ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕ

Contributed bydmpatilp18@gmail.com|Vijaya Karnataka

ಗ್ರಾಮ ಪಂಚಾಯಿತಿಗಳ ಐದು ವರ್ಷಗಳ ಅವಧಿ ಪೂರ್ಣಗೊಂಡಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈ ಜವಾಬ್ದಾರಿ ನೀಡಲಾಗಿದೆ. ಇದು ಗ್ರಾಮ ಪಂಚಾಯಿತಿಗಳ ಆಡಳಿತ ಸುಗಮವಾಗಿ ನಡೆಯಲು ಸಹಕಾರಿಯಾಗಲಿದೆ. ಚುನಾವಣೆ ನಂತರ ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

appointment of administrative officers in gram panchayats

(9 ಎಎಲ್ಡಿ 2 ಮಾನಪ್ಪ ಕಟ್ಟಿಮನಿ.)

ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕ

ವಿಕ ಸುದ್ದಿಲೋಕ ಆಳಂದ

ಗ್ರಾಮ ಪಂಚಾಯಿತಿಗಳ 60 ತಿಂಗಳ ಅವಧಿ ಮುಕ್ತಾಯವಾಗುತ್ತಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯುವವರೆಗೂ ಆಡಳಿತಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಾ ಪಂ ಇಒ ಮಾನಪ್ಪ ಕಟ್ಟಿಮನಿ ತಿಳಿಸಿದ್ದಾರೆ. ತಾಪಂ ಇಒ (ಆಳಂಗಾ, ತಡೋಳಾ, ಖಜೂರಿ, ಹೊದಲೂರ, ರುದ್ರವಾಡಿ) ಸಮಾಜ ಕಲ್ಯಾಣಾಧಿಕಾರಿ (ಬೆಳಮಗಿ, ಬೋಧನ, ಕಮಲಾನಗರ, ಚಿಂಚನಸೂರ, ಗೋಳಾ(ಬಿ), ನರೋಣಾ, ಹಳ್ಳಿಸಲಗರ, ಕೊಡಲಹಂಗರಗಾ), ತಹಸೀಲ್ದಾರ ತಡಕಲ್ , ಮುನ್ನಹಳ್ಳಿ, ಪಡಸಾವಳಿ), ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ (ಸರಸಂಬಾ, ಹೆಬಳಿ, ಸಾವಳೇಶ್ವರ, ಹಿರೋಳಿ), ಕೈಗಾರಿಕಾ ವಿಸ್ತೀರ್ಣಾಧಿಕಾರಿ (ದರ್ಗಾಶಿರೂರ, ಮೋಘಾ(ಕೆ), ಮಾದನಹಿಪ್ಪರಗಿ, ನಿಂಬಾಳ), ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ (ಹಡಲಗಿ, ಯಳಸಂಗಿ, ಮಾಡಿಯಾಳ, ಕವಲಗಾ), ಕ್ಷೇತ್ರ ಶಿಕ್ಷಣಾಧಿಕಾರಿ (ಜಿಡಗಾ, ಕೋರಹಳ್ಳಿ, ಧಂಗಾಪೂರ), ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ (ನಿಂಬರ್ಗಾ, ಸುಂಟನೂರ, ಕಡಗಂಚಿ, ಕೆರೆ ಅಂಬಲಗಾ) ಗ್ರಾಪಂಗಳಿಗೆ ಆಡಳಿತಾಧಿಕಾರಿಗಳಾಗಿ ನಿಯೋಜನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

-ಧಿ