ಮಹಿಳೆಯರು ಮತ್ತಷ್ಟು ಸಾಧನೆ ಮಾಡಲಿ

Contributed byvinaykudrasthe13@gmail.com|Vijaya Karnataka

ಸಕಲೇಶಪುರದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ವೈದ್ಯೆ ಡಾ.ಭಾರತಿ ರಾಜಶೇಖರ್‌ ಮಹಿಳೆಯರು ಸಮಾಜದ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಮಹಿಳೆಯರು ತಮ್ಮೊಳಗಿನ ಸಾಮರ್ಥ್ಯವನ್ನು ಅರಿತು ಆತ್ಮವಿಶ್ವಾಸದಿಂದ ಮುಂದೆ ಬರಬೇಕು. ಶಿಕ್ಷಣ ಮತ್ತು ಸ್ವಾವಲಂಬನೆ ಅವರನ್ನು ಶಕ್ತಿಶಾಲಿಗಳನ್ನಾಗಿ ಮಾಡುತ್ತದೆ. ಸಕಲೇಶ್ವರಿ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳು ನಡೆದವು.

women should continue to excel in their achievements

ವೈದ್ಯೆ ಡಾ.ಭಾರತಿ ರಾಜಶೇಖರ್ ಸಲಹೆ | ಸಕಲೇಶಪುರದಲ್ಲಿಮಹಿಳಾ ದಿನಾಚರಣೆ

ವಿಕ ಸುದಿ ಲೋಕ ಸಕಲೇಶಪುರ

ಮಹಿಳೆಯರು ಕೇವಲ ನಾಲ್ಕು ಗೋಡೆಗಳೊಳಗೆ ಸೀಮಿತವಾಗದೆ ಸಮಾಜದ ನಾನಾ ಕ್ಷೇತ್ರಗಳಲ್ಲಿತಮ್ಮ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಹಾಸನದ ವೈದ್ಯೆ ಡಾ.ಭಾರತಿ ರಾಜಶೇಖರ್ ಹೇಳಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಕಲೇಶ್ವರಿ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ ್ಯಕ್ರಮದಲ್ಲಿಮಾತನಾಡಿದರು.

‘‘ಇಂದಿನ ಮಹಿಳೆಯರು ಶಿಕ್ಷಣ, ಆರೋಗ್ಯ, ರಾಜಕೀಯ, ಕ್ರೀಡೆ, ಉದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿಮಹತ್ತರ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಅವಕಾಶ ಮತ್ತು ಪ್ರೋತ್ಸಾಹ ಸಿಕ್ಕರೆ ಅವರು ಕುಟುಂಬದಷ್ಟೇ ಅಲ್ಲದೆ ಸಮಾಜದ ಅಭಿವೃದ್ಧಿಗೂ ದೊಡ್ಡ ಕೊಡುಗೆ ನೀಡಬಲ್ಲರು,’’ಎಂದು ತಿಳಿಸಿದರು.

‘‘ಮಹಿಳೆಯರು ತಮ್ಮೊಳಗಿನ ಸಾಮರ್ಥ್ಯವನ್ನು ಅರಿತು ಆತ್ಮವಿಶ್ವಾಸದಿಂದ ಮುಂದೆ ಬರಬೇಕು. ಶಿಕ್ಷಣ ಮತ್ತು ಸ್ವಾವಲಂಬನೆ ಮಹಿಳೆಯರನ್ನು ಮತ್ತಷ್ಟು ಶಕ್ತಿಶಾಲಿಗಳನ್ನಾಗಿ ಮಾಡುತ್ತದೆ. ಕುಟುಂಬದ ಸದಸ್ಯರು ಮಹಿಳೆಯರ ಕನಸುಗಳಿಗೆ ಬೆಂಬಲ ನೀಡಬೇಕು. ಮಹಿಳೆಯರ ಹಕ್ಕು, ಆರೋಗ್ಯ ಮತ್ತು ಸುರಕ್ಷತೆ ಕುರಿತು ಸಮಾಜದಲ್ಲಿಹೆಚ್ಚಿನ ಜಾಗೃತಿ ಮೂಡಬೇಕಿದೆ. ಮಹಿಳೆಯರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿಉತ್ತಮ ಬದಲಾವಣೆ ತರಲು ಸಾಧ್ಯ,’’ ಎಂದು ಅಭಿಪ್ರಾಯಪಟ್ಟರು.

ಸಕಲೇಶ್ವರಿ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ವಾಸಂತಿ ಮಲ್ಲೇಶ್ ಮಾತನಾಡಿ,‘‘ಮಹಿಳೆಯರ ಸಬಲೀಕರಣಕ್ಕೆ ಇಂತಹ ಕಾರ ್ಯಕ್ರಮಗಳು ಬಹಳ ಅಗತ್ಯವಾಗಿವೆ.ಮಹಿಳೆಯರು ತಮ್ಮ ಪ್ರತಿಭೆಯನ್ನು ಹೊರಹಾಕಲು ವೇದಿಕೆಗಳು ದೊರಕಬೇಕು. ಸಮಾಜದಲ್ಲಿಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಅಭಿವೃದ್ಧಿಗೆ ಕುಟುಂಬ ಹಾಗೂ ಸಮಾಜದಿಂದ ಪ್ರೋತ್ಸಾಹ ದೊರಕಬೇಕು,’’ಎಂದು ಹೇಳಿದರು.

‘‘ಮಹಿಳೆಯರು ಶಿಕ್ಷಣ, ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸದ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಸಕಲೇಶ್ವರಿ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಹಿಳೆಯರಿಗಾಗಿ ಅನೇಕ ಕಾರ ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ,’’ಎಂದರು.

ಕಾರ ್ಯಕ್ರಮದಲ್ಲಿಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಕಾಲೇಜಿನಲ್ಲಿಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಓದಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿಮಹಿಳೆಯರಿಗಾಗಿ ಗ್ರೂಪ್ ಡ್ಯಾನ್ಸ್ ಹಾಗೂ ವಿವಿಧ ಆಟೋಟ ಸ್ಪರ್ಧೆ ನಡೆಯಿತು.

ಸಂಘದ ಉಪಾಧ್ಯಕ್ಷೆ ಸುಷ್ಮಾ ಅನಿಲ್ , ಕಾರ್ಯದರ್ಶಿ ಸುಷ್ಮಾ ವಿಜಿತ್ , ಸಹಕಾರ್ಯದರ್ಶಿ ಮಮತಾ ಉದಯ್ , ಖಜಾಂಚಿ ರತ್ನ ಮನೋಹರ್ , ಮಾಲಿನಿ ವಿಶ್ವನಾಥ್ , ಶೀಲಾ ಸುಧಾಕರ್ ಸಂಘಟನೆಯ ಪದಾಧಿಕಾರಿಗಳು ಹಲವು ಮಹಿಳೆಯರು ಹಾಜರಿದ್ದರು.

ಸಕಲೇಶಪುರ ಪಟ್ಟಣದಲ್ಲಿನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಾಸನದ ವೈದ್ಯೆ ಡಾ.ಭಾರತಿ ರಾಜಶೇಖರ್ ಉದ್ಘಾಟಿಸಿದರು.