ಪ್ರಬುದ್ಧ, ಪಾರ್ಕಿಂಗ್ ಶೆಡ್ ಧರೆಗೆ

Contributed bybhrahmanand.arali@timesgroup.com|Vijaya Karnataka

ಕಲಬುರಗಿಯಲ್ಲಿರುವ ಪ್ರಬುದ್ಧ ಅಕಾಡೆಮಿಯ ಕೋಟ್ಯಂತರ ರೂ. ವೆಚ್ಚದ ಪಾರ್ಕಿಂಗ್‌ ಶೆಡ್‌ ಭಾರಿ ಮಳೆ ಮತ್ತು ಗಾಳಿಗೆ ನೆಲಕ್ಕುರುಳಿದೆ. ಕಳೆದ ತಿಂಗಳು ಉಪಹಾರ ಕೊಠಡಿಯ ಛಾವಣಿ ಕುಸಿದಿತ್ತು. ಇದೀಗ ಮತ್ತೊಂದು ಘಟನೆ ನಡೆದಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

prabuddha academy parking shed collapses after heavy rain

ಚಿತ್ರ: ಪ್ರಬುದ್ಧ

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಪ್ರಬುದ್ಧ ಅಕಾಡೆಮಿಯ ಪಾರ್ಕಿಂಗ್ ಶೆಡ್ ಧರೆಗೆ ಉರುಳಿರುವುದು.

ಭಾರಿ ಮಳೆ ಗಾಳಿಗೆ ನೆಲಸಮವಾಗಿದ ಪಾರ್ಕಿಂಕ್ ಶೆಡ್ | ಕಳಪೆ ಕಾಮಗಾರಿಗೆ ಆರೋಪ

ಪ್ರಬುದ್ಧ ಅಕಾಡೆಮಿ ಪಾರ್ಕಿಂಗ್ ಶೆಡ್ ನೆಲಸಮ

ವಿಕ ಸುದ್ದಿಲೋಕ ಕಲಬುರಗಿ

ಪ್ರಬುದ್ಧ ಅಕಾಡೆಮಿಯ ಆವರಣದಲ್ಲಿಕೋಟ್ಯಂತರ ರೂ. ವೆಚ್ಚದಲ್ಲಿನಿರ್ಮಿಸಲಾಗಿದ್ದ ವಾಹನ ಪಾರ್ಕಿಂಗ್ ಶೆಡ್ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಗೆ ನೆಲಸಮವಾಗಿದ್ದು, ಮತ್ತೊಮ್ಮೆ ಕಾಮಗಾರಿಯ ಗುಣಮಟ್ಟದ ಕುರಿತು ಚರ್ಚೆ ಆರಂಭವಾಗಿದೆ.

ಕಳೆದ ತಿಂಗಳು ಛಾವಣಿ ಕುಸಿದಿತ್ತು, ಇದೀಗ 2 ಕೋಟಿ ರೂ. ವೆಚ್ಚದಲ್ಲಿನಿರ್ಮಾಣ ಮಾಡಲಾದ ಶೆಡ್ ಕುಸಿದಿದೆ. ಸಂಜೆ ವೇಳೆ ಘಟನೆ ನಡೆದಿದ್ದರಿಂದ ಅಲ್ಲಿವಿದ್ಯಾರ್ಥಿಗಳಾಗಲಿ ಅಥವಾ ವಾಹನಗಳಾಗಲಿ ಇರಲಿಲ್ಲ. ಇದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಇಡೀ ಅಕಾಡೆಮಿಯ ಕಾಮಗಾರಿ ಅತ್ಯಂತ ಕಳಪೆಯಾಗಿದೆ ಎಂಬುದಕ್ಕೆ ಸರಣಿ ಅನಾಹುತಗಳೇ ಸಾಕ್ಷಿಯಾಗಿವೆ. ಕಳೆದ ಎರಡು ವಾರಗಳ ಹಿಂದೆ ಉಪಹಾರ ಕೊಠಡಿಯ ಚಾವಣಿ ಕುಸಿದಿತ್ತು. ಆ ವೇಳೆ ಕೆಆರ್ ಐಡಿಎಲ್ ನ ಎಇಇ ಸೌರಭ್ ಎಂಬುವವರನ್ನು ಅಮಾನತು ಮಾಡಿದ್ದರು. ಆದರೆ, ಕಳಪೆ ಕಾಮಗಾರಿ ಕುರಿತು ತನಿಖೆಗೆ ಆದೇಶ ಮಾಡಿಲ್ಲ. ಇದೀಗ ಮತ್ತೊಮ್ಮೆ ಘಟನೆ ನಡೆದಿದೆ, ಈ ಬಾರಿ ಸಚಿವರು ಯಾರನ್ನು ಹೊಣೆ ಮಾಡಿ ಅಮಾನತು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಅನುಕೂಲಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿನಿರ್ಮಿಸಲಾದ ಈ ಕೇಂದ್ರವು ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿಇಂತಹ ಸ್ಥಿತಿಗೆ ಬರುತ್ತಿರುವುದು ಸರಕಾರದ ಕಾಮಗಾರಿಗಳ ಕಮಿಷನ್ ಮಟ್ಟ ತೋರಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡಬೇಕು ಮತ್ತು ತನಿಖೆಗೆ ಆದೇಶ ಮಾಡಬೇಕು ಎಂದು ಮ್ಯಾಕೇರಿ ಒತ್ತಾಯಿಸಿದ್ದಾರೆ.

ಪ್ರಬುದ್ಧ ಅಕಾಡೆಮಿ ಜನವರಿಯಲ್ಲಿಅದ್ಧೂರಿಯಾಗಿ ಉದ್ಘಾಟನೆ ಮಾಡಲಾಗಿತ್ತು. ಶಿಷ್ಯವೇತನ ನೀಡಿಲ್ಲಎಂದು ಅಲ್ಲಿನ ಅಭ್ಯರ್ಥಿಗಳಿಗೆ ನಿರಂತರ ಪ್ರತಿಭಟನೆ ನಡೆಸಿದ್ದರು. ಕಳೆದ ತಿಂಗಳು ಉಪಹಾರ ಕೋಣೆಯ ಚಾವಣಿ ಕುಸಿದಿತ್ತು. 15 ದಿನಗಳ ಅಮತರದಲ್ಲಿಈ ಘಟನೆ ನಡೆದಿದೆ.

*

ಕೋಟ್ ..

ಜಿಲ್ಲಾಉಸ್ತುವಾರಿ ಸಚಿವರು 30 ಕೋಟಿ ರೂ. ಖರ್ಚು ಮಾಡಿ ಪ್ರಬುದ್ಧ ಅಕಾಡೆಮಿ ಉದ್ಘಾಟನೆ ಮಾಡಿದ್ದಾರೆ. ಮೂರು ತಿಂಗಳಲ್ಲಿಕಟ್ಟಡದ ಗುಣಮಟ್ಟ ಬಯಲಾಗಿದೆ. ಕೂಡಲೇ ಕಟ್ಟಡದ ಗುಣಮಟ್ಟದ ಪರೀಕ್ಷೆ ನಡೆಸಬೇಕು. ವರದಿ ಬರುವವರೆಗೆ ಇಲ್ಲಿಕೋಚಿಂಗ್ ಆರಂಭಿಸಬಾರದು.

- ಅವ್ವಣ್ಣ ಮ್ಯಾಕೇರಿ, ಬಿಜೆಪಿ ಮುಖಂಡ