- ರಾಯಬಾಗ ಅಂಗನವಾಡಿ ನೌಕರರಿಂದ ಸಿಡಿಪಿಒಗೆ ಮನವಿ
ವಿಕ ಸುದ್ದಿಲೋಕ ರಾಯಬಾಗ
ಸರಕಾರಿ ಶಾಲೆಗಳಲ್ಲಿಎಲ….ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಿರುವುದನ್ನು ಕೈಬಿಡಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ತಾಲೂಕಿನ ಅಂಗನವಾಡಿ ನೌಕರರು ಮಾ. 23ರಿಂದ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿಅನಿರ್ದಿಷ್ಟಾವಧಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ಸಂಘದ ತಾಲೂಕು ಅಧ್ಯಕ್ಷೆ ಚನ್ನಮ್ಮ ಗಡಕರಿ ಅವರ ನೇತೃತ್ವದಲ್ಲಿಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಕಾಂಬಳೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಐಸಿಡಿಎಸ್ ಯೋಜನೆಯು ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕಳೆದ 50 ವರ್ಷಗಳಿಂದ ಲಕ್ಷಾಂತರ ಮಹಿಳೆಯರು ಕೇವಲ ಗೌರವ ಧನದ ಆಧಾರದ ಮೇಲೆ ಶ್ರಮಿಸುತ್ತಿದ್ದಾರೆ. ಆದರೆ ಅವರಿಗೆ ಇಲ್ಲಿಯವರೆಗೆ ಯಾವುದೇ ಸೇವಾ ಭದ್ರತೆ ಇಲ್ಲಹಾಗೂ ಉದ್ಯೋಗ ಕಾಯಂ ಆಗಿಲ್ಲ. ಸರಕಾರಿ ಶಾಲೆಗಳಲ್ಲಿಎಲ….ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸಿರುವುದರಿಂದ ಸ್ಥಳೀಯ ಅಂಗನವಾಡಿ ಕೇಂದ್ರಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಆದ್ದರಿಂದ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಕೇವಲ 1ನೇ ತರಗತಿಯಿಂದ ಮಾತ್ರ ಶಿಕ್ಷಣ ನೀಡಲು ಅನುಮತಿ ನೀಡಬೇಕು. 2025ರ ಡಿಸೆಂಬರ್ 1 ರಂದು ನಡೆದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿಕೇಂದ್ರ ಸರ್ಕಾರದ ಸಚಿವರು ನೀಡಿದ್ದ ಯಾವುದೇ ಭರವಸೆಗಳು ಈವರೆಗೂ ಈಡೇರಿಲ್ಲ. ಈ ಹಿನ್ನೆಲೆಯಲ್ಲಿಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.
ಸಂಘದ ಪ್ರಮುಖರಾದ ಆಯೇಶಾ ದೇಸಾಯಿ, ಇಂದಿರಾ ಬಾಗೋಜಿ, ಬಂದವ್ವ ತರಾಳ, ಮಹಾದೇವಿ ತರಾಳ, ಭಾರತಿ ನಾವಿ, ಹಾಗೂ ಶೀಲಾ ಕುಲಕರ್ಣಿ ಸೇರಿದಂತೆ ಹಲವಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.
------------------
ಕ್ವೋಟ್ಸ್ ...
ಕೇಂದ್ರ ಮತ್ತು ರಾಜ್ಯ ಸರಕಾರಗಳು ತರುತ್ತಿರುವ ಹೊಸ ಕಾನೂನುಗಳು ದುಡಿಯುವ ವರ್ಗದವರಿಗೆ ಆಘಾತಕಾರಿ ಆಗಿವೆ. ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿಬೃಹತ್ ಮುಷ್ಕರ ನಡೆಸಲಿದ್ದೇವೆ.
- ಚನ್ನಮ್ಮ ಗಡಕರಿ, ತಾಲೂಕು ಅಧ್ಯಕ್ಷೆ
-18ರಾಯಬಾಗ2
ರಾಯಬಾಗ ತಾಲೂಕು ಅಂಗನವಾಡಿ ನೌಕರರ ಸಂಘದಿಂದ ಸಿಡಿಪಿಒಗೆ ಮನವಿ ಸಲ್ಲಿಸಲಾಯಿತು.

