ವಿಕ ಸುದ್ದಿಲೋಕ ಬೋರಗಾಂವ
ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ನಾನಾ ಭಾಗಗಳ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ ಆದಮಾಪುರದ ಸಂತ ಬಾಳುಮಾಮಾ ಮಂದಿರದಲ್ಲಿಮಾ. 9ರಿಂದ ಭಂಡಾರ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿಮಾ. 3 ರಿಂದ 6 ರ ವರೆಗೆ ಮಂದಿರ ಮುಚ್ಚಲಾಗುತ್ತಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಧೈರ್ಯಶೀಲ ಭೋಸಲೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಈ ಕುರಿತು ದೇವಸ್ಥಾನ ಸಮಿತಿಯ ಸಭೆಯಲ್ಲಿನಿರ್ಣಯಿಸಲಾಗಿದೆ. ಮಾ. 9ರಿಂದ ನಡೆಯಲಿರುವ ಭಂಡಾರ ಉತ್ಸವದ ಹಿನ್ನೆಲೆಯಲ್ಲಿಮಂದಿರ ಪರಿಸರ, ಮಹಾಪ್ರಸಾದ ಕೋಣೆ, ಭಕ್ತರ ನಿವಾಸ ಹಾಗೂ ದೇಣಿಗೆ ಕಾರ್ಯಾಲಯದಲ್ಲಿಸ್ವಚ್ಛತೆ ಕಾರ್ಯ ನಡೆಯಲಿದೆ. ಮಾ.9 ರಿಂದ ಮತ್ತೆ ಮಂದಿರ ತೆರೆಯಲಾಗುತ್ತಿದ್ದು, ಎಂದಿನಂತೆ ದರ್ಶನ ಪಡೆಯಬಹುದಾಗಿದೆ,’’ ಎಂದರು.
ಸುದ್ದಿಗೋಷ್ಠಿಯಲ್ಲಿಕಾರ್ಯದರ್ಶಿ ಪುಂಡಲೀಕ ಹೊಸಮನಿ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
- 28ಐಸಿಎಚ್ 2
ಸಂತ ಬಾಳುಮಾಮಾ.

