ವಿಕ ಸುದ್ದಿಲೋಕ ಕುಶಾಲನಗರ
ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ಆಶ್ರಯದಲ್ಲಿನಟ ದಿ.ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.
ಲಯನ್ಸ್ ಕ್ಲಬ್ ರೀಜನಲ್ ಚೇರ್ ಪರ್ಸನ್ ಡಾ.ಪಂಚಮ್ ತಿಮ್ಮಯ್ಯ ಶಿಧಿಬಿರ ಉದ್ಘಾಟಿಸಿ ಮಾತನಾಡಿ,‘ ಸ್ಥಿತಿವಂತರಾದರೂ ಕೊಡುಗೆ ನೀಡುವ ಮನಸ್ಥಿತಿ ಎಲ್ಲರಲ್ಲೂಇರುವುದಿಲ್ಲ. ಇದು ಬದಲಾಗಬೇಕಿದೆ. ಪುನೀತ್ ರಾಜ್ ಕುಮಾರ್ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ,’’ ಎಂದು ಹೇಳಿದರು.
ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ, ‘‘ರಕ್ತದಾನ ಮಾಡಲು ಅವಕಾಶವಿರುವವರು ಕಡ್ಡಾಯವಾಗಿ ರಕ್ತದಾನದಂತಹ ಸತ್ಕಾರ್ಯದಲ್ಲಿತೊಡಗಿಸಿಕೊಂಡು ಇತರೆ ಜೀವಕ್ಕೆ ನೆರವಾಗಬೇಕಿದೆ,’’ ಎಂದರು.
ಜಿಲ್ಲಾರಕ್ತ ನಿಧಿ ಘಟಕದ ಡಾ.ಕರುಂಬಯ್ಯ ಮಾತನಾಡಿ ರಕ್ತದಾನ ಮಹತ್ವದ ಬಗ್ಗೆ ತಿಳಿಸಿದರು.
ಲಯನ್ಸ್ ಕ್ಲಬ್ ಜಿಲ್ಲಾಕ್ಯಾಬಿನೆಟ್ ಉಪ ಕಾರ್ಯದರ್ಶಿ ಸುಮನ್ ಬಾಲಚಂದ್ರ, ಕುಶಾಲನಗರ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ಕಿರಣ್ , ಕುಶಾಲನಗರ ಗೌಡ ಸಮಾಜ ಉಪಾಧ್ಯಕ್ಷ ಕಾಶಿ ಪೂವಯ್ಯ, ಕಾರ್ಯದರ್ಶಿ ಹೇಮಂತ್ , ಮೈಸೂರಿನ ಡಾ.ಇಬ್ರಾಹಿಂ, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಎಚ್ .ಕೆ.ಶಾಂತಿ, ಸೇರಿದಂತೆ ಲಯನ್ಸ್ ಪ್ರಮುಖರಾದ ಚಿಣ್ಣಪ್ಪ, ಡಾ.ಪ್ರವೀಣ್ , ರಾಜಶೇಖರ್ , ಗೌಡ ಸಮಾಜದ ಪ್ರಮುಖರು, ರಕ್ತದಾನಿಗಳು ಇದ್ದರು.
17 ಕೆಯುಎಸ್ 01 ಚಿತ್ರದಲ್ಲಿ
ಕುಶಾಲನಗರ ಲಯನ್ಸ್ ಕ್ಲಬ್ ಹಾಗೂ ಗೌಡ ಸಮಾಜದ ಆಶ್ರಯದಲ್ಲಿರಕ್ತದಾನ ಶಿಬಿರ ನಡೆಯಿತು.

