15ಕ್ಕೆ ‘ರನ್ ಫಾರ್ ಹೋಪ್ 10ಎ’ ಸ್ಪರ್ಧೆ
ವಿಕ ಸುದ್ದಿಲೋಕ ಅಂಕೋಲಾ
ರೋಟರಿ ಕ್ಲಬ್ ಅಂಕೋಲಾ ಮತ್ತು ಕ್ಲಬ್ ಫಿಟ್ನೆಸ್ ಆಶ್ರಯದಲ್ಲಿ‘ಜತೆಯಾಗಿ ಓಡೋಣ, ಸೇರಿ ಬೆಳೆಯೋಣ’ ಎಂಬ ಘೋಷವಾಕ್ಯದೊಂದಿಗೆ ಉತ್ತರ ಕನ್ನಡ ಜಿಲ್ಲಾಮಟ್ಟದ ‘ರನ್ ಫಾರ್ ಹೋಪ್ 10ಎ’ ಸ್ಪರ್ಧೆಯು ಮಾರ್ಚ್ 15 ರಂದು ಜೈಹಿಂದ್ ಮೈದಾನದಲ್ಲಿನಡೆಯಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸತೀಶಕುಮಾರ ಮಹಾಲೆ ಹೇಳಿದರು.
ಪಟ್ಟಣದಲ್ಲಿಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸ್ಪರ್ಧೆಯಲ್ಲಿಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿದ್ದು, ಮೊದಲ 10,000, ದ್ವಿತೀಯ 5,000, ತೃತೀಯ 3,000 ರೂ. ಬಹುಮಾನವಿದೆ. ಅಂದು ಬೆಳಗ್ಗೆ 6ಕ್ಕೆ ಟಿ-ಶರ್ಟ್ ಮತ್ತು ಬಿಬ್ ಸಂಖ್ಯೆಗಳ ವಿತರಣೆ ನಡೆಯಲಿದೆ. ನಂತರ ಸರಿಯಾಗಿ ಬೆಳಗ್ಗೆ 7ಕ್ಕೆ ಓಟ ಪ್ರಾರಂಭವಾಗಲಿದೆ ಎಂದರು.
4 ಕಿಮೀ ಮೋಜಿನ ಓಟದ ಸ್ಪರ್ಧೆಯಿದ್ದು ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು. ಮಾರ್ಚ್ 10 ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಮಾಹಿತಿಗಾಗಿ ವಿN್ನೕಶ್ ನಾಯ್ಕ (9900833434), ಸತೀಶ್ ಕುಮಾರ್ ಮಹಾಲೆ (9741085728), ಸಂಕೇತ್ ಹುಲಸ್ವಾರ (6364731361) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಎನ್ ಸಿಸಿ ಕಮಾಂಡರ ಜಿ.ಆರ್ .ತಾಂಡೇಲ್ ಮಾತನಾಡಿದರು. ಕ್ಲಬ್ ವಿ ಫಿಟ್ನೆಸ್ ಮಾಲಕ ವಿN್ನೕಶ ನಾಯ್ಕ, ರೋಟರಿ ಕ್ಲಬ್ ಖಜಾಂಚಿ ವಸಂತ ನಾಯ್ಕ, ಪದಾಧಿಕಾರಿಗಳಾದ ಸಚಿನ ನಾಯ್ಕ, ಸಂತೋಷ ಆಚಾರಿ, ಸಂಕೇತ ಹುಲಸ್ವಾರ, ಅಭಿಷೇಕ್ ನಾಯ್ಕ, ವಿನಾಯಕ ಕುಂಬಾರ, ಅಕ್ಷಯ ನಾಯ್ಕ, ಲಕ್ಷ್ಮಿಕಾಂತ ನಾಯ್ಕ, ಗಣೇಶ ನಾಯ್ಕ ಇತರರಿದ್ದರು.
ಫೋಟೊ : 28ಅಂಕೋಲಾ2
ಅಂಕೋಲಾದಲ್ಲಿನಡೆಯಲಿರುವ ಜಿಲ್ಲಾಮಟ್ಟದ ಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಸತೀಶಕುಮಾರ ಮಹಾಲೆ ಬಿಡುಗಡೆ ಮಾಡಿದರು.

