ವಿಕ ಸುದ್ದಿಲೋಕ ಬೈಂದೂರು
ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, ಪ್ರಥಮ ಹಂತದ ತೊಡಕುಗಳನ್ನು ತಡೆಗಟ್ಟಿ, ಅಗತ್ಯ ವೈದ್ಯಕೀಯ ನೆರವನ್ನು ನೀಡಿ ದಿವ್ಯಾಂಗರಲ್ಲಿಹಾಗೂ ಅವರ ಕುಟುಂಬದವರಲ್ಲಿಆತ್ಮವಿಶ್ವಾಸವನ್ನು ತುಂಬಿಸುವುದು. ಸ್ವಾವಲಂಬಿ ಬದುಕಿಗೆ ಅಗತ್ಯವಾದ ವ್ಯಕ್ತಿ ಕೌಶಲಗಳನ್ನು ನೀಡಿ, ಚಲನಶೀಲತೆ ಹೆಚ್ಚಿಸುವ ಮೂಲಕ ಸಮಾಜದೊಂದಿಗೆ ಪುನರ್ ಸಂಯೋಜನೆ ಮಾಡುವುದು ಹಾಗೂ ಹಾಗೂ ಜೀವನೋಪಾಯದ ಬೆಂಬಲದ ಮೂಲಕ ಆರೋಗ್ಯಕರ ಹಾಗೂ ಗೌರವಾನ್ವಿತ ಜೀವನವನ್ನು ನಡೆಸುವಂತೆ ಸಬಲೀಕರಣಗೊಳಿಸುವುದು ನಮ್ಮ ಮೊದಲ ಗುರಿಯಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಸಮೃದ್ಧ ಬೈಂದೂರು ಪರಿಕಲ್ಪನೆಯ ಸೇವಾಸೇತು ಯೋಜನೆಯಡಿಯಲ್ಲಿಸೇವಾಭಾರತಿ ಕನ್ಯಾಡಿ ಸಹಯೋಗದಲ್ಲಿಬೈಂದೂರು ಹೇನ್ ಬೇರುವಿನಲ್ಲಿಭಾನುವಾರ ಬೆನ್ನಹುರಿ ಅಪಘಾತಕ್ಕೋಳಗಾದವರ ಪುನಃಶ್ಚೇತನ ಕೇಂದ್ರ ಸೇವಾಧಾಮದ ಪ್ರವೇಶೋತ್ಸವದ ಪೂಜಾ ಕಾರ್ಯಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೇವಾಭಾರತಿ ಅಧ್ಯಕ್ಷ ಕೆ. ವಿನಾಯಕ ರಾವ್ ಮಾತನಾಡಿ, ಸೇವಾಧಾಮವು ಪುನಶ್ವೇತನ ಯೋಜನೆ, ಕೇಂದ್ರ ಮತ್ತು ಸಮುದಾಯಾಧರಿತ ಸೇವೆಯ ಮೂಲಕ ಪ್ರತಿಯೊಬ್ಬರನ್ನು ತಲುಪಿ ಯಾವುದೇ ಅಪೇಕ್ಷೆ ಇಲ್ಲದೆ ಹೊಸ ಆತ್ಮವಿಶ್ವಾಸ, ಹೊಸ ದಿಕ್ಕು ಮತ್ತು ಹೊಸ ಭರವಸೆಯೊಂದಿಗೆ ಬದುಕನ್ನು ರೂಪಿಸಲು ಸಹಕರಿಸಿದೆ ಎಂದರು.
ಅನುರಾಧಾ ಜಿ.ಗಂಟಿಹೊಳೆ, ಅನಿತಾ ಆರ್ .ಕೆ., ಸೇವಾಭಾರತಿ ಕಾರ್ಯದರ್ಶಿ ಸ್ವರ್ಣಗೌರಿ, ಟ್ರಸ್ಟಿ ಬಾಲಕೃಷ್ಣ, ಜಿಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ, ಉದ್ಯಮಿ ಯು.ಪಾಂಡುರಂಗ ಪಡಿಯಾರ್ , ರವಿಚಂದ್ರ ವಿ.ಕೆ. ಮೊದಲಾದವರು ಉಪಸ್ಥಿತರಿದ್ದರು.
ಫೋಟೋ ಫೈಲ್ : 9ಆರ್ ಸೇವಾಧಾಮ
ಬೈಂದೂರು ಹೇನ್ ಬೇರುವಿನಲ್ಲಿಭಾನುವಾರ ಸೇವಾಧಾಮದ ಪ್ರವೇಶೋತ್ಸವ ನಡೆಯಿತು.

