ಹಾರಂಗಿ ಎಇಇ ದೀಪಕ್ ಗೆ ಮನವಿ
ವಿಕ ಸುದ್ದಿಲೋಕ ಕೊಣನೂರು
ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀವಿಭುದೇಶ ಮಂಟಪಕ್ಕೆ ತಡೆಗೋಡೆ ನಿರ್ಮಿಸಿ ಅನುಕೂಲ ಕಲ್ಪಿಸಬೇಕು ಎಂದು ಹಾರಂಗಿ ಸಹಾಯಕ ಕಾರ ್ಯಪಾಲಕ ಎಂಜಿನಿಯರ್ ಕೆ.ಎಸ್ .ದೀಪಕ್ ಅವರಿಗೆ ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮನವಿ ಸಲ್ಲಿಸಿದರು.
ಪಟ್ಟಣದ ಹಯಗ್ರೀವ ದೇವಾಲಯದಲ್ಲಿಮನವಿ ಸಲ್ಲಿಸಿ ಮಾತನಾಡಿದ ಅವರು,‘‘ರಾಮನಾಥಪುರದ ಪ್ರಸನ್ನ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯವಾಗಿದೆ. ಕಾವೇರಿ ನದಿ ದಂಡೆಯ ಮೇಲೆ ಸ್ಥಾಪಿಸಲ್ಪಟ್ಟಿದೆ. ಅಲ್ಲದೇ, ನಿತ್ಯವೂ ಸಾವಿರಾರು ಭಕ್ತರು ಭೇಟಿ ನೀಡುವ ಪುಣ್ಯ ಕ್ಷೇತ್ರವಾಗಿದೆ. ಸದರಿ ದೇವಾಲಯದ ಜತೆಗೆ ಇತರೆ ಹತ್ತಾರು ದೇವಾಲಯ ಇದೆ. ಜಾತ್ರೆ ಮತ್ತು ಶುಭ ಸಂದರ್ಭಗಳಲ್ಲಿಹೆಚ್ಚಿನ ಜನಸಂದಣಿಯಾಗುತ್ತದೆ. ಮಂಟಪ ನದಿ ದಂಡೆಯಲ್ಲಿಇದೆ. ಮಳೆಗಾಲದಲ್ಲಿನದಿಯ ನೀರಿನ ಹರಿವು ಹೆಚ್ಚಾದಾಗ ನೀರು ನುಗ್ಗುವ ಸಂಭವವಿದೆ. ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಿ ಅನುಕೂಲ ಕಲ್ಪಿಸಬೇಕು,’’ಎಂದು ಮನವಿ ಮಾಡಿದರು.
ಎಂಜಿನಿಯರ್ ದೀಪಕ್ ಮಾತನಾಡಿ,‘‘ಶಾಸಕ ಎ.ಮಂಜು ಅವರ ಸೂಚನೆ ಮೇರೆಗೆ ಈ ಸ್ಥಳವನ್ನು ಪರಿಶೀಲಿಸಿ ಜಾಗದಲ್ಲಿ150 ರಿಂದ 200 ಮೀಟರ್ ಜಾಗದಲ್ಲಿತಡೆಗೋಡೆ ನಿರ್ಮಾಣ ಮಾಡಲು ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ, ತಾಂತ್ರಿಕ ಮಂಜೂರಾತಿ ಕೋರಿ ಈಗಾಗಲೇ ಸಲ್ಲಿಸಲಾಗಿದೆ. ಸದರಿ ದೇಗುಲದ ಬಳಿ ಸಾರ್ವಜನಿಕ ಬಳಕೆಯ ಶೌಚಾಲಯ ಕಡಿಮೆ ಇರುವ ಕಾರಣ ಮತ್ತು ಭಕ್ತರು ಪುಣ್ಯ ಸ್ನಾನದ ನಂತರ ಬಟ್ಟೆ ಬದಲಿಸಲು ಕೊಠಡಿಗಳ ಅಗತ್ಯವಿದೆ. ಆ ಕಾರಣಕ್ಕಾಗಿ ದೇವಸ್ಥಾನದ ಮೆಟ್ಟಿಲಿನ ಬಳಿ ಇರುವ ಖಾಲಿ ಜಾಗದಲ್ಲಿಕಟ್ಟಡ ಕಟ್ಟಿಕೊಳ್ಳುವುದಾಗಿ ಸಂಘದವರು ದೇವಸ್ಥಾನ, ಜನಪ್ರತಿನಿಧಿಗಳು ತಿಳಿಸಿದ್ದು, ಈ ಸಂಬಂಧ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು,’’ಎಂದರು.
ಹಯಗ್ರೀವ ದೇವಾಲಯದ ಅರ್ಚಕರಾದ ವೇ. ಮೋಹನ್ , ಆರ್ .ಎಸ್ . ದಿಲೀಪ್ , ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್ . ಕುಮಾರಸ್ವಾಮಿ, ಜಿಲ್ಲಾಶರಣ ಸಾಹಿತ್ಯ ವರಿಷತ್ತಿನ ಯುವ ಘಟಕದ ಪ್ರಧಾನ ಕಾರ ್ಯದರ್ಶಿ ಆರ್ .ಕೆ.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಏಖN17ಓN್ಕ1-2 ಧಿ ರಾಮನಾಥಪುರ ಕಾವೇರಿ ನದಿಯ ದಂಡೆಗೆ ತಡಗೋಡೆ ನಿರ್ಮಿಸುವ ಕುರಿತು ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಅವರು ಎಇಇ ದೀಪಕ್ ಅವರಿಗೆ ಮನವಿ ಸಲ್ಲಿಸಿದರು.

