ಕೊಪ್ಪಳ: ಎಚ್ಚರಿಕೆಯಿಂದ ಹೋಳಿ ಆಚರಿಸಿ

Contributed bygvittalslb@gmail.com|Vijaya Karnataka

Koppal Deputy Commissioner Dr. Suresh B. Itnal has urged citizens to celebrate the upcoming Holi festival with caution. He stressed the importance of respecting religious sentiments and avoiding the use of harmful chemical colors. Public gatherings near examination centers are prohibited to ensure students are not disturbed.

koppal holi festival celebrate with caution government police guidelines

ಎಚ್ಚರಿಕೆಯಿಂದ ಹೋಳಿ ಆಚರಿಸಿ

*ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಸೂಚನೆÜ

ವಿಕ ಸುದ್ದಿಲೋಕ ಕೊಪ್ಪಳ

‘‘ಜಿಲ್ಲಾದ್ಯಂತ ಮಾ. 2, 3 ಮತ್ತು 4 ರಂದು ಆಚರಿಸುವ ಹೋಳಿ ಹಬ್ಬದಲ್ಲಿಧಾರ್ಮಿಕ

ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಚ್ಚರವಹಿಸಿ ಹೋಳಿಹಬ್ಬ ಆಚರಿಸಿ,’’ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.

ನಾನಾ ಧರ್ಮಗಳ ಮುಖಂಡರು, ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಹಬ್ಬಗಳು ಸಂಭ್ರಮ ಹೆಚ್ಚಿಸುವ ಹಾಗೂ ಹಂಚುವ ಉದ್ದೇಶ ಹೊಂದಿದ್ದು, ಇನ್ನೊಬ್ಬರಿಗೆ ತೊಂದರೆಯಾ ಗಬಾರದು. ಮಹಿಳೆಯರು ಹಾಗೂ ಮಕ್ಕಳ ಮೇಲೆ ಒತ್ತಾಯಪೂರ್ವಕ ಬಣ್ಣ ಎರಚಬಾರದು. ಹಾನಿಕಾರಕ ರಾಸಾಯನಿಕವುಳ್ಳ ಬಣ್ಣಗಳ ಬಳಕೆ ಮಾಡಬಾರದು. ಅಲ್ಲದೇ

ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾದ್ದು, ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಅಂತರದಲ್ಲಿಯಾವುದೇ ಗಲಾಟೆ, ಹೋಳಿ ಆಚರಣೆ ಮಾಡಬಾರದು. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಾರದು. ಬೇರೆ ಊರುಗಳಿಂದ ಬರುವ ಬಸ್ ಗಳನ್ನು ತಡೆದು ಒತ್ತಾಯಪೂರ್ವಕ ಬಣ್ಣ ಎರಚಬಾರದು. ಆಯಾ ಪ್ರದೇಶಕ್ಕನುಗುಣವಾಗಿ ಮಾ.2ರಿಂದ 4ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಬಕಾರಿ ಇಲಾಖೆ ನಿರಂತರ ನಿಗಾವಹಿಸಿ ಅಕ್ರಮ ಮದ್ಯ ಮಾರಾಟ ಕಂಡುಬಂದಲ್ಲಿಅವರ ವಿರುದ್ಧ ಕ್ರಮ ಕೈಗೊಳ್ಳಬೇಕು,’’ ಎಂದರು.

ಶಾಂತಿಯುತವಾಗಿ ಹಬ್ಬ ಆಚರಿಸಿ:

ಹೋಳಿ ನಂತರ ಸ್ನಾನಕ್ಕೆಂದು ಟಿ.ಬಿ.ಡ್ಯಾಂ ಹಾಗೂ ಸಾಣಾಪುರ ಕೆರೆಗೆ ಜನ ಹೋಗುವುದರಿಂದ ಈ ಸ್ಥಳಗಳಲ್ಲಿಅಗ್ನಿಶಾಮಕದಳ, ಎಸ್ ಡಿಆರ್ ಎಫ್ ತಂಡ ಹಾಗೂ ನುರಿತ ಈಜುಗಾರರನ್ನು ನಿಯೋಜಿಸಬೇಕು. ಯುವಕರು ಆವೇಷದಲ್ಲಿಅನಗತ್ಯ ಗಲಾಟೆ ಮಾಡಿಕೊಳ್ಳುವ ಸಂಭವವಿರುತ್ತದೆ. ಹಿರಿಯರು ಈ ಬಗ್ಗೆ ತಿಳಿವಳಿಕೆ ನೀಡಿ, ಶಾಂತಿಯುತವಾಗಿ ಹಬ್ಬ ಆಚರಿಸಲು ಸೂಚಿಸಬೇಕು,’’ ಎಂದರು.

ಪೊಲೀಸ್ ಗಸ್ತು:

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ .ಅರಸಿದ್ದಿ ಮಾತನಾಡಿ, ‘‘ಹೋಳಿ ಹಬ್ಬದ ನೆಪದಲ್ಲಿಸಾರ್ವಜನಿಕರಿಗೆ, ಮಹಿಳೆಯರಿಗೆ ತೊಂದರೆ ಉಂಟಾಗಬಾರದು. ಮಸೀದಿಗಳಿಗೆ ಬಣ್ಣ ಎರಚಬಾರದು. ಜಿಲ್ಲಾದ್ಯಂತ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಟಿ.ಬಿ.ಡ್ಯಾಂ, ಸಾಣಾಪುರ ಕೆರೆಯ ಸುತ್ತ ಹಿಚ್ಚಿನ ನಿಗಾ ಇಡಲಾಗಿದೆ. ಯುವಕರ ಮಧ್ಯೆ ಗಲಾಟೆಗಳಾದಾಗ ಅಥವಾ ಏನೇ ತೊಂದರೆ ಉಂಟಾದಾಗ ಸಾರ್ವಜನಿಕರು 112, ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಮಾಹಿತಿ ನೀಡಬೇಕು,’’ ಎಂದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಡಿವೈಎಸ್ ಪಿ ಮುತ್ತಣ್ಣ ಸವರಗೋಳ, ಜಿಲ್ಲಾನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಅಬಕಾರಿ ಡಿವೈಎಸ್ ಪಿ ಆಂಜನೇಯ, ನಾನಾ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲತಾಲೂಕುಗಳ ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

---

28-ಕೆಪಿಎಲ್ ವಿಠ್ಠಲ ಫೊಟೊ-24

ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿಹೋಳಿ ಹಬ್ಬ ನಿಮಿತ್ತ ಶಾಂತಿ ಸಭೆ ನಡೆಯಿತು.