossom blight disease

ಬ್ಲಾಸಮ್ ಬ್ಲೈಟ್ ರೋಗ: ಬೆಳೆಗಾರರಿಗೆ ಸಂಕಷ್ಟ

ಗುರುದತ್ತ ಭಟ್ ಹಾವೇರಿ

ಘ್ಕಿಜ್ಠ್ಟ್ಠdaಠಿಠಿa.ಚಿhaಠಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಕೆಲ ತಿಂಗಳ ಹಿಂದಿನ ಹವಾಮಾನ ಬದಲಾವಣೆ ಜಿಲ್ಲೆಯ ಮಾವು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಬಹುತೇಕ ಮಾವಿನ ಬೆಳೆ ಬ್ಲಾಸಮ್ ಬ್ಲೈಟ್ ಗೆ (ಹೂವು ತೆನೆ ಒಣಗುವ ರೋಗ) ತುತ್ತಾಗಿದೆ.

ಉತ್ತರ ಕರ್ನಾಟಕದಲ್ಲಿಹಾವೇರಿ ಕೂಡ ಪ್ರಮುಖವಾಗಿ ಮಾವು ಬೆಳೆಯುವ ಜಿಲ್ಲೆಯಾಗಿದೆ. ಆಲ್ಫಾನ್ಸೊ ಹೆಚ್ಚಾಗಿ ಬೆಳೆಯುವ ಮಾವಿನ ತಳಿಯಾಗಿದ್ದು, ಉಳಿದಂತೆ ಬದಾಮ್ , ಕೇಸರ್ ಮೊದಲಾದ ತಳಿಯ ಹಣ್ಣುಗಳು ಸಹ ಅಲ್ಪ ಪ್ರಮಾಣದಲ್ಲಿಬೆಳೆಯಲಾಗುತ್ತಿದೆ.

ಜಿಲ್ಲೆಯಲ್ಲಿಒಟ್ಟು 4,888 ಹೆಕ್ಟೇರ್ ಪ್ರದೇಶದಲ್ಲಿಮಾವಿನ ಬೆಳೆ ಇದೆ. ಡಿಸೆಂಬರ್ ನಲ್ಲಿದಾಖಲಾದ ಅತಿ ತಂಪಾದ ವಾತಾವರಣ ಮತ್ತು ನಿರಂತರ ಹೆಚ್ಚಿದ ತೇವಾಂಶದಿಂದಾಗಿ ಮಾವಿನ ತೋಟಗಳಲ್ಲಿಬ್ಲಾಸಮ್ ಬೈ್ಲಟ್ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ.

ತೋಟಗಾರಿಕೆ ಇಲಾಖೆಯ ಸಮೀಕ್ಷೆಯ ಪ್ರಕಾರ, ಈ ರೋಗದ ಪರಿಣಾಮ ಮಾವಿನ ಹೂವುಗಳು ಅರಳಿದ ತಕ್ಷಣವೇ ಒಣಗಿ ಉದುರುತ್ತಿವೆ. ಹೂವುಗಳು ಕಪ್ಪು ಬಣ್ಣಕ್ಕೆ ತಿರುಗಿ ತೆನೆಗಳು ಸೊರಗುತ್ತಿರುವುದು ಅನೇಕ ತೋಟಗಳಲ್ಲಿಕಂಡುಬಂದಿದೆ. ಪರಿಣಾಮ ಫಲಧಾರಣೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

ಅಪಾರ ಹಾನಿ:

ಜಿಲ್ಲೆಯ ಹಾನಗಲ್ ತಾಲೂಕೊಂದರಲ್ಲೇ 3310 ಹೆಕ್ಟೇರ್ ಮಾವಿನ ಬೆಳೆ ಇದೆ. ಶಿಗ್ಗಾವಿ ತಾಲೂಕಿನಲ್ಲಿ1210 ಹೆಕ್ಟೇರ್ ಮಾವು ಇದೆ. ಉಳಿದಂತೆ ಬ್ಯಾಡಗಿ, ರಾಣೆಬೆನ್ನೂರು, ಹಾವೇರಿ, ಹಿರೇಕೆರೂರ, ರಟ್ಟಿಹಳ್ಳಿ ಮತ್ತು ಸವಣೂರು ತಾಲೂಕುಗಳಿಂದ ಒಟ್ಟು 368 ಹೆಕ್ಟೇರ್ ಮಾವಿದೆ. ಈ ಹಂಗಾಮಿನಲ್ಲಿಜಿಲ್ಲೆಯಾದ್ಯಂತ ಸುಮಾರು ಶೇ.80 ರಷ್ಟು ಮಾವಿನ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ರೈತರ ಕನಸಿಗೆ ಹೊಡೆತ:

ಮಾವು ಬೆಳೆಯು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿಒಂದಾಗಿದೆ. ಸಾವಿರಾರು ರೈತರು ಮಾವು ಬೆಳೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಹೂ ಬಿಡುವ ಮಹತ್ವದ ಹಂತದಲ್ಲೇ ರೋಗ ಬಾಧಿಸಿರುವುದರಿಂದ ವರ್ಷದ ಆದಾಯ ಕೈ ತಪ್ಪುವ ಭೀತಿ ಉಂಟಾಗಿದೆ. ಸಾಕಷ್ಟು ವೆಚ್ಚ ಮಾಡಿ ಗೊಬ್ಬರ, ಔಷಧ, ಕಾರ್ಮಿಕ ವೆಚ್ಚಗಳನ್ನು ಭರಿಸಿದ ರೈತರಿಗೆ ಇದು ದೊಡ್ಡ ಆರ್ಥಿಕ ಹೊಡೆತ ನೀಡಿದೆ.

ಹವಾಮಾನವೇ ಕಾರಣ:

ತೋಟಗಾರಿಕೆ ತಜ್ಞರ ಪ್ರಕಾರ, ಸಾಮಾನ್ಯವಾಗಿ ಮಾವಿನ ಹೂ ಬಿಡುವ ಅವಧಿಯಲ್ಲಿಒಣ ಹವಾಮಾನ ಅಗತ್ಯವಿರುತ್ತದೆ. ಆದರೆ ಈ ಬಾರಿ ಡಿಸೆಂಬರ್ ನಲ್ಲಿತಾಪಮಾನ ಬದಲಾಗಿದ್ದು, ಮಂಜು ಮತ್ತು ತೇವಾಂಶ ಪ್ರಮಾಣ ಹೆಚ್ಚಾಗಿದೆ. ಇಂತಹ ಹವಾಮಾನವು ಶಿಲೀಂಧ್ರ ಸೋಂಕುಗಳಿಗೆ ಅನುಕೂಲಕರವಾಗಿದ್ದು, ಬ್ಲಾಸಮ್ ಬ್ಲೈಟ್ ರೋಗ ವೇಗವಾಗಿ ಹರಡಲು ಕಾರಣವಾಗಿದೆ.

ಅಧಿಕಾರಿಗಳ ಪರಿಶೀಲನೆ:

ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹಾಗೂ ಧಾರವಾಡದ ತೋಟಗಾರಿಕಾ ವಿಜ್ಞಾನಿಗಳ ತಂಡ ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಪ್ರಾಥಮಿಕ ವರದಿ ಸಿದ್ಧಪಡಿಸಲಾಗುತ್ತಿದ್ದು, ಸರಕಾರಕ್ಕೆ ಹಾನಿಯ ವಿವರ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ. ರೋಗ ನಿಯಂತ್ರಣಕ್ಕಾಗಿ ತಜ್ಞರು ಅಗತ್ಯ ಔಷಧ ಸಿಂಪಡಣೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ರೈತರಿಗೆ ಸಲಹೆ ನೀಡುತ್ತಿದ್ದಾರೆ.

ಪರಿಹಾರಕ್ಕೆ ರೈತರ ಆಗ್ರಹ:

ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರು ಸರಕಾರದಿಂದ ತಕ್ಷಣ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಬೆಳೆ ವಿಮೆ ಯೋಜನೆಯಡಿ ಪರಿಹಾರ ಒದಗಿಸುವುದು ಹಾಗೂ ವಿಶೇಷ ಪ್ಯಾಕೇಜ್ ಪ್ರಕಟಿಸುವಂತೆ ರೈತ ಸಂಘಟನೆಗಳು ಆಗ್ರಹ ವ್ಯಕ್ತಪಡಿಸಿವೆ.

ಒಟ್ಟಾರೆ, ಅಸಮಂಜಸ ಹವಾಮಾನ ಮತ್ತು ರೋಗ ಬಾಧೆಯಿಂದ ಹಾವೇರಿ ಜಿಲ್ಲೆಯಲ್ಲಿಈ ಬಾರಿಯ ಮಾವು ಹಂಗಾಮು ನಿರಾಸೆ ಮೂಡಿಸಿದ್ದು, ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ.

ಬಾಕ್ಸ್

ಮಳೆ ಹಾನಿ ಸಮೀಕ್ಷೆ

ಮಂಗಳವಾರ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಆಲಿಕಲ್ಲುಮಳೆಗೆ ಮಾವಿನ ಬೆಳೆ ಹಾನಿಯಾಗಿದ್ದರೂ ಹಾವೇರಿ ಜಿಲ್ಲೆಯಲ್ಲಿಗಂಭೀರ ಪರಿಣಾಮ ಬೀರಿಲ್ಲ. ಕೆಲವೆಡೆ ಅಲ್ಪ ಹಾನಿ ಮಾತ್ರ ಆಗಿದ್ದು ಅದರ ಬಗ್ಗೆಯೂ ಸಮೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ವೋಟ್ :

ಮಾವಿನ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಕೈಗೊಳ್ಳಲಾಗಿದೆ. ಶೇ.80ಕ್ಕೂ ಹೆಚ್ಚು ಹಾನಿಯಾಗಿರುವ ಬಗ್ಗೆ ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಸರಕಾರಕ್ಕೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

-ಸಿದ್ದರಾಮಯ್ಯ ಬರಗಿಮಠ, ಜಿಲ್ಲಾತೋಟಗಾರಿಕಾ ಉಪನಿರ್ದೇಶಕ, ಹಾವೇರಿ.

ಕ್ವೋಟ್

ಕಳೆದ ಡಿಸೆಂಬರ್ ನಲ್ಲಿಅತಿ ತಂಪಾದ ಹವಾಮಾನದಿಂದಾಗಿ ಜಿಲ್ಲೆಯಲ್ಲಿಮಾವಿನ ಬೆಳೆಗೆ ಬ್ಲಾಸಮ್ ಬ್ಲೈಟ್ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ.

-ಡಾ. ಜ್ಞಾನೇಶ್ವರ, ತೋಟಗಾರಿಕಾ ವಿಜ್ಞಾನಿ ಧಾರವಾಡ.

ಫೋಟೊ: 18 ಗುರುದತ್ತ 1;

ಹಾವೇರಿ ತಾಲೂಕಿನ ಮಾವಿನ ತೋಟ.