ವಿಕ ಸುದ್ದಿಲೋಕ ವಿರಾಜಪೇಟೆ
ವಿದ್ಯಾರ್ಥಿಗಳಲ್ಲಿವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತ ಸಹಕಾರಿ ಎಂದು ಎಸ್ ಡಿಎಂಸಿ ಅಧ್ಯಕ್ಷ ಯತೀಶ್ .ಸಿ.ಎಸ್ ಹೇಳಿದರು.
ಪೆರಾಜೆ ಕುಂದಲ್ಪಾಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಮಕ್ಕಳ ಸಂತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘‘ಶಾಲಾ ಕಲಿಕಾ ಅವಧಿಯಲ್ಲಿಪಠ್ಯ ವಿಷಯಗಳ ಜೊತೆ ಸಹಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಬೇಕು. ಕ್ರೀಡೆ ಶಿಸ್ತು ವ್ಯವಹಾರ ಕೌಶಲ್ಯ ಭಾಷೆ ಬೆಳವಣಿಗೆ ಇತ್ಯಾದಿಗಳನ್ನು ವೃದ್ಧಿಸಿಕೊಳ್ಳಬೇಕು,’’ ಎಂದರು.
‘‘ಮಕ್ಕಳ ಸಂತೆಯಲ್ಲಿವಿದ್ಯಾರ್ಥಿಗಳು ತಾವು ತಂದು ಸರಕುಗಳನ್ನು ಮಾರಾಟ ಮಾಡಿದರು. ಶಾಲೆಯಲ್ಲಿಸಂತೆಯ ವಾತಾವರಣ ನಿರ್ಮಾಣವಾಗಿತ್ತು. ಶಾಲಾ ಮುಖ್ಯಶಿಕ್ಷಕ ಕುಮಾರ್ .ಎನ್ .ಎಸ್ , ಎಸ್ ಡಿಎಂಸಿ ಸದಸ್ಯರು, ಪೋಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪೊಟೊ:ಎಂಡಿಕೆ26ವಿಪಿಟಿ03ಎ:
ಪೆರಾಜೆ ಕುಂದಲ್ಪಾಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಮಕ್ಕಳ ಸಂತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಯತೀಶ್ ಸಿ.ಎಸ್ .ಉದ್ಘಾಟಿಸಿದರು.

