ತಮದಡ್ಡಿಯಲ್ಲಿಪಂಚಕಲ್ಯಾಣ ಮಹೋತ್ಸವ| ಧರ್ಮದ ಕಾರ್ಯಕ್ರಮ ಕಣ್ತುಂಬಿಕೊಂಡ ಸಮೂಹ
ರಾಜಾಭಿಷೇಕಕ್ಕೆ ಹರಿದು ಬಂದ ಜನಸಾಗರ
ವಿಕ ಸುದ್ದಿಲೋಕ ತೇರದಾಳ
ಕೃಷ್ಣಾ ನದಿ ತೀರದ ತಮದಡ್ಡಿ ಗ್ರಾಮದಲ್ಲಿವಿಶ್ವಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ನಡೆಯುತ್ತಿರುವ ಪಂಚಕಲ್ಯಾಣ ಮಹೋತ್ಸವದ ಪ್ರಮುಖ ಕಾರ್ಯಕ್ರಮ ರಾಜಾಭಿಷೇಕ ವೀಕ್ಷಣೆಗೆ ಮಹಾರಾಷ್ಟ್ರ, ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿಶ್ರಾವಕ, ಶ್ರಾವಕಿಯರು ಆಗಮಿಸಿದ್ದರು. ಧರ್ಮದ ಕಾರ್ಯಕ್ರಮದಲ್ಲಿಅನೇಕ ಜನರು ಪಾಲ್ಗೊಂಡು ಪುಳುಕಿತಗೊಂಡರು.
ಬೆಳಗ್ಗೆ ಮಂಗಲವಾದ್ಯ ಘೋಷ, ಸುಪ್ರಭಾತ, ಸ್ತೋತ್ರ, ಆನೆ ಮೇಲೆ ಯಜಮಾನ ಆಗಮನ, ನಿತ್ಯ ನಿಧಿ, ಆನೆ ಮೇಲೆ ಮಂಗಲಕುಂಭ ತರುವುದು, ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ ನಡೆದವು. ಮಧ್ಯಾಹ್ನ ಶ್ರೀಗಳಿಂದ ಮಂಗಲ ಪ್ರವಚನ, ಸವಾಲು ಕಾರ್ಯಕ್ರಮಗಳು ಜರುಗಿದವು. ನಂತರ ಪಟ್ಟಾಭಿಷೇಕ, ರಾಜತಿಲಕ ರಾಜಾಭಿಷೇಕ, ರಾಜವೈಭವ, 56 ದೇಶದ ರಾಜರಿಂದ ಕಪ್ಪ ಕಾಣಿಕೆ ಸಮರ್ಪಣೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಉಚಿತ ತಪಾಸಣೆ ಶಿಬಿರ:
ಪಂಚಕಲ್ಯಾಣ ಮಹೋತ್ಸವದಲ್ಲಿತೇರದಾಳ ಗ್ರಾಮೀಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಿಂದ ಉಚಿತ ತಪಾಸಣೆ ಶಿಬಿರ, ಮುಕ್ತ ರಕ್ತದಾನ ಶಿಬಿರ ಕೂಡ ಹಮ್ಮಿಕೊಳ್ಳಲಾಗಿದೆ. ಬೇರೆ, ಬೇರೆ ಊರುಗಳಿಂದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಶ್ರಾವಕ- ಶ್ರಾವಕಿಯರು ಮಂಟಪದ ದ್ವಾರ ಮುಂದೆ ನಿಂತು ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಫೋಟೊ ಫೈಲ್ ನೇಮ್ . ಟಿಡಿಎಲ್ -09-1ಎ,ಬಿ,ಸಿ
ಎ) ತೇರದಾಳ ತಾಲೂಕಿನ ತಮದಡ್ಡಿ ಗ್ರಾಮದಲ್ಲಿಕೈಗೊಂಡಿರುವ ಪಂಚಕಲ್ಯಾಣ ಮಹೋತ್ಸವದಲ್ಲಿನಾಲ್ಕನೇ ದಿನ ರಾಜಾಭಿಷೇಕ ಕಾರ್ಯಕ್ರಮದಲ್ಲಿತೀರ್ಥಂಕರ ಮೂರ್ತಿಗಳಿಗೆ ಅಭಿಷೇಕ ನಡೆಯಿತು.
ಬಿ) ಪಂಚಕಲ್ಯಾಣ ಮಹೋತ್ಸವದಲ್ಲಿಪಾಲ್ಗೊಂಡಿರುವ ಅಪಾರ ಸಂಖ್ಯೆಯ ಶ್ರಾವಕಿಯರು.

