ಅದ್ಧೂರಿ ಶಿವರಾತ್ರಿ ಜಾಗರಣೋತ್ಸವಕ್ಕೆ ನಿರ್ಧಾರ
ಭಟ್ಕಳ: ಸಾರ್ವಜನಿಕರ ಸಹಕಾರದೊಂದಿಗೆ 3ನೇ ವರ್ಷದ ಶಿವರಾತ್ರಿ ಜಾಗರಣೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಅವರು ಮುರುಡೇಶ್ವರದಲ್ಲಿಸಾರ್ವಜನಿಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
‘‘ಫೆ.15ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಿ ಫೆ.16ರ ಬೆಳಗ್ಗೆ ಗಂಟೆಯವರೆಗೆ ಜಾಗರಣೆ ನಡೆಯಲಿದೆ. ಉತ್ಸವಕ್ಕೆ ಸರಿಸುಮಾರು 1 ಕೋಟಿ ರುಪಾಯಿ ವ್ಯಯವಾಗಲಿದ್ದು, ಸರಕಾರದ ನೆರವು ಸಿಗದೇ ಇದ್ದರೂ ದಾನಿಗಳು, ಉದ್ಯಮಿಗಳ ನೆರವು ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದರು. ಮುರುಡೇಶ್ವರದಲ್ಲಿಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆ ಕಗ್ಗಂಟಾಗಿದ್ದು, ಇಲ್ಲಿನ ಜನರೇ ಸೂಕ್ತ ನಿವೇಶನ ಒದಗಿಸಬೇಕು’’ ಎಂದರು. ಮುರುಡೇಶ್ವರ ಪಾರ್ಕಿಂಗ್ , ಶೌಚಾಲಯ ಸಮಸ್ಯೆಗಳಿಗೆ ಪರಿಹಾರ, ಸೋಶಿಯಲ್ ಮೀಡಿಯಾದಲ್ಲಿನಕಲಿ ಖಾತೆ ಮೂಲಕ ಮುರುಡೇಶ್ವರದ ಹೆಸರಿಗೆ ಕಳಂಕ ತರುವವರನ್ನು ಪತ್ತೆ ಹಚ್ಚಿ ಶಿಕ್ಷಿಸುವಂತೆ ಸ್ಥಳೀಯ ಮುಖಂಡ ಕೃಷ್ಣ ನಾಯ್ಕ ಆಗ್ರಹಿಸಿದರು. ಈ ಸಂದರ್ಭದಲ್ಲಿಜಾಗರಣೆ ಉತ್ಸವದ ಭಿತ್ತಿಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಲಕ್ಷಿತ್ರ್ಮಪ್ರಿಯ, ಎಸ್ಪಿ ದೀಪನ್ ಎಮ್ .ಎನ್ ., ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಮಾವಳ್ಳಿ 1 ಗ್ರಾಪಂ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ 2 ಗ್ರಾಪಂ ಅಧ್ಯಕ್ಷೆ ನಾಗರತ್ನ ಪಡಿಯಾರ, ಮುರುಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಇದ್ದರು.
ಪೋಟೋ: 8ಬಿಕೆಎಲ್ 1
ಮುರುಡೇಶ್ವರದಲ್ಲಿನಡೆದ ಸಭೆಯಲ್ಲಿಸಚಿವ ಮಂಕಾಳ ವೈದ್ಯ ಮಾತನಾಡಿದರು.

