ಕಧಿವಿಧಿತೆಧಿಗಳು ಮೌಲ್ಯ ಕಧಿಟ್ಟಿಧಿಕೊಧಿಡಲಿ

Contributed bychowlurmaheshgowda@gmail.com|Vijaya Karnataka

ಹೊಸದುರ್ಗದಲ್ಲಿ ಕವಿ ಧನಂಜಯ ಮೆಂಗಸಂದ್ರ ಅವರ 'ಬೋಳು ಬೊಡ್ಡೆಯ ಚಿಗುರು' ಕವನ ಸಂಕಲನ ಬಿಡುಗಡೆಯಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಅವರು ಕವಿತೆಗಳು ಮೌಲ್ಯಗಳನ್ನು ಕಟ್ಟಿಕೊಡಬೇಕು ಎಂದು ಅಭಿಪ್ರಾಯಪಟ್ಟರು. ಕವಿತೆಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ ಎಂದರು. ವನಕಲ್ಲುಮಲ್ಲೇಶ್ವರ ಕ್ಷೇತ್ರದ ಬಸವರಮಾನಂದ ಸ್ವಾಮೀಜಿ ಅವರು ಕವಿತೆಗಳಲ್ಲಿ ಅನುಭವ ಇರಬೇಕು ಎಂದರು. ಸಾಧಕರನ್ನು ಸನ್ಮಾನಿಸಲಾಯಿತು.

poems and living rights why its important to value

ಕಧಿವಿಧಿತೆಧಿಗಳು ಮೌಲ್ಯ ಕಧಿಟ್ಟಿಧಿಕೊಧಿಡಲಿ

ವಿಕ ಸುದ್ದಿಲೋಕ ಹೊಸದುರ್ಗ

ಕವಿತೆಗಳು ಮೌಲ್ಯಗಳನ್ನು ಕಟ್ಟಿಕೊಡುವಂತ ಕೆಲಸ ಮಾಡಬೇಕು. ಇಲ್ಲದಿದ್ದರೆ ಗಟ್ಟಿತನ ಕಳೆದುಕೊಳ್ಳುತ್ತವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್ .ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಎಸ್ .ಎಲ್ .ವಿ ಕನ್ವೆಧಿನ್ಷನ್ ಹಾಲ್ ನಲ್ಲಿಮರೆಯದ ಮಾತು ಮತ್ತು ಹೆಜ್ಜೆ ಸಾಲು ಒಂದು ಸಾಂಸ್ಕೃತಿಕ ವೇದಿಕೆ ಹಾಗೂ ಸಿದ್ದಪ್ಪ ಶ್ರೀಪ್ರತಿಷ್ಠಾನ ಸಹಯೋಗದಲ್ಲಿಭಾನುವಾರ ಆಯೋಜಿಸಿದ್ದ ಕವಿ ಧನಂಜಯ ಮೆಂಗಸಂದ್ರ ಅವರ ‘ಬೋಳು ಬೊಡ್ಡೆಯ ಚಿಗುರು’ ಎಂಬ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ, ಮಾತನಾಡಿದರು.

ಕವಿತೆಗಳು ಇಂದು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ನಾವು ಬರೆಯುವ ಕವಿತೆಗಳಲ್ಲಿಗಟ್ಟಿ ತನವಿರಬೇಕು. ನಮ್ಮಲ್ಲಿರುವ ಮೌಲ್ಯಗಳು ಒಂದಾದರೆ ನಾವು ನಡೆದುಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ. ನಾವು ಇಂದು ಮೌಲ್ಯಗಳ ನವೀಕರಣ ಮಾಡಬೇಕು. ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿಯುವಂತಹ ಕೆಲಸಗಳನ್ನ ಕವಿತೆಗಳು ಮಾಡಬೇಕು. ಕವಿತೆಗಳ ರಚನೆಯಲ್ಲಿವಸ್ತುಗಳು ಕೂಡ ಬಹು ಮುಖ್ಯ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ವನಕಲ್ಲುಮಲ್ಲೇಶ್ವರ ಕ್ಷೇತ್ರದ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಕವಿತೆಗಳಲ್ಲಿಅನುಭವ ಇರಬೇಕು. ಅಂತಹ ಅನುಭವಗಳು ಬರಬೇಕಾದರೆ ಕವಿಗೋಷ್ಠಿಗಳಲ್ಲಿಭಾಗವಹಿಸಬೇಕು ಎಂದರು.

ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಂ.ಆರ್ .ಶಾಂತಪ್ಪ, ಕಾಡುಗೊಲ್ಲಸಂಘದ ತಾಲೂಕು ಅಧ್ಯಕ್ಷ ಟಿ.ರವೀಂದ್ರ, ಸಾಹಿತಿ ಧನಂಜಯ ಮೆಂಗಸಂದ್ರ, ಗುತ್ತಿಗೆದಾರ ಶ್ರೀನಿವಾಸ, ಜಾನಪದ ಅಕಾಡಮಿ ಸದಸ್ಯ ಮಲ್ಲಿಕಾರ್ಜುನ ಕಲಮರಹಳ್ಳಿ, ಮುಖಂಡರಾದ ಕೆ.ಎಸ್ . ಕಲ್ಮಠ್ , ಹೆಗ್ಗರೆ ರಂಗಪ್ಪ, ನಿವೃತ್ತ ಡಿಡಿಪಿಐ ಸಿ.ರಾಮಪ್ಪ, ಗೋ.ತಿಪ್ಪೇಶ್ ಇಧಿದ್ದರು.

---

8ಎಚ್ .ಎಸ್ .ಡಿ2

ಹೊಸದುರ್ಗದ ಎಸ್ .ಎಲ್ .ವಿ. ಕನ್ವೆನ್ಷನ್ ಹಾಲ್ ನಲ್ಲಿಭಾನುವಾರ ‘ಬೋಳು ಬೊಡ್ಡೆಯ ಚಿಗುರು’ ಕಧಿವನ ಸಂಕಧಿಲಧಿನಧಿವನ್ನು ಚಿಂತಕ ಎಸ್ .ಜಿ. ಸಿದ್ಧರಾಮಯ್ಯ ಬಿಡುಗಡೆಗೊಳಿಸಿದರು.