ಗಮಕ ವಾಚನ ವ್ಯಾಖ್ಯಾನ ಸಮಾರೋಪ

Contributed byjayaangadidar@gmail.com|Vijaya Karnataka

ಮಂಜೇಶ್ವರಕಲಾಕುಂಚ ಕೇರಳ ಗಡಿನಾಡ ಶಾಖೆಯು ಮಹಾಭಾರತದ ಗಮಕ ವಾಚನ ವ್ಯಾಖ್ಯಾನದ ಸಮಾರೋಪ ಸಮಾರಂಭವನ್ನು ಮಂಗಲ್ಪಾಡಿ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಆಯೋಜಿಸಿತ್ತು. ಜಯಲಕ್ಷ್ಮೇ ಕಾರಂತ ಮತ್ತು ದಿವ್ಯಾ ಕಾರಂತ ಅವರು ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿದ್ದರು. ಹಿರಿಯರಾದ ರಾಮ ಕಾರಂತ ಅವರು ಗ್ರಂಥಕ್ಕೆ ಆರತಿ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಮತ್ತು ಪೋಷಕರನ್ನು ಗೌರವಿಸಲಾಯಿತು.

gamak vachana vyakhyana samaroopa ceremony glory of mahabharata narrative

ವಿಕ ಸುದ್ದಿಲೋಕ ಮಂಜೇಶ್ವರ

ಕಲಾಕುಂಚ ಕೇರಳ ಗಡಿನಾಡ ಶಾಖೆ ಪ್ರಾಯೋಜಕತ್ವದಲ್ಲಿಮಹಾಭಾರತದ ಗಮಕ ವಾಚನ ವ್ಯಾಖ್ಯಾನದ ಸಮಾರೋಪ ಸಮಾರಂಭ ಮಂಗಲ್ಪಾಡಿ ಶ್ರೀ ಶಾರದಾ ಭಜನಾ ಮಂದಿರದಲ್ಲಿನಡೆಯಿತು.

ಕಳೆದ ಎರಡು ವರ್ಷಗಳಿಂದ ಪ್ರತಿ ಶನಿವಾರ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಜಯಲಕ್ಷ್ಮೇ ಕಾರಂತ ಹಾಗೂ ದಿವ್ಯಾ ಕಾರಂತ ನಡೆಸಿದ್ದರು. ಮುರಳೀಧರ ಯಾದವ್ , ಶಶಿರಾಜ ನೀಲಂಗಳ, ಗುರುಮೂರ್ತಿ, ಅನೂಷಾ, ರಾಧಾಮಣಿ ಮೀಯಪದವು, ಚಂದನ್ ಕಾರಂತ ಸಹಕರಿಸಿದ್ದರು. ಗಮಕ ವಾಚನ ವ್ಯಾಖ್ಯಾನದ ಸಮಾರೋಪ ಕಾರ್ಯಕ್ರಮದಲ್ಲಿಹಿರಿಯರಾದ ರಾಮ ಕಾರಂತ ಅವರು ಮಹಾಭಾರತದ ಕರ್ನಾಟಕ ಭಾರತ ಕಥಾಮಂಜರಿ ಗ್ರಂಥಕ್ಕೆ ಆರತಿ ಬೆಳಗಿದರು. ದಿವ್ಯಾ ಕಾರಂತ ಗ್ರಂಥವನ್ನು ವೇದಿಕೆಗೆ ತಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳ ಗಡಿನಾಡ ಶಾಖೆಯ ಸಂಸ್ಥಾಪಕಿ ಜಯಲಕ್ಷ್ಮೀ ಕಾರಂತ ವಹಿಸಿದ್ದರು. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎನ್ .ರಾಮಚಂದ್ರ ಭಟ್ ಮತ್ತು ಶ್ರೀ ಶಾರದಾ ಏಕಾಹ ಭಜನಾ ಮಂದಿರದ ಟ್ರಸ್ಟಿ ಲಿಂಗಪ್ಪ ಪಟೇಲ್ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಾಂತ್ ಕಾರಂತ ಪ್ರಾರ್ಥಿಸಿದರು. ಜಯಲಕ್ಷ್ಮೇ ಕಾರಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಕುಂಚ ಶಾಖೆಯ ಅಧ್ಯಕ್ಷೆ ರಾಧಾಮಣಿ ಮೀಯಪದವು ಉಪಸ್ಥಿತರಿದ್ದರು.

ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮಕ್ಕೆ ಪ್ರತಿ ಬಾರಿಯೂ ಆಗಮಿಸಿದ್ದ ಮಕ್ಕಳನ್ನು ಮತ್ತು ಪೋಷಕರನ್ನು ಗೌರವಿಸಲಾಯಿತು. ತಾರಾ ಪ್ರವೀಣ್ , ವಿಜಯ ರೈ, ಸುರೇಶ ಶೆಟ್ಟಿ ಅಭಿಪ್ರಾಯ ಮಂಡಿಸಿದರು. ರಾಜಾರಾಮ ರಾವ್ ಮೀಯಪದವು, ರಾಮ ಕಾರಂತ್ , ಚಂದನ್ ಕಾರಂತ ಭಾಗವಹಿಸಿದ್ದರು. ಚೇತನಾ ಹೆಬ್ಬಾರ್ , ಗಣೇಶ್ , ತಾರಾ ಪ್ರವೀಣ್ ಸಹಕರಿಸಿದರು. ರಾಧಾಮಣಿ ವಂದಿಸಿದರು. ಜಯಲಕ್ಷ್ಮೇ ಆರ್ . ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

9ಎಂಜೆ4 ಮಂಗಲ್ಪಾಡಿ