ಚೂರು ಪಾರು - ಕಾಂಗ್ರೆಸ್ ಬೆಂಬಲಿತರ ಪಾಲಾದ ರೇಷ್ಮೆ ಬೆಳೆಗಾರರು, ರೈತರ ಸೇವಾ ಸಹಕಾರ ಸಂಘ

Contributed bybommekallu@gmail.com|Vijaya Karnataka

ಚಿಂತಾಮಣಿ ತಾಲೂಕಿನ ವೈಜಕೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ12 ಸ್ಥಾನಗಳಲ್ಲಿಜಯಗಳಿಸಿದ್ದಾರೆ. ಈ ಗೆಲುವಿನಿಂದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ನೂತನ ಆಡಳಿತ ಮಂಡಳಿಯ ನಿರ್ದೇಶಕರು ಮುಂದಿನ ಐದು ವರ್ಷಗಳ ಕಾಲ ಸಂಘವನ್ನು ಮುನ್ನಡೆಸಲಿದ್ದಾರೆ. ಮುಖಂಡರು ವಿಜೇತರನ್ನು ಅಭಿನಂದಿಸಿದರು.

congress supported candidates transform victory into success

ಚಿಂತಾಮಣಿ:

ತಾಲೂಕಿನ ಕೈವಾರ ಹೋಬಳಿಯ ವೈಜಕೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ12 ಸ್ಥಾನಗಳಲ್ಲಿಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದಿಂದ ಶ್ರೀನಿವಾಸಮೂರ್ತಿ, ಎ.ಎಂ. ನಾಗರಾಜ್ , ಮಂಜುನಾಥ್ , ವಿ. ರಾಧಾಕೃಷ್ಣ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ವಿ. ಶ್ರೀನಿವಾಸ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಎಂ. ವಿನೋದ್ , ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಟಿ. ಮುನಿನಾರಾಯಣಪ್ಪ, ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಸುರೇಶ್ ಎಂ, ಮಹಿಳಾ ಮಿಸಲು ಕ್ಷೇತ್ರದಿಂದ ಹೆಚ್ .ಸಿ. ಆಶಾ, ಎನ್ . ಭಾಗ್ಯಮ್ಮ, ಸಾಲಗಾರರಲ್ಲದ ಕ್ಷೇತ್ರದಿಂದ ಡಿ. ನರಸಿಂಹಮೂರ್ತಿ, ಠೇವಣಿದಾರರ ಕ್ಷೇತ್ರದಿಂದ ಬಿ.ಪಿ. ಹರೀಶ್ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿಕಾಂಗ್ರೆಸ್ ಮುಖಂಡರಾದ ಸಂತೇಕಲ್ಲಹಳ್ಳಿ ನಾರಾಯಣಸ್ವಾಮಿ, ಮಹೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

09ಸಿಎ???ವೈವಿ1

ಚಿಂತಾಮಣಿ ತಾಲೂಕಿನ ವೈಜಕೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿವಿಜೇತ ಅಭ್ಯರ್ಥಿಗಳನ್ನು ಮುಖಂಡರು ಅಭಿನಂದಿಸಿದರು.