ಶುದ್ಧ ಕ್ರಯಪತ್ರ ವಿತರಿಸಿ
ವಿಕ ಸುದ್ದಿಲೋಕ ಬಾಗಲಕೋಟೆ
ನಗರದ ನವನಗರದ ಸಂತ್ರಸ್ತರಿಗೆ ಶುದ್ಧ ಕ್ರಯ ಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿಜಿಲ್ಲಾಉಸ್ತುವಾರಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ನಗರದಲ್ಲಿಸೋಮವಾರ ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಮಹಮ್ಮದ್ ಮೊಹಸೀನ್ ಅವರಿಗೆ ಮನವಿ ಸಲ್ಲಿಸಲಾಯಿತು. ‘‘ಗುತ್ತಿಗೆ ಕ್ರಯ ಪತ್ರ ವಿತರಿಸುವ ಕಾರಣ ಸಂತ್ರಸ್ತರು 10 ವರ್ಷಗಳ ನಂತರ ಮತ್ತೊಮ್ಮೆ ಕ್ರಯಪತ್ರ ಪಡೆಯಬೇಕಾಗುತ್ತದೆ. ಸದ್ಯದ ವ್ಯವಸ್ಥೆಯಿಂದ ಸಂತ್ರಸ್ತರು ಮಾಲೀಕತ್ವದ ಸಮಸ್ಯೆ ಎದುರಿಸುತ್ತಿದ್ದಾರೆ. ಅವಧಿ ಪೂರ್ಣಗೊಂಡ ನಂತರ ಮತ್ತೆ ಶುಲ್ಕ ಭರಿಸಿ ಕ್ರಯಪತ್ರ ಪಡೆಯುವುದು ವೆಚ್ಚದಾಯಕವಾಗಿದೆ. ಬಿಟಿಡಿಎ ಇ-ಆಸ್ತಿ ಖಾತೆ ವಿತರಣೆಯಲ್ಲಿತಾಂತ್ರಿಕ ದೋಷ ಎದುರಾಗಿದ್ದು, ಸಂತ್ರಸ್ತರು ಪರದಾಡುತ್ತಿದ್ದಾರೆ. ತಕ್ಷಣ ಶುದ್ಧ ಕ್ರಯಪತ್ರ ವಿತರಣೆ ಹಾಗೂ ಇ-ಆಸ್ತಿ ಖಾತೆ ವಿತರಣೆ ತಾಂತ್ರಿಕ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು’’ ಎಂದು ಹದ್ಲಿಒತ್ತಾಯಿಸಿದರು. ಮುಖಂಡರಾದ ಶ್ರೀಧರ ನೀಲನಾಯಕ, ಸುನೀಲ ಬಾಲಗಾವಿ, ಇಲಿಯಾಸ್ ಮದರಖಂಡಿ, ಕೇಶವ ಕುಲಕರ್ಣಿ, ಪ್ರಭು ಹಳ್ಳೂರ, ರಮೇಶ ಸನದಿ, ವಿಜಯ ಮುಳ್ಳೂರ ಇದ್ದರು.
----
ಬಿಟಿಡಿಎ-ಬಿಜಿಕೆ-9
ಬಾಗಲಕೋಟೆಯಲ್ಲಿಸೋಮವಾರ ಕಾಂಗ್ರೆಸ್ ಮುಖಂಡ ನಾಗರಾಜ ಹದ್ಲಿಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಮಹಮ್ಮದ್ ಮೊಹಸೀನ್ ರಿಗೆ ಮನವಿ ಸಲ್ಲಿಸಿದರು.

