ಭದ್ರತಾ ಠೇವಣಿ ಹಿಂಪಡೆಯಲು ಸೂಚನೆ

Contributed bysaleem.balabatti@timesofindia.com|Vijaya Karnataka

ಗದಗ ಜಿಲ್ಲೆಯ ಸಣ್ಣ ಉಳಿತಾಯ ಯೋಜನೆ ಏಜೆನ್ಸಿಗಳ ಭದ್ರತಾ ಠೇವಣಿ ಹಿಂಪಡೆಯಲು ಸೂಚನೆ ಹೊರಡಿಸಲಾಗಿದೆ. ಮಹಿಳಾ ಪ್ರಧಾನ ಕ್ಷೇತ್ರೀಯ ಬಚತ್‌ ಯೋಜನೆ ಮತ್ತು ಸ್ಟಾ ್ಯಂಡರ್ಡ್‌ ಏಜೆನ್ಸಿ ಸಿಸ್ಟಮ್‌ ಏಜೆಂಟರ ಭದ್ರತಾ ಠೇವಣಿ ಪತ್ರಗಳು ಇಲಾಖೆಯಲ್ಲಿ ಬಾಕಿ ಉಳಿದಿವೆ. ಏಜೆಂಟರು ಅಥವಾ ಅವರ ವಾರಸುದಾರರು ದಾಖಲೆಗಳೊಂದಿಗೆ ಕಚೇರಿಗೆ ಭೇಟಿ ನೀಡಿ ಠೇವಣಿ ಹಿಂಪಡೆಯಬಹುದು.

instructions to withdraw security deposit

ಭದ್ರತಾ ಠೇವಣಿ ಹಿಂಪಡೆಯಲು ಸೂಚನೆ

ವಿಕ ಸುದ್ದಿಲೋಕ ಗದಗ

ಜಿಲ್ಲೆಯ ಸಣ್ಣ ಉಳಿತಾಯ ಯೋಜನೆಯಡಿ ಕಾರ್ಯನಿರ್ವಹಿಸಿ ಪ್ರಸ್ತುತ ನಿಷ್ಕಿ್ರೕಯಗೊಂಡಿರುವ ಏಜೆನ್ಸಿಗಳ ಭದ್ರತಾ ಠೇವಣಿಯನ್ನು ಹಿಂಪಡೆಯುವಂತೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸಣ್ಣ ಉಳಿತಾಯ ಇಲಾಖೆಯಡಿ ಮಹಿಳಾ ಪ್ರಧಾನ ಕ್ಷೇತ್ರೀಯ ಬಚತ್ ಯೋಜನೆ ಹಾಗೂ ಸ್ಟಾ ್ಯಂಡರ್ಡ್ ಏಜೆನ್ಸಿ ಸಿಸ್ಟಮ್ ಏಜೆಂಟರ ನೇಮಕಾತಿ ಸಂದರ್ಭದಲ್ಲಿಭದ್ರತಾ ಠೇವಣಿಯಾಗಿ ರಾಷ್ಟ್ರೀಯ ಉಳಿತಾಯ ಪತ್ರ ಮತ್ತು ಕಿಸಾನ್ ವಿಕಾಸ ಪತ್ರಗಳನ್ನು ಅಡವಿರಿಸಿಕೊಳ್ಳಲಾಗಿತ್ತು. ನಿಯಮದಂತೆ ಪ್ರತಿ ಮೂರು ವರ್ಷಕ್ಕೊಮ್ಮೆ ಏಜೆನ್ಸಿ ನವೀಕರಣಗೊಳ್ಳದ ಕಾರಣ ಹಲವು ಏಜೆನ್ಸಿಗಳು ನಿಷ್ಕಿ್ರೕಯಗೊಂಡಿದ್ದು, ಅವುಗಳ ಠೇವಣಿ ಪತ್ರಗಳು ಇಲಾಖೆಯ ಕಚೇರಿಯಲ್ಲಿಯೇ ಬಾಕಿ ಉಳಿದಿವೆ.

ಈ ಕುರಿತು ಪತ್ರ ವ್ಯವಹಾರ ನಡೆಸಲಾಗಿತ್ತು. ಆದರೆ, ಕೆಲ ಏಜೆಂಟರು ವಿಳಾಸ ಬದಲಿಸಿರುವುದು ಅಥವಾ ಮರಣ ಹೊಂದಿರುವ ಕಾರಣ ಪತ್ರಗಳು ವಿತರಣೆಯಾಗದೆ ಇಲಾಖೆಗೆ ವಾಪಸ್ ಬಂದಿವೆ. ಆದ್ದರಿಂದ, ಸಂಬಂಧಪಟ್ಟ ಏಜೆಂಟರು ಅಥವಾ ಅವರ ವಾರಸುದಾರರು ಲಭ್ಯವಿರುವ ದಾಖಲೆಗಳೊಂದಿಗೆ ಕಚೇರಿಯನ್ನು ಸಂಪರ್ಕಿಸಿ ತಮ್ಮ ಭದ್ರತಾ ಠೇವಣಿ ಹಿಂಪಡೆಯಬೇಕು ಎಂದು ಸಹಾಯಕ ನಿರ್ದೇಶಕ ಶ್ರೀಧರ ಚಿನಗುಂಡಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆ, ಕೊಠಡಿ ಸಂಖ್ಯೆ: 222, 2ನೇ ಮಹಡಿ, ಜಿಲ್ಲಾಡಳಿತ ಭವನ, ಹುಬ್ಬಳ್ಳಿ ರಸ್ತೆ, ಗದಗ. ದೂ.: 08372-232495 ಸಂಖ್ಯೆಗೆ ಸಂಪರ್ಕಿಸಬಹುದು.