9 ಮಂಜು 3
ಲೆಕ್ಕಪರಿಶೋಧಕರ ಮಾಹಿತಿ ಸಲ್ಲಿಸಿ
ವಿಕ ಸುದ್ದಿಲೋಕ ಹಾವೇರಿ
ಸೌಹಾರ್ದ ಸಹಕಾರಿಯ ಮುಖ್ಯಕಾರ್ಯನಿರ್ವಾಹಕರು ವಾರ್ಷಿಕ ಮಹಾಸಭೆ ಯಲ್ಲಿ2024-25ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ ಫಮ್ ರ್ ನೇಮಕಮಾಡಿಕೊಂಡ ಬಗ್ಗೆ ವಾರ್ಷಿಕ ಮಹಾಸಭೆ ಜರುಗಿದ ದಿನಾಂಕದಿಂದ 7 ದಿನದಲ್ಲಿಲೆಕ್ಕಪರಿಶೋಧಕರಿಗೆ, ಲೆಕ್ಕಪರಿಶೋಧನಾ ಫಮ್ ರ್ ಗಳಿಗೆ ಮತ್ತು ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರಿಗೆ ತಿಳಿಸಬೇಕು ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರು ತಿಳಿಸಿದ್ದಾರೆ.
ಯಾವುದೇ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳನ್ವಯ ಜಿಲ್ಲೆಯಲ್ಲಿಈವರೆಗೂ ಮಾಹಿತಿ ಸಲ್ಲಿಸದ ಸಹಕಾರ ಸಂಘಗಳು ಈ ಪ್ರಕಟಣೆ ಪ್ರಕಟವಾದ 7 ದಿನದಲ್ಲಿವಾರ್ಷಿಕ ಮಹಾಸಭೆಯಲ್ಲಿಲೆಕ್ಕಪರಿಶೋಧಕರನ್ನು, ಲೆಕ್ಕಪರಿಶೋಧನಾ ಫಮ್ ರ್ ನೇಮಕಾತಿ ಮಾಡಿಕೊಂಡ ಬಗ್ಗೆ ಮಾಹಿತಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರ ಸಹಿಯೊಂದಿಗೆ ವಾರ್ಷಿಕ ಮಹಾಸಭೆಯ ನಡುವಳಿ ಪ್ರತಿಯನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಚೇರಿ, ಶ್ರೀ ರೇಣುಕಾ ಆರ್ಕೆಡ್ , ಎಪಿಎಂಸಿ ಎದುರಿಗೆ, ಹಾನಗಲ್ ರಸ್ತೆ, ಹಾವೇರಿ-581110 ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

