ಕೊಲ್ಲಂಗಾನ ನವರಂಗ್ ಆರ್ಟ್ಸ್ನ ಸುವರ್ಣ ವರ್ಷಾಚರಣೆ ಸಂಭ್ರಮ

Contributed byprasadsarali@gmail.com|Vijaya Karnataka

ಕೊಲ್ಲಂಗಾನ ಗಾಂಧಿನಗರ ನವರಂಗ್‌ ಆರ್ಟ್ಸ್ ಸುವರ್ಣ ವರ್ಷಾಚರಣೆ ಆಚರಿಸುತ್ತಿದೆ. ಇದರ ಅಂಗವಾಗಿ ಶಿಥಿಲಾವಸ್ಥೆಯಲ್ಲಿರುವ ರಂಗಮಂದಿರ ಮತ್ತು ಬಣ್ಣದ ಮನೆಯ ಪುನರ್‌ ನಿರ್ಮಾಣಕ್ಕೆ ಫೆಬ್ರವರಿ 15ರಂದು ಶಿಲಾನ್ಯಾಸ ನೆರವೇರಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ. ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯರು ಶಿಲಾನ್ಯಾಸ ನೆರವೇರಿಸುವರು.

kollangana navarang arts golden jubilee shilanyasa program

ರಂಗಮಂದಿರ-ಬಣ್ಣದ ಮನೆಗೆ ಶಿಲಾನ್ಯಾಸ: ಆಮಂತ್ರಣ ಬಿಡುಗಡೆ

ಬದಿಯಡ್ಕ: ಕೊಲ್ಲಂಗಾನ ಗಾಂಧಿನಗರ ನವರಂಗ್ ಆರ್ಟ್ಸ್ನ ಸುವರ್ಣ ವರ್ಷಾಚರಣೆಯ ಸಂದರ್ಭದಲ್ಲಿಶಿಥಿಲಾವಸ್ಥೆಯಲ್ಲಿರುವ ರಂಗಮಂದಿರ- ಬಣ್ಣದಮನೆಯ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಫೆ. 15ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕೊಲ್ಲಂಗಾನದ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ನಾವಡ ಓಣಿಕುಂಡು ಅವರು ಆಮಂತ್ರಣ ಪತ್ರವನ್ನು ಹಿರಿಯ ಸದಸ್ಯ ಪೊಧ್ರಿ.ಶ್ರೀನಾಥ್ ಕಾಸರಗೋಡು ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಗೌರವಾಧ್ಯಕ್ಷ ಪಿ. ಕಿಶೋರ್ ಚಂದ್ರ ಧಿರೈ, ಅಧ್ಯಕ್ಷ ಉದಯ ಆಚಾರ್ಯ, ಕಾರ್ಯದರ್ಶಿ ರವಿಶಂಕರ ಶೆಟ್ಟಿ, ಕೋಶಾಧಿಕಾರಿ ಹರೀಶ ಕೊಲ್ಲಂಗಾನ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ರೈ ಕೊಲ್ಲಂಗಾನ, ಲವ ಆಚಾರ್ಯ, ಮನೋಜ್ ಕುಮಾರ್ ಹಾಗೂ ಸದಸ್ಯರು ಈ ಸಂದರ್ಭದಲ್ಲಿಜತೆಗಿದ್ದರು. ಫೆ. 15ರಂದು ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಧಿಅವರಿಂದ ಶಿಲಾನ್ಯಾಸ ನಡೆಯಲಿದೆ.

ಚಿತ್ರ: 09 ಬಿಎ ಕೊಲ್ಲಂಗಾನ : ಕೊಲ್ಲಂಗಾನದ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ನಾವಡ ಓಣಿಕುಂಡು ಅವರು ಆಮಂತ್ರಣ ಪತ್ರವನ್ನು ಹಿರಿಯ ಸದಸ್ಯ ಪ್ರೊ. ಶ್ರೀನಾಥ್ ಕಾಸರಗೋಡು ಅವರಿಗೆ ನೀಡಿ ಬಿಡುಗಡೆಗೊಳಿಸಿದರು.