ಎಂಡಿಎ ಬೊಮ್ಮನಹಳ್ಳಿ ಟೌನ್ ಶಿಪ್ ಗೆ ವೇಧಿಗ

Contributed bybeeresha.mahadeva@timesgroup.com|Vijaya Karnataka

ಮೈಸೂರು ಅಭಿವೃದ್ಧಿ ಪ್ರಾಧಿಕಾರ ಬೊಮ್ಮನಹಳ್ಳಿ ಬಳಿ 2 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಟೌನ್‌ಶಿಪ್ ನಿರ್ಮಾಣಕ್ಕೆ ಚಾಲನೆ ನೀಡಿದೆ. ರೈತರ ಸಹಭಾಗಿತ್ವದಲ್ಲಿ ಶೇ.50:50 ಅನುಪಾತದಲ್ಲಿ ಈ ಯೋಜನೆ ಜಾರಿಯಾಗಲಿದೆ. ತಮ್ಮ ಜಮೀನು ನೀಡುವ ರೈತರಿಗೆ ಅಭಿವೃದ್ಧಿಪಡಿಸಿದ ಸೈಟ್‌ಗಳಲ್ಲಿ ಶೇ.50 ಪಾಲು ಸಿಗಲಿದೆ. 35 ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವ ಹಳೆಯ ಅರ್ಜಿದಾರರನ್ನೂ ಪರಿಗಣಿಸಲಾಗುವುದು. ಮೊದಲ ಹಂತದಲ್ಲಿ 1200 ಎಕರೆಯಲ್ಲಿ ಬಡಾವಣೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

mdas ambitious project for bommanahalli township gains momentum

ವಿಕ ಸುದ್ದಿಲೋಕ ಮೈಸೂರು ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ)ದ ವತಿಯಿಂದ ಬೊಮ್ಮನಹಳ್ಳಿ ಬಳಿ

2 ಸಾವಿರ ಎಕರೆ ವ್ಯಾಪ್ತಿಯಲ್ಲಿವಿಶಾಲ ಟೌನ್ ಶಿಪ್ ನಿರ್ಮಿಸುವ ಯೋಜನೆಗೆ ವೇಗ ದೊರೆತಿದ್ದು, ನಿಜವಾದ ಫಲಾನುಭವಿಗಳಿಗೆ ನಿವೇಶನ ನೀಡುವ ಉದ್ದೇಶದಿಂದ ಸದ್ಯದಲ್ಲೇ ಬೇಡಿಕೆ ಸಮೀಕ್ಷೆ ಆರಂಭಿಸಲು ನಿರ್ಧರಿಸಿದೆ. ‘‘ಈ ಟೌನ್ ಶಿಪ್ ಯೋಜನೆಯನ್ನು ಶೇ.50:50 ಅನುಪಾತದ ಆಧಾರದಲ್ಲಿರೈತರ ಭಾಗವಹಿಸುವಿಕೆ ಮಾದರಿಯಲ್ಲಿಅನುಷ್ಠಾನಗೊಳಿಸಲಾಗುತ್ತದೆ. ತಮ್ಮ ಜಮೀನು ನೀಡುವ ರೈತರು ಯಾವುದೇ ಹಣದ ಹೂಡಿಕೆ ಇಲ್ಲದೆ ಅಭಿವೃದ್ಧಿ ಮಾಡಿದ ಸೈಟ್ ಗಳಲ್ಲಿಶೇ.50 ಪಡೆಯುತ್ತಾರೆ. ಇದು ರೈತರಿಗೆ ದೊಡ್ಡ ಅವಕಾಶ ಒದಗಿಸುವ ಯೋಜನೆಯಾಗಿದೆ. ಇಲವಾಲ ಹೋಬಳಿಯ ನಾಲ್ಕು ಹಳ್ಳಿಗಳಲ್ಲಿಸುಮಾರು 2,070 ಎಕರೆ ಜಮೀನು ಯೋಜನೆಗೆ ಒಳಪಡುತ್ತದೆ. ಅದರಲ್ಲಿ1200 ಎಕರೆ ಭೂಮಿಯಲ್ಲಿಮೊದಲನೇ ಹಂತದ ಯೋಜನೆ ಅನುಷ್ಠಾನಗೊಳಿಸಲು ನಿವೇಶನಾಕಾಂಕ್ಷಿಗಳಿದ ಬೇಡಿಕೆ ಸಮೀಕ್ಷೆಗಾಗಿ ಸಿದ್ಧತೆ ನಡೆಸಲಾಗಿದೆ,’’ ಎಂದು ಎಂಡಿಎ ಆಯುಕ್ತ ಕೆ.ಆರ್ .ರಕ್ಷಿತ್ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. 200 ರೈತರಿಂದ ಸಮ್ಮತಿ ಪತ್ರ: ನಾಗವಾಲದಲ್ಲಿ429.13 ಎಕರೆ (366 ರೈತರು), ಬೊಮ್ಮನಹಳ್ಳಿ 766.33 ಎಕರೆ (523 ರೈತರು), ದೊಡ್ಡಮರಗೌಡನಹಳ್ಳಿ 336.38 ಎಕರೆ (139 ರೈತರು), ಕಮ್ಮರಹಳ್ಳಿ 538.20 ಎಕರೆ (496 ರೈತರು) ಸೇರಿ ಒಟ್ಟು 1500 ರೈತರಿಂದ 2,070 ಎಕರೆ ಜಾಗವನ್ನು ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ಇದರಲ್ಲಿಈಗಾಗಲೇ ಸುಮಾರು 200 ರೈತರು (800 ಎಕರೆ) ಸಮ್ಮತಿ ಪತ್ರ ಸಲ್ಲಿಸಿದ್ದಾರೆ. ಜತೆಗೆ 400 ಎಕರೆ ಸರಕಾರಿ ಜಮೀನು ಇದೆ. ಇವೆರಡನ್ನೂ ಒಳಗೊಂಡಂತೆ ಮೊದಲ ಹಂತದಲ್ಲಿಒಟ್ಟು 1,200 ಎಕರೆಯಲ್ಲಿಬಡಾವಣೆ ನಿರ್ಮಿಸಲು ಯೋಜಿಸಲಾಗಿದೆ. ಹಳೆಯ ಅರ್ಜಿಗಳ ಪರಿಗಣನೆ: ‘‘ಹಿಂದೆ ಎಂಡಿಎ ಸೈಟ್ ಗಳಿಗೆ ಅರ್ಜಿ ಸಲ್ಲಿಸಿದ್ದ 70 ಸಾವಿರದಿಂದ 80 ಸಾವಿರ ಅರ್ಜಿದಾರರು 35 ವರ್ಷಗಳಿಂದ ಕಾಯುತ್ತಿದ್ದಾರೆ. ಈ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಅರ್ಜಿದಾರರನ್ನು ಗುರುತಿಸಿ ಸಂಪರ್ಕಿಸಲಾಗುವುದು,’’ ಎಂದು ಆಯುಕ್ತರು ಹೇಳಿದರು. ಎಂಡಿಎ ಅನುಮೋದನೆ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಎಂಡಿಎ ಬೋರ್ಡ್ ಈಗಾಗಲೇ ಬೊಮ್ಮನಹಳ್ಳಿ ಟೌನ್ ಶಿಪ್ ಗೆ ಅನುಮೋದನೆ ನೀಡಿದೆ. ಫೇಸ್ -1ಗೆ ಸಂಬಂಧಿಸಿದಂತೆ ಸರಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಯೋಜನೆಯಿಂದ ಮೈಸೂರಿನಲ್ಲಿಮೂಲ ಸೌಕರ್ಯಗಳೊಂದಿಗಿನ ಆಧುನಿಕ ವಸತಿ ಬಡಾವಣೆ ರೂಪುಗೊಳ್ಳಲಿದ್ದು, ರೈತರಿಗೂ ಲಾಭ ಒದಗಿಸುವ ದ್ವಿಪಕ್ಷೀಯ ಯೋಜನೆಯಾಗಿದೆ. ಬಳಿಕ ಎರಡನೇ ಹಂತದ ವಸತಿ ಬಡಾವಣೆಗೆ ಡಿಪಿಆರ್ ತಯಾರಿಸಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಬಡಾವಣೆ ರಚಿಸಿ ಬೇಡಿಕೆಗನುಸಾರ ಕಾನೂನು ಬದ್ಧವಾಗಿ ಅರ್ಜಿ ಕರೆದು ಅರ್ಹ ಆಕಾಂಕ್ಷಿಗಳಿಗೆ ನಿವೇಶನ ಕೊಡುವ ನಿಟ್ಟಿನಲ್ಲಿಪ್ರಾಧಿಕಾರವು ಕ್ಷಿಪ್ರಗತಿಯಲ್ಲಿಪ್ರಯತ್ನ ಮಾಡಲಿದೆ.