ಇಂದು ವಿದ್ಯುತ್ ವ್ಯತ್ಯಯ

Contributed bykeshavmurthy8@gmail.com|Vijaya Karnataka

ಫೆಬ್ರುವರಿ 11ರಂದು ಮೈಸೂರಿನ ರಾಜೀವನಗರ ಮತ್ತು ದೇವನೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ. ಇದರಿಂದಾಗಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ರಾಜೀವನಗರ, ಕ್ರಿಶ್ಚಿಯನ್ ಕಾಲೋನಿ, ಯಾಸಿನ್ ಮಸ್ಜಿದ್, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಆಲ್ ಬಜಾರ್, ಅಂಬೇಡ್ಕರ್ ಭವನ ರಸ್ತೆ, ನಾರಾಯಣ ಹೃದಯಾಲಯ, ಕಾಮನಕೆರೆಹುಂಡಿ, ಕೆ.ಎಚ್.ಬಿ. ಬಡಾವಣೆ, ಆಸೀನಾ ಬಡಾವಣೆ, ಬಿ.ಡಿ.

power outage scheduled maintenance on february 11

ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ ಮೈಸೂರು: ರಾಜೀವ್ ನಗರ ಮತ್ತು ದೇವನೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿಸೆಸ್ಕ್ ವತಿಯಿಂದ ಫೆ.11ರಂದು ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಾಗೂ ಹಾಲಿ ಇರುವ 220 ಕೆ.ವಿ ಹೂಟಗಳ್ಳಿ -ವಾಜಮಂಗಲ-ಟಿ.ಕೆ.ಹಳ್ಳಿ ಏಕಮುಖ ವಿದ್ಯುತ್ ಪ್ರಸರಣ ಮಾರ್ಗದ ಬದಲಾಗಿ 75.594 ಕಿ.ಮೀ ದ್ವಿಮುಖ ವಿದ್ಯುತ್ ಗೋಪುರ ಹಾಗೂ ದ್ವಿಮುಖ ವಿದ್ಯುತ್ ಮಾರ್ಗವನ್ನು ನಿರ್ಮಾಣ ಮಾಡುವ ಕಾಮಗಾರಿ ಕೆಲಸದ ನಿಮಿತ್ತ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಈ ಪ್ರದೇಶಗಳಲ್ಲಿವಿದ್ಯುತ್ ಸರಬರಾಜಿನಲ್ಲಿಅನಿಯಮಿತ ವ್ಯತ್ಯಯವಾಗಲಿದೆ. ರಾಜೀವನಗರ 2ನೇ ಹಂತ, ಕ್ರಿಶ್ಚಿಯನ್ ಕಾಲೊನಿ, ಯಾಸಿನ್ ಮಸ್ಜಿದ್

ಎಸ್ .ಬಡಾವಣೆ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಆಲ್ ಬಜಾರ್ ಮಸ್ಜಿದ್ ವೃತ್ತ, ಅಂಬೇಡ್ಕರ್ ಭವನ ರಸ್ತೆ, ಕ್ಯೂಬಾ ಮಸ್ಜಿದ್ ವೃತ್ತ, ನಾರಾಯಣ

ಹೃದಯಾಲಯ ಆಸ್ಪತ್ರೆ, ಕಾಮನಕೆರೆಹುಂಡಿ, ಕೆ.ಎಚ್ .ಬಿ. ಬಡಾವಣೆ, ಆರ್ ಟಿಒ-55, ಆಸೀನಾ ಬಡಾವಣೆ, ರಾಜೀವನಗರ 3ನೇ ಹಂತ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು. ಬಿ.ಡಿ ಕಾಲೊನಿ, ಅಜೀಜ್ ಸೇಠ್ ನಗರ, 320 ಮನೆ, ಕೆಸರಿ ಕಾಲೊನಿ, ಮಹದೇವಪುರ ಮುಖ್ಯ ರಸ್ತೆ, ಶಕ್ತಿನಗರ, ರಾಜ್ ಕುಮಾರ್ ರಸ್ತೆ, ಕಲ್ಯಾಣಗಿರಿ, ಅಕ್ಷಯ ಭಂಡಾರ್ , ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯ, ಸಾತಗಳ್ಳಿ, ಗಳಿಗರಹುಂಡಿ, ನೆಹರು ನಗರ, ಸಾತಗಳ್ಳಿ ಗ್ರಾಮ, ಡಿ.ಟಿ.ಎಸ್ ರಾವ್ ನಗರ, ವಿ.ಟಿ.ಯೂ ಕಾಲೇಜು ಎದುರು, ಸನ್ ಪ್ಯೂರ್ ಬಡಾವಣೆ, ಸಾತಗಳ್ಳಿ ಬಿ ಜೋನ್ , ವಿಟಿಯೂ ಕಾಲೇಜು, ಭಾರತ್ ನಗರ, ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.