ಹುಣಸೂರು: ರಾಜ್ಯ ಸರಕಾರ ಬಜೆಟ್ ನಂತರ ಹೊಸ ಜಿಲ್ಲೆ, ತಾಲೂಕುಗಳನ್ನು ರಚಿಸಲು ಮುಂದಾಗಿದ್ದು, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸರನ್ನು ಹೋಲಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸರ ಮೇಲಿನ ಗೌರವಕ್ಕಾಗಿ ಹುಣಸೂರನ್ನು ಜಿಲ್ಲೆಯಾಗಿ ಘೋಷಿಸುವಂತೆ ವಿಧಾನಪರಿಷತ್ ಸದಸ್ಯ ಎಚ್ .ವಿಶ್ವನಾಥ್ ಒತ್ತಾಯಿಸಿದರು. ‘‘ಈ ಹಿಂದೆ ತಾವು ಹಾಗೂ ಎಲ್ಲಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯಾಗಿಸಲು ಕಾರ್ಯಕ್ರಮ ರೂಪಿಸಲಾಗಿತ್ತು. ಕೆಲವು ಕಾರಣಗಳಿಂದ ಸ್ಥಗಿತವಾಗಿತ್ತು. ಇದೀಗ ಸಿಎಂ ಹಾಗೂ ಡಿಸಿಎಂ ಜಿಲ್ಲೆಮತ್ತು ತಾಲೂಕುಗಳ ಪುನರ್ ರಚನೆ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಎಲ್ಲಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳವರ ಸಭೆ ಕರೆದು ಚರ್ಚಿಸಿ ಸರಕಾರಕ್ಕೆ ಮನವಿ ಸಲ್ಲಿಸಲು ಶಾಸಕ ಜಿ.ಡಿ.ಹರೀಶ್ ಗೌಡ ಅಧಿವರಿಗೆ ಕೋರುತ್ತೇನೆ,’’ ಎಂದು ಸುದ್ದಿಗೊಷ್ಠಿಯಲ್ಲಿತಿಳಿಸಿದರು. ತಾನು ಅಭಿವೃದ್ಧಿ ಪರ: ‘‘ಮಾಜಿ ಶಾಸಕ ಎಚ್ .ಪಿ.ಮಂಜುನಾಥ ಅಧಿವರು ಲಕ್ಷ್ಮಣತೀರ್ಥ ನದಿ ಸ್ವಚ್ಛತೆಗೆ ಸಂಬಂಧಿಸಿದಂತೆ ತಾವು ಮಂಜೂರು ಮಾಡಿಸಿದ್ದ ಅನುದಾನವನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ನಾನ್ಯಾವ ಅನುದಾನವನ್ನೂ ತಡೆ ಹಿಡಿದಿಲ್ಲ. ನಾನು ಅಭಿವೃದ್ಧಿ ಮುಂದುವರೆಸುವವನೇ ಹೊರತೂ ತಡೆಯುವವನಲ್ಲ. 14 ತಿಂಗಳು ಶಾಸಕನಾಗಿದ್ದ ಅವಧಿಯಲ್ಲಿ84 ಹಳ್ಳಿಗಳ ರಸ್ತೆ ಅಭಿವೃದ್ಧಿ ಮಾಡಿಸಿದ್ದೇನೆ. ಚಿಲ್ಕುಂದ ಏತ ನೀರಾವರಿ ಯೋಜನೆಯಿಂದ 26 ಕೆರೆಗಳಿಗೆ ನೀರು ತುಂಬಿಸಲಾಗಿದೆ. 48 ಹಳ್ಳಿಗಳಲ್ಲಿಹೈಮಾಸ್ಕ್ ದೀಪ ಹಾಕಿಸಿದ್ದೇನೆ. ಎಚ್ .ಪಿ.ಮಂಜುನಾಥ್ 15 ವರ್ಷ ಶಾಸಕರಾಗಿ ಏನು ಮಾಡಿದ್ದಾರೆ ಎಂದು ಹೇಳಲಿ. ಅರಸುಕಲ್ಲಹಳ್ಳಿಯ ದೊಡ್ಡಕೆರೆಗೆ ನೀರು ತುಂಬಿಸಿಲ್ಲವೆಂಬ ಪ್ರಶ್ನೆಗೆ ಈಗಿನ ಶಾಸಕರು ಈ ಬಗ್ಗೆ ಮುತುವರ್ಜಿವಹಿಸಬೇಕಿದೆ,’’ ಎಂದು ಹೇಧಿಳಿಧಿದಧಿರು. ಗುಂಡಿ ಬಿದ್ದ ರಾಜ್ಯದ ಭಂಡನಾಯಕ: ‘‘ಯಾವಾಗಲೂ ಅಭಿವೃದ್ಧಿ ಮಂತ್ರ ಜಪಿಸುವ ಸಿದ್ದರಾಮಯ್ಯ, ಕನಿಷ್ಠ ರಸ್ತೆಗಳ ಗುಂಡಿ ಮುಚ್ಚಲು ಆಗದ ಸ್ಥಿತಿಯಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರೊಬ್ಬ ಗುಂಡಿಬಿದ್ದ ರಾಜ್ಯದ ಭಂಡ ನಾಯಕ,’’ ಎಂದು ಟೀಕಿಸಿದರು. ಸಿದ್ದರಾಮಯ್ಯ ಕೆಟ್ಟ ಫೈನಾನ್ಸ್ ಮಿನಿಸ್ಟರ್ : ‘‘ಅಕ್ಷರ-ಆರೋಗ್ಯ ಇಲ್ಲದೆ ಯಾವುದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಇದೀಗ ರಾಜ್ಯದಲ್ಲಿಸರಕಾರಿ ಶಾಲೆಗಳನ್ನು ಮುಚ್ಚುತ್ತಿದ್ದು, ಉಳಿಸಲು, ಶಿಕ್ಷರನ್ನು ನೇಮಿಸಲು ಯೋಗ್ಯತೆ ಇಲ್ಲ. ಬಹುತೇಕ ಶಾಸಕರೇ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವುದರಿಂದ ಯಾರಿಗೂ ಈ ಬಗ್ಗೆ ಆಸಕ್ತಿ ಇಲ್ಲ. ಇನ್ನು ಜನ-ಜಾನುವಾರುಗಳ ಆಸ್ಪತ್ರೆಗಳಲ್ಲಿವೈದ್ಯರಿಲ್ಲ. ಉಸ್ತುವಾರಿ ಮಂತ್ರಿ ಡಾ.ಎಚ್ .ಸಿ.ಮಹದೇವಪ್ಪ ಯಾವಾಗಲೂ ಸಂವಿಧಾನ, ಪ್ರಜಾಪ್ರಭುತ್ವ ಎನ್ನುತ್ತಿದ್ದು, ಸಂವಿಧಾನವನ್ನೇ ಕೊಲ್ಲುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. 17 ಬಜೆಟ್ ಮಂಡಿಸಿದ್ದೇನೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ತಂದು ಕೆಟ್ಟ ಆರ್ಥಿಕ ಪರಿಸ್ಥಿತಿ ನಿರ್ಮಿಸಿರುವ ಈ ದೇಶದ ಕೆಟ್ಟ ಫೈನಾನ್ಸ್ ಮಿನಿಸ್ಟರ್ . ಆಂತರಿಕ ಒಪ್ಪಂದದಂತೆ ಡಿಕೆಶಿಗೆ ಅಧಿಕಾರ ಬಿಟ್ಟುಕೊಡಲಿ. ಇನ್ನು ಅರಣ್ಯಮಂತ್ರಿ ಈಶ್ವರ್ ಖಂಡ್ರೆ ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗಟ್ಟುವಲ್ಲಿವಿಫಲರಾಗಿದ್ದಾರೆ,’’ ಎಂದು ಜರಿದರು.

