ರೈತರಿಗೆ ರಸ್ತೆ ಸಂಪರ್ಕ ಅಧಿಕಾರ ತಹಸೀಲ್ದಾರರಿಗೆ
ವಿಕ ಸುದ್ದಿಲೋಕ ಧಾರವಾಡ
ಕೃಷಿ ಚಟುವಟಿಕೆಗೆ ಪೂರಕವಾಗಿ ರೈತರಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡಲು ಆದೇಶಿಸಿ ಕ್ರಮ ವಹಿಸುವ ಸಂಪೂರ್ಣ ಅಧಿಕಾರವನ್ನು ತಹಸೀಲ್ದಾರರಿಗೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನಕಾಶೆಯಲ್ಲಿರುವ ರಸ್ತೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತದೆ. ಆದರೆ ಹಲವೆಡೆ ರೂಢಿಗತ, ವಾಡಿಕೆ ರಸ್ತೆಗಳ ವ್ಯಾಜ್ಯಗಳಿವೆ. ಇಂತಹ ಕಡೆ ರೈತರ ಉತ್ಪನ್ನ ಸಾಗಾಟ, ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ತಹಸೀಲ್ದಾರರು ಕ್ರಮವಹಿಸಬಹುದು ಎಂದರು.
ಕಂದಾಯ ಜಮೀನುಗಳಲ್ಲಿರಸ್ತೆ ನಿರ್ಮಿಸಿಕೊಡಲು ನಮಗೆ ಯಾವುದೇ ಅಧಿಕಾರವಿಲ್ಲ. ರೈತರ ಹೊಲಗಳಿಗೆ ಕಾಯಂ ರಸ್ತೆ ಬೇಕೆಂದರೆ ಕೇಂದ್ರ ಸರಕಾರದ ನಿಯಮಾವಳಿ ಪ್ರಕಾರ ಅದು ಸಿವಿಲ್ ಕೋರ್ಟ್ ನಲ್ಲಿಇತ್ಯರ್ಥಗೊಳ್ಳಬೇಕು. ಈ ವಿಚಾರದಲ್ಲಿಯಾವುದೇ ಇಲಾಖೆಗಳು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ49 ಲಕ್ಷ ಮೃತರ ಹೆಸರಿನಲ್ಲಿಜಮೀನುಗಳಿದ್ದವು. ಈ ಪೈಕಿ 12 ಲಕ್ಷ ಮೃತರ ವಾರಸುದಾರರ ಹೆಸರಿಗೆ ಮಾಡಿಕೊಡಲಾಗಿದ್ದು, ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇಲ್ಲಿಸಾಧನೆ ಮಾಡುವ ರಾಜ್ಯದ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕರಿಗೆ ಕಂದಾಯ ಇಲಾಖೆಯಿಂದ 5 ಕೋಟಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.
ರೈತರು ಪೋಡಿ ಮಾಡಿಕೊಳ್ಳಲು ಹಾಗೂ ಇತರೆ ಸಮಸ್ಯೆಗಳಿಂದ ಪರದಾಡುತ್ತಿದ್ದರು. ಅಂತವುಗಳಲ್ಲಿಇಲಾಖೆಯೇ ಅವರ ಮನೆ ಬಾಗಿಲಿಗೆ ಹೋಗಿ ಮೃತರ ವಾರಸುದಾರರ ಹೆಸರಿನಲ್ಲಿಖಾತಾ ಬದಲಾವಣೆ ಮಾಡಿಕೊಡುತ್ತಿದೆ. ಡಿಸಿ, ಎಸಿ, ತಹಸೀಲ್ದಾರ್ ಕೋರ್ಟ್ ಗಳಲ್ಲಿಇರುವ ಬಾಕಿ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿಹಿಂದಿನಿಂದಲೂ ದಾಖಲೆಗಳ ಹುಡುಕಾಟ ಎಂದರೆ ದೊಡ್ಡ ಸಮಸ್ಯೆ ಆಗಿತ್ತು. ಜನರು ತಮ್ಮ ದಾಖಲೆ ಮತ್ತು ಸರ್ಟಿಫೈಡ್ ಪ್ರತಿಗಳನ್ನು ಪಡೆಯಲು ಪರದಾಡುವಂತಹ ಸ್ಥಿತಿ ಇತ್ತು. ಸದ್ಯ ಭೂ ಸುರಕ್ಷಾ ಯೋಜನೆಯಡಿ 64.50 ಕೋಟಿ ಪುಟಗಳನ್ನು ಸ್ಕಾತ್ರ್ಯನ್ ಮಾಡಿ ಆನ್ ಲೈನ್ ನಲ್ಲಿಅಪ್ ಲೋಡ್ ಮಾಡಲಾಗಿದ್ದು, ಜನರು ತಮ್ಮ ದಾಖಲೆಗಳನ್ನು ಬೆರಳ ತುದಿಯಲ್ಲಿಪಡೆದುಕೊಳ್ಳಬಹುದು ಎಂದು ತಿಳಿಸಿದರು.
ರಾಜ್ಯದಲ್ಲಿರುವ ದಾಖಲೆ ರಹಿತ ಮನೆಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಈವರೆಗೆ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ ಟಾಪ್ ನೀಡುವ ಮೂಲಕ ಜನರಿಗೆ ತ್ವರಿತ ಸೇವೆ ನೀಡಲು ಸರಕಾರ ಮುಂದಡಿ ಇಟ್ಟಿದೆ ಎಂದು ಮಾಹಿತಿ ನೀಡಿದರು.
ಬಾಕ್ಸ್ ..
ನೇಮಕಾತಿಗೆ ಕ್ರಮ
ರಾಜ್ಯ ಸರ್ವೆ ಇಲಾಖೆಯಲ್ಲಿಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. 34 ಜನ ಎಡಿಎಲ್ ಆರ್ ಗಳ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 750 ಜನ ಸರ್ವೆಯರ್ ನೇಮಕ ಪ್ರಗತಿಯಲ್ಲಿದ್ದು, ಆಂತರಿಕ ಮೀಸಲಾತಿ ಸಮಸ್ಯೆ ಇತ್ಯರ್ಥಗೊಂಡ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.

