ನಾಳೆ ವಿಚಾರ ಸಂಕೀರಣ

Contributed bysulibeleprashanth@gmail.com|Vijaya Karnataka

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಸಂತಸದ ಸುದ್ದಿ. ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿ ಆವರಣದಲ್ಲಿ ಫೆಬ್ರವರಿ 11ರಂದು ಬೆಣ್ಣೆಹಣ್ಣು ಮತ್ತು ಮೆಕಡೇಮಿಯ ಹಣ್ಣುಗಳ ವೈಜ್ಞಾನಿಕ ಬೇಸಾಯ ಪದ್ಧತಿ ಕುರಿತು ವಿಚಾರ ಸಂಕೀರ್ಣ ನಡೆಯಲಿದೆ. ನಿವೃತ್ತ ಅಪರ ನಿರ್ದೇಶಕ ಡಾ. ಹಿತ್ತಲಮನಿ ಎಸ್‌.ವಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.

discussion on scientific cultivation techniques of butterfruit and macadamia in devanahalli

ನಾಳೆ ವಿಚಾರ ಸಂಕೀರಣ

ಬೆಂಗಳೂರು ಗ್ರಾಮಾಂತರ: ತೋಟಗಾರಿಕೆ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕು ಕಸಬಾ ಹೋಬಳಿಯ ಅಣ್ಣೇಶ್ವರ ಗ್ರಾಮ ಪಂಚಾಯಿತಿ ಕಾರ್ಯಾಲಯ ಆವರಣದಲ್ಲಿಫೆ.11ರಂದು ಬೆಳಗ್ಗೆ11ಕ್ಕೆ ಬೆಣ್ಣೆಹಣ್ಣು ಮತ್ತು ಮೆಕಡೇಮಿಯ ಹಣ್ಣಿನ ವೈಜ್ಞಾನಿಕ ಬೇಸಾಯ ಪದ್ದತಿಯ ಕುರಿತು ವಿಚಾರ ಸಂಕೀರಣ ಹಮ್ಮಿಕೊಳ್ಳಲಾಗಿದೆ.

ವಿಷಯ ತಜ್ಞರಾಗಿ ತೋಟಗಾರಿಕೆ ಇಲಾಖೆ ನಿವೃತ್ತ ಅಪರ ನಿರ್ದೇಶಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಹಿತ್ತಲಮನಿ ಎಸ್ .ವಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿಭಾಗವಹಿಸುವರು. ಜಿಲ್ಲೆಯ ಎಲ್ಲಾರೈತರು ಭಾಗವಹಿಸಬೇಕೆಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.