ಸುಳ್ಯ ನಗರದಲ್ಲಿ ರಸ್ತೆ ಬದಿ ಕಸ ಎಸೆದ ವ್ಯಕ್ತಿಗೆ ನಗರ ಪಂಚಾಯಿತಿ ದಂಡ ವಿಧಿಸಿದೆ. ಶ್ರೀಹರಿ ಕಾಂಪ್ಲೆಕ್ಸ್ ಎದುರು ಪ್ಲಾಸ್ಟಿಕ್ ತೊಟ್ಟಿಯಲ್ಲಿ ಕಸ ಇಡಲಾಗಿತ್ತು. ಸ್ಥಳೀಯರು ನೀಡಿದ ದೂರಿನ ಮೇರೆಗೆ ಸಿಸಿಟಿವಿ ಪರಿಶೀಲನೆ ನಡೆಸಲಾಯಿತು. ಗೂಡ್ಸ್ ವಾಹನದಲ್ಲಿ ಬಂದ ವ್ಯಕ್ತಿ ಕಸ ಎಸೆದಿರುವುದು ಕಂಡುಬಂದಿದೆ. ವಾಹನ ನೋಂದಣಿ ಸಂಖ್ಯೆ ಆಧಾರದಲ್ಲಿ ಆಲೆಟ್ಟಿಯ ಪ್ರೀತಮ್ ಅವರನ್ನು ಗುರುತಿಸಿ, ದೂರವಾಣಿ ಮೂಲಕ ಸಂಪರ್ಕಿಸಿ, ನಗರ ಪಂಚಾಯಿತಿಗೆ ಕರೆಸಿ 1 ಸಾವಿರ ರೂ. ದಂಡ ವಿಧಿಸಲಾಗಿದೆ.
ವಿಕ ಸುದ್ದಿಲೋಕ ಸುಳ್ಯ
ಸುಳ್ಯ ನಗರದ ರಾಜ್ಯ ಹೆದ್ದಾರಿಯ ಶ್ರೀಹರಿ ಕಾಂಪ್ಲೆಕ್ಸ್ ಎದುರಿನಲ್ಲಿ ಪ್ಲಾಸ್ಟಿಕ್ ತೊಟ್ಟೆಯಲ್ಲಿಕಸ ತಂದು ಇರಿಸಿದ ವ್ಯಕ್ತಿಯ ಮೇಲೆ ನಗರ ಪಂಚಾಯಿತಿ ದಂಡ ವಿಧಿಸಿದ ಘಟನೆ ಶನಿವಾರ ನಡೆದಿದೆ.
ಕಸ ಇರಿಸಿ ಹೋಗಿರುವ ವ್ಯಕ್ತಿಯ ಬಗ್ಗೆ ಸ್ಥಳೀಯ ವ್ಯಾಪಾರಸ್ಥರು ನಗರ ಪಂಚಾಯಿತಿಗೆ ದೂರು ನೀಡಿದ್ದು, ಸಿಸಿ ಟಿವಿ ಮೂಲಕ ಪರಿಶೀಲಿಸಿದಾಗ ಗೂಡ್ಸ್ ವಾಹನವೊಂದರಲ್ಲಿಬಂದ ವ್ಯಕ್ತಿ ಕಸ ಇರಿಸಿರುವುದು ಕಂಡು ಬಂದಿದೆ. ವಾಹನ ನೋಂದಣಿ ಸಂಖ್ಯೆ ಆಧಾರದಲ್ಲಿಕಸ ಹಾಕಿರುವ ವ್ಯಕ್ತಿ ಆಲೆಟ್ಟಿಯ ಪ್ರೀತಮ್ ಎಂಬವರಾಗಿದ್ದು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಗರ ಪಂಚಾಯಿತಿಗೆ ಕರೆಸಿ ರೂ.1 ಸಾವಿರ ದಂಡ ವಿಧಿಸಿದ್ದಾರೆ.