ಪ್ರಸಾದ್ ಯೋಜನೆಗೆ ಕೋರ್ಟ್ ಬ್ರೇಕ್

Contributed bybeeresha.mahadeva@timesgroup.com|Vijaya Karnataka

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್‌ ಯೋಜನೆಯಡಿ ನಡೆಯುತ್ತಿದ್ದ ಕಾಮಗಾರಿಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ರಾಜವಂಶಸ್ಥರು, ಪರಿಸರವಾದಿಗಳು, ಹೋರಾಟಗಾರರ ವಿರೋಧಕ್ಕೆ ಇದು ಮೊದಲ ಗೆಲುವು. 46 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು. ಒಂದು ಕಾಮಗಾರಿ ಹೊರತುಪಡಿಸಿ ಉಳಿದ ಎಲ್ಲವನ್ನೂ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಇದು ಯಾತ್ರಿಕರಿಗೆ ಉತ್ತಮ ಅನುಭವ ನೀಡುವ ಉದ್ದೇಶ ಹೊಂದಿತ್ತು.

court halts prasad scheme at chamundi hill

ಬೀರೇಶ್ ಕಬಿನಿ ಮೈಸೂರು ಚಿಛಿಛ್ಟಿಛಿsha.ಞahadಛಿvaಃಠಿಜಿಞಛಿsಟ್ಛಜ್ಞಿಜಿdಜಿa.್ಚಟಞ ಕೇಂದ್ರ ಪುರಸ್ಕೃತ ಪ್ರಸಾದ್ ಯೋಜನೆ ಯಡಿ ಚಾಮುಂಡಿ ಬೆಟ್ಟದಲ್ಲಿಕೈಗೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ಬೆಟ್ಟದಲ್ಲಿಕಾಮಗಾರಿಗಳನ್ನು ವಿರೋಧಿಸಿ ಹಾಗೂ ನಾನಾ ಪರಿಸರ ಕಾಳಜಿ ಉದ್ದೇಶಗಳನ್ನು ಇಟ್ಟುಕೊಂಡು ರಾಜವಂಶಸ್ಥರು, ಪರಿಸರವಾದಿಗಳು, ಹೋರಾಟಗಾರರು, ಪರಿಸರ ಸಂಘಟನೆಗಳು ಕೈಗೊಂಡಿದ್ದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ‘‘2025ರ ಡಿಸೆಂಬರ್ ನಲ್ಲಿಚಾಮುಂಡಿಬೆಟ್ಟದ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯನ್ನು ಕೇಂದ್ರ ಸರಕಾರದ ಪ್ರಸಾದ್ ಯೋಜನೆಯಡಿ ಅಭಿವೃದ್ಧಿಪಡಿಸಲು ಚಾಲನೆ ನೀಡಲಾಯಿತು. ಬೆಂಗಳೂರಿನ ಕಾರ್ಕಳ ಎಂಟರ್ ಪ್ರೈಸಸ್ ಎಂಬ ಸಂಸ್ಥೆಗೆ ಕಾಮಗಾರಿ ಜವಾಬ್ದಾರಿ ನೀಡಲಾಗಿದೆ. ಅಂತೆಯೇ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿಮಲ್ಟಿಪರ್ಪಸ್ ಏರಿಯಾ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಯಿತು. ನಂತರ ನಾನಾ ಪರಿಸರ ಸಂಘಟನೆಗಳು, ಪರಿಸರದ ಪ್ರೇಮಿಗಳು, ಕಾರ್ಯಕರ್ತರು ನಿರಂತರ ಪ್ರತಿಭಟನೆ ನಡೆಸಿದರು. ರಾಜವಂಶಸ್ಥರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಪರಿಣಾಮವಾಗಿ ಇಲಾಖೆ ಅಧಿಕಾರಿಗಳು ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ನಿರಂತರವಾಗಿ ಒಂದೂವರೆ ತಿಂಗಳಿಂದ ಪ್ರತಿಭಟನೆ ನಡೆದವು. ಕೆಲವರು ನ್ಯಾಯಾಲಯದಲ್ಲಿದಾವೆ ಹೂಡಿದರು. ಇದನ್ನು ಪರಿಗಣಸಿದ ನ್ಯಾಯಾಲಯವು, ಸದ್ಯ ನಡೆಯುತ್ತಿರುವ ಒಂದು ಕಾಮಗಾರಿಯನ್ನು ಹೊರತುಪಡಿಸಿ ಉಳಿದೆಲ್ಲಾಕಾಮಗಾರಿಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ,’’ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಪುರುಷೋತ್ತಮ್ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ಉದ್ದೇಶಿತ ಕಾಮಗಾರಿಗಳು ಯಾವ್ಯಾವು ? : ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನವನ್ನು (ಒಂದು ಶಕ್ತಿ ಪೀಠ) ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ 2023-24ರಲ್ಲಿ46 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಬಹುಪಯೋಗಿ (ಮಲ್ಟಿಪರ್ಪಸ್ ಏರಿಯಾ ಡೆವಲಪ್ ಮೆಂಟ್ ) ಪ್ರದೇಶ ಅಭಿವೃದ್ಧಿ, ಮಹಿಷಾಸುರ ಪ್ಲಾಜಾದ ಬಳಿ ಅಮೆನಿಟೀಸ್ ಬ್ಲಾಕ್ , ಎಂಟ್ರನ್ಸ್ ಸ್ಟೋನ್ ಆರ್ಚ್, ದೇವಿಕೆರೆ ಆವರಣದ ಹ್ಯಾಂಡ್ ರೈಲ್ಸ್ , ಸ್ಟೆಫ್ಸ್ ಮತ್ತು ಮಂಟಪ ಸೌಂದಧಿರ್ಯೀಧಿಕಧಿರಧಿಣ, ಭಕ್ತಾಧಿಗಳು ದೇವರ ದರ್ಶನಕ್ಕೆ ತೆರಳಲು ಕ್ಯೂ ಮಂಟಪ ನಿರ್ಮಾಣ, ವ್ಯೂವ್ ಪಾಯಿಂಟ್ ಅನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ನಾನಾ ಕಾಮಗಾರಿಗಳನ್ನು ಒಟ್ಟು ಆರು ಕಡೆಗಳಲ್ಲಿಹಮ್ಮಿಕೊಳ್ಳಲು ಯೋಜಿಸಲಾಗಿದೆ. ಏನಿದು ಪ್ರಸಾದ್ ಯೋಜನೆ ? : ಕೇಂದ್ರ ಸರಕಾರದ ಪ್ರಸಾದ್ (ಪಿಲಿಗ್ರಿಮೇಜ್ ರಿಜುವೆನೇಷನ್ ಆ್ಯಂಡ್ ಸ್ಪಿರಿಚುವಲ್ ಹೆರಿಟೇಜ್ ಅಗ್ಮಂಟೇನ್ )ಪ್ರಸಾದ್ ಯೋಜನೆಯನ್ನು ಭಾರತ ಸರಕಾರದ ಪ್ರವಾಸೋದ್ಯಮ ಸಚಿವಾಲಯ 2014-15ರಲ್ಲಿಜಾರಿಗೊಳಿಸಿತು. ಈ ಯೋಜನೆಯ ಮುಖ್ಯ ಉದ್ದೇಶ ಪವಿತ್ರ ಯಾತ್ರಾ ಸ್ಥಳಗಳು ಮತ್ತು ಪಾರಂಪರಿಕ ಪ್ರದೇಶಗಳಲ್ಲಿಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಯಾತ್ರಿಕರಿಗೆ ಉತ್ತಮ ಅನುಭವ ನೀಡುವುದು. ಯೋಜನೆಗೆ ಸಂಬಂಧಿಸಿದ

ಶೇ. 100ರಷ್ಟು ಅನುದಾನವನ್ನು ಆಯಾ ರಾಜ್ಯ ಸರಕಾರಗಳಿಗೆ ಕೇಂದ್ರದಿಂದಲೇ ನೀಡಲಾಗುತ್ತದೆ. ದೇಶದಾದ್ಯಂತ ಹಲವು ದೇವಾಲಯಗಳು ಮತ್ತು ಯಾತ್ರಾ ಕ್ಷೇತ್ರಗಳಲ್ಲಿಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.