ಗೌರವಧನ ಮಂಜೂರು ಮಾಡಲು ಆಗ್ರಹ

Contributed byVijaykumar.belde@timesofindia.com|Vijaya Karnataka

ಬೀದರ್ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರು ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಕೈಗೊಂಡಿದ್ದರು. ಈ ಕಾರ್ಯಕ್ಕಾಗಿ ಅವರಿಗೆ ಗಳಿಕೆ ರಜೆ ಹಾಗೂ ಗೌರವ ಧನ ಮಂಜೂರು ಮಾಡಿಲ್ಲ. ಕೂಡಲೇ ಈ ಸೌಲಭ್ಯಗಳನ್ನು ನೀಡಬೇಕೆಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಶಿಕ್ಷಕರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

demand for honorarium teachers association petition

ಚಿತ್ರ: 18ಬಿಡಿಆರ್ 3

ರಜೆ ಅವಧಿಯಲ್ಲಿಸಮೀಕ್ಷಾ ಕಾರ್ಯ ಕೈಗೊಂಡ ಜಿಲ್ಲೆಯ ಪ್ರೌಢಶಾಲಾ ಸಹ ಶಿಕ್ಷಕರಿಗೆ ಗಳಿಕೆ ರಜೆ ಹಾಗೂ ಗೌರವ ಧನ ಮಂಜೂರು ಮಾಡುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಘಟಕದ ಪದಾಧಿಕಾರಿಗಳು ಬೀದರ್ ನಲ್ಲಿಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಗಳಿಕೆ ರಜೆ, ಗೌರವಧನ ಮಂಜೂರು ಮಾಡಲು ಆಗ್ರಹ

ವಿಕ ಸುದ್ದಿಲೋಕ ಬೀದರ್

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಕೈಗೊಂಡ ಪ್ರೌಢಶಾಲಾ ಶಿಕ್ಷಕರಿಗೆ ಗಳಿಕೆ ರಜೆ ಹಾಗೂ ಗೌರವ ಧನ ಮಂಜೂರು ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ್ ನೇತೃತ್ವದ ಪದಾಧಿಕಾರಿಗಳ ನಿಯೋಗವು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗೆ ಸಲ್ಲಿಸಿತು. ಜಿಲ್ಲೆಯ ಶಿಕ್ಷಕರು ರಜೆ ಅವಧಿಯಲ್ಲಿಎರಡೂ ಸಮೀಕ್ಷೆ ನಡೆಸಿದ್ದಾರೆ. ನಿಯಮಾನುಸಾರ ಇದುವರೆಗೆ ಗಳಿಕೆ ರಜೆ ಹಾಗೂ ಗೌರವಧನ ನೀಡಿಲ್ಲ. ಗಳಿಕೆ ರಜೆಗಾಗಿ ಹಾಜರಾತಿ ಪತ್ರ ನೀಡಲು ಹಾಗೂ ಗೌರವ ಧನ ಮಂಜೂರು ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಉಪಾಧ್ಯಕ್ಷ ಸೂರ್ಯಕಾಂತ ಸಿಂಗೆ, ಪ್ರಧಾನ ಕಾರ್ಯದರ್ಶಿ ಬಳವಂತರಾವ್ ರಾಠೋಡ್ , ತಾಲೂಕಾಧ್ಯಕ್ಷ ವೈಜಿನಾಥ ಸಾಳೆ, ಚಂದ್ರಕಾಂತ ಚಿಕ್ಕಲೆ, ವಸಂತ ಆಡೆ, ಶಿವಾನಂದ ಕುಂಬಾರ, ಶಾಂತಕುಮಾರ ಹುಮನಾಬಾದೆ ಇದ್ದರು.