ಸೆರಗು ಕಿರುಚಿತ್ರಕ್ಕೆ ಪ್ರಶಸ್ತಿ
ವಿಕ ಸುದ್ದಿಲೋಕ ಇಳಕಲ್
ಚೆನ್ನೈನ ಸಿಟ್ಟಣ್ಣವಸಲ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದ್ದ ‘ಸೆರಗು’ ಕಿರುಚಿತ್ರಕ್ಕೆ ಬೆಸ್ಟ್ ಇಂಡಿಯನ್ ಶಾರ್ಟ್ ಫಿಲ್ಮ್ ಪ್ರಶಸ್ತಿ ಲಭಿಸಿದೆ.
ಇಳಕಲ್ ನಗರದ ಬಡನೇಕಾರ ಯಮನಪ್ಪನ ಕಥೆ ಆಧರಿಸಿ ಯುವ ನಿರ್ದೇಶಕ ಸಾಯಿನಾಗ(ನಾಗಲೋಟಿ) ನಿರ್ದೇಶನದಲ್ಲಿಮೂಡಿ ಬಂದಿರುವ ಸೆರಗು ಕಿರುಚಿತ್ರವು ದುಶ್ಚಟದಲ್ಲಿಮುಳುಗಿದ ನೇಕಾರನ ಮನಪರಿವರ್ತನೆ ಮಾಡುವ ಕಥಾ ಹಂದರ ಹೊಂದಿದೆ.
ನಗರದ ಶ್ರೀನಿವಾಸ ಚಿತ್ರಮಂದಿರದಲ್ಲಿಶನಿವಾರ ಚಿತ್ರ ವೀಕ್ಷಿಸಿದ ಗುರುಮಹಾಂತ ಶ್ರೀಗಳು, ‘‘ಬಡವರ ಬದುಕಿಗೆ ಅಂಟಿಕೊಂಡ ದುಶ್ಚಟಗಳನ್ನು ಬಿಡಿಸುವ ಹಿನ್ನೆಲೆಯಲ್ಲಿಸಿದ್ಧಪಡಿಸಿದ ಚಿತ್ರ ನೇಕಾರಿಕೆಯ ಆಗುಹೋಗುಗಳ ಮೇಲೆ ಬೆಳಕು ಚೆಲ್ಲಿದೆ,’’ ಎಂದು ತಿಳಿಸಿದರು.
‘‘ಇಳಕಲ್ ಸೀರೆ ನೇಯ್ಗೆ, ನೇಕಾರನ ಕುರಿತು ಅದ್ಭುತವಾಗಿ ಚಿತ್ರ ನಿರ್ಮಿಸಲಾಗಿದೆ. ಉತ್ತಮ ಸಂದೇಶ ನೀಡುವ ಈ ಚಿತ್ರವನ್ನು ಪ್ರತಿಯೊಬ್ಬ ನೇಕಾರ ವೀಕ್ಷಿಸಿ ಸುಂದರ ಬದುಕು ಸಾಗಿಸಬೇಕು,’’ ಎಂದು ಹೇಳಿದರು.
ನಗರದಲ್ಲಿಸಾಕಷ್ಟು ಶ್ರೀಮಂತರಿದ್ದಾರೆ. ಕನಿಷ್ಠ ಪಕ್ಷ ಒಂದು ಸಾವಿರ ಬಡ ನೇಕಾರರ ಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ಒಮ್ಮೆ ಒಂದು ರೇಷ್ಮೆ ಸೀರೆ ಕೊಡುವಂತಾಗಲಿ ಎಂದು ಆಶಿಸಿದರು. ಬಡ ನೇಕಾರ ಯಮನಪ್ಪ ಅವರ ಪತ್ನಿಗೆ ಒಂದು ಬೆಲೆಬಾಳುವ ರೇಷ್ಮೆ ಸೀರೆ ಮಠದಿಂದ ಕೊಡುವುದಾಗಿ ಶ್ರೀಗಳು ವಾಗ್ದಾನ ಮಾಡಿದರು.
(ಫೋಟೊ:17-ಐಎಲ್ಕೆ-1)-ಇಳಕಲ್ ಶ್ರೀನಿವಾಸ ಚಿತ್ರಮಂದಿರದಲ್ಲಿಪ್ರದರ್ಶನಗೊಳ್ಳುತ್ತಿರುವ ಸೆರಗು ಚಿತ್ರವನ್ನು ವೀಕ್ಷಿಸಿದ ಗುರುಮಹಾಂತ ಶ್ರೀಗಳು.
ಧಿ

