ಪಾಣಾಜೆ ಕೊಂದಲ್ಕಾನ ಸೇತುವೆಗೆ ಶಿಲಾನ್ಯಾಸ

Contributed bysudhakara.kannadamoole@timesofindia.com|Vijaya Karnataka

ಪಾಣಾಜೆ ಕೊಂದಲ್ಕಾನ ಸೇತುವೆಗೆ 1 ಕೋಟಿ ರೂ. ಅನುದಾನ ಮಂಜೂರಾಗಿದೆ. ಶನಿವಾರ ಶಿಲಾನ್ಯಾಸ ನೆರವೇರಿತು. 54 ವರ್ಷಗಳ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣಕ್ಕೆ ಶಾಸಕ ಅಶೋಕ್‌ ರೈ ಶ್ರಮಿಸಿದ್ದಾರೆ. ಮುಂದಿನ 5 ತಿಂಗಳಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮಳೆಗಾಲಕ್ಕೆ ಮುನ್ನ ಸಂಚಾರಕ್ಕೆ ಮುಕ್ತವಾಗಲಿದೆ. ಗಡಿ ಗ್ರಾಮ ಪಾಣಾಜೆಗೆ ಹೆಚ್ಚಿನ ಅನುದಾನ ಹರಿದು ಬರುತ್ತಿದೆ.

foundation stone laid for paanaje kondalkana bridge by mla ashok rai and guests achievements

ವಿಕ ಸುದ್ದಿಲೋಕ ಪುತ್ತೂರು

ಪಾಣಾಜೆ ಗ್ರಾಮದ ಕೊಂದಲ್ಕಾನದಲ್ಲಿಸೇತುವೆ ನಿರ್ಮಾಣಕ್ಕೆ ಶಾಸಕ ಅಶೋಕ್ ರೈ 1 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಶಿಲಾನ್ಯಾಸ ಕಾರ ್ಯಕ್ರಮ ಶನಿವಾರ ನಡೆಯಿತು.

ಪಾಣಾಜೆ ರಣಮಂಗಳ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ನೂತನ ಸೇತುವೆಗೆ ಶಿಲಾನ್ಯಾಸ ನೆರವೇರಿಸಿದರು. ಕೊಂದಲ್ಕಾನ ಸೇತುವೆಗೆ ಅನೇಕ ವರ್ಷಗಳ ಬೇಡಿಕೆಯಿತ್ತು. ಯಾರೂ ಕೂಡ ಇದನ್ನು ಮಾಡಿಲ್ಲ. ಯಾರೂ ಮಾಡದ ಸಾಧನೆ ಮಾಡುವಲ್ಲಿಶಾಸಕ ಅಶೋಕ್ ರೈ ಎತ್ತಿದ ಕೈ. ಇಂಥ ಜನಪ್ರತಿನಿಧಿಗಳನ್ನು ಜನ ಯಾವತ್ತೂ ಮರೆಯಬಾರದು ಎಂದು ಅವರು ನುಡಿದರು.

ಶಾಸಕ ಅಶೋಕ್ ರೈ ಮಾತನಾಡಿ, 54 ವರ್ಷಗಳಿಂದ ಇಲ್ಲಿಸೇತುವೆಯ ಬೇಡಿಕೆ ಇದೆ ಎಂಬುದು ತಿಳಿದು ಬಂದಿದೆ. ಇಷ್ಟು ಸುದೀರ್ಘ ಅವಧಿಗೆ ಯಾಕೆ ಈ ಬೇಡಿಕೆ ಈಡೇರಿಲ್ಲಎಂಬುದು ನನಗೂ ಗೊತ್ತಿಲ್ಲ. ಇಲ್ಲಿಮೋರಿಯಂತಿರುವ ಅಗಲ ಕಿರಿದಾದ ಸೇತುವೆಯಲ್ಲಿವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲಎಂದು ಜನರು ಮನವಿ ಮಾಡಿದ ಕಾರಣ ಇಲ್ಲಿಗೆ ವಿಶಾಲ ಶಾಶ್ವತ ಸೇತುವೆ ಮಂಜೂರು ಮಾಡಿದ್ದೇನೆ ಎಂದರು.

ಮುಂದಿನ 5 ತಿಂಗಳಲ್ಲಿಸೇತುವೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ. ಸೇತುವೆಯ ಎರಡೂ ಬದಿಗಳಲ್ಲಿಕಾಂಕ್ರೀಟ್ ಸಂಪರ್ಕ ರಸ್ತೆ ನಿರ್ಮಾಣವಾಗಲಿದೆ.ಇಲ್ಲಿರಸ್ತೆ ತಗ್ಗಿನಲ್ಲಿರುವ ಕಾರಣ ಅದನ್ನು ಎತ್ತರಿಸಲಾಗುವುದು.ಮಳೆಗಾಲಕ್ಕೆ ಮುನ್ನ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅವರು ನುಡಿದರು.

ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಮಾತನಾಡಿ, ಗಡಿ ಗ್ರಾಮವಾದ ಪಾಣಾಜೆಗೆ ಶಾಸಕ ಅಶೊಕ್ ರೈ ಅವರಿಂದಾಗಿ ಅಧಿಕ ಅನುದಾನ ಹರಿದು ಬರುತ್ತಿದೆ ಎಂದರು. ಸ್ಥಳೀಯ ಮುಖಂಡರಾದ ರಮಾನಾಥ ರೈ ಪಡ್ಯಂಬೆಟ್ಟು ಶುಭ ಹಾರೈಸಿದರು. ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ, ಸದಸ್ಯರಾದ ವಿಮಲಾ ಮಹಾಲಿಂಗ ನಾಯ್ಕ, ಸ್ಥಳೀಯರಾದ ವಿನೋದ್ ರೈ ಪಡ್ಯಂಬೆಟ್ಟು, ಉಮೇಶ್ ರೈ ಗಿಳಿಯಾಳು, ಸದಾಶಿವ ರೈ ಸೂರಂಬೈಲು, ಜಗನ್ಮೋಹನ್ ರೈ, ಚನಿಯ ನಾಯ್ಕ, ಜಯರಾಂ ರೈ, ಶಂಕರನಾರಾಯಣ ಭಟ್ , ನಾರಾಯಣ ನಾಯ್ಕ, ಕೃಷ್ಣ ನಾಯ್ಕ, ವಿಠಲ್ ರೈ, ವಿಶ್ವನಾಥ ರೈ ಕಡಮಾಜೆ, ಸರಸ್ವತಿ ಟೀಚರ್ , ಸುಂದರಿ ಮತ್ತಿತರರು ಉಪಸ್ಥಿತರಿದ್ದರು. ಸದಾನಂದ ನಾಯ್ಕ ವಂದಿಸಿದರು.

ಫೊಟೋ: 9ಪಿ-ಬ್ರಿಜ್

ಪಾಣಾಜೆ ಗ್ರಾಮದ ಕೊಂದಲ್ಕಾನ ಸೇತುವೆಗೆ ಶಿಲಾನ್ಯಾಸ ನಡೆಯಿತು.