ವಿಕ ಸುದ್ದಿಲೋಕ ಮೈಸೂರು ಮುಂಜಾನೆ ವೇಳೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೈಸೂರಿನ ಹಳೆ ಕೆಸರೆ ಬಳಿಯ 12 ಗುಜರಿ ಗೋದಾಮುಗಳಲ್ಲಿನ ಲಕ್ಷಾಂತರ ರೂ. ಮೌಲ್ಯದ ತಾಮ್ರದ ವೈರ್ ಹಾಗೂ ಇನ್ನಿತರ ವಸ್ತುಗಳು ಸುಟ್ಟು ಹಾಧಿನಿಧಿಯಾಧಿಗಿಧಿದೆ. ರಿಂಗ್ ರಸ್ತೆಯ ವರುಣ ನಾಲೆ ಬಳಿಯ ಗುಜರಿ ಗೋದಾಮುಗಳಲ್ಲಿಸೋಧಿಮವಾರ ಧಿಬೆಧಿಳಧಿಗಿನ ಜಾವ 3ರ ವೇಳೆಗೆ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡಿತು. ನೋಡು-ನೋಡುತ್ತಿದ್ದಂತೆಯೇ ಬೆಂಕಿ ಜ್ವಾಲೆ ಇತರೆಡೆಗೂ ಹರಡಿ ಒಟ್ಟು 12 ಗೋದಾಮುಗಳು ಹೊತ್ತಿ ಉರಿದವು. ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿತಕ್ಷಣ ಸ್ಥಳಕ್ಕೆ ಧಾವಿಸಿದ ಎನ್ .ಆರ್ .ಠಾಣೆ ಪೊಲೀಸ್ ಪ್ರಭಾರ ಇನ್ಸ್ ಪೆಕ್ಟರ್ ಕುಮಾರ್ ಹಾಗೂ ಸಿಬ್ಬಂದಿ, ಅಗ್ನಿಶಾಮಕ ಠಾಣೆ ಸಿಬ್ಬಂದಿಗಳನ್ನು ಕರೆಸಿಕೊಂಡು ಸುಮಾರು 3 ತಾಸು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು. ಬನ್ನಿಮಂಟಪ ಅಗ್ನಿಶಾಮಕ ಠಾಣೆಯ 3 ವಾಹನಗಳ ಮೂಲಕ 50ಕ್ಕೂ ಹೆಚ್ಚು ಸಿಬ್ಬಂದಿ ಗೋದಾಮುವಿನಲ್ಲಿಉಂಟಾಗಿದ್ದ ಬೆಂಕಿ ನಂದಿಸುವ ಕಾರ್ಯದಲ್ಲಿನಿರತರಾಗಿದ್ದರು. ಈ ಸಂದರ್ಭ ಸ್ಥಳದಲ್ಲಿದಟ್ಟ ಹೊಗೆ ಕಾಣಿಸಿಕೊಂಡು, ಮುಂಜಾನೆ ಹಳೆ ಕೆಸರೆ ಗ್ರಾಮದ ನಿವಾಸಿಗಳಲ್ಲಿಆತಂಕ ಉಂಟಾಯಿತು. ಎನ್ .ಆರ್ .ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳ ಮಹಜರು ನಡೆಸಿದರು. ಸೆಸ್ಕ್ ಅಧಿಕಾರಿಗಳೂ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ಹೊತ್ತಿಕೊಳ್ಳಲು ಕಾರಣವೆನೆಂಬುದನ್ನು ತಿಳಿಯಲು ಪ್ರಯತ್ನಿಸಿದರು. ಹಳೆ ಕೆಸರೆಯಲ್ಲಿಸುಮಾರು 30ರಿಂದ 40 ಸ್ಕ್ಯಾ ಪ್ ಗೋದಾಮುಗಳಿದ್ದು, ಬೆಂಕಿಯಿಂದ ರಕ್ಷಿಸಿಕೊಳ್ಳಲು ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲವಾದ್ದರಿದ ಗೋದಾಮು ಮಾಲೀಕರು ಮತ್ತು ಬಾಡಿಗೆದಾರರಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಇನ್ಸ್ ಪೆಕ್ಟರ್ ಕುಮಾರ್ ತಿಳಿಸಿದರು. ಘಟನೆಯಿಂದ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆಯಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿರುವುದಿಲ್ಲ. ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿಬೆಂಕಿ ಅವಘಡ ಸಂಭವಿಸಿ ಭಾರಿ ನಷ್ಟ ಉಂಟಾಗಿದ್ದನ್ನು ಇಲ್ಲಿಸ್ಮರಿಸಬಹುದಾಗಿದೆ.

