ಪೆರ್ಲ: ನಿವೃತ್ತ ಶಿಕ್ಷಕ ಉಮೇಶ್ ಪೆರ್ಲ ರಚಿಸಿದ ‘ಆನೆ ಬೈದ್ಯ’ ಪುಸ್ತಕ ಫೆ.6ರಂದು ಬಿಡುಗಡೆಗೊಳ್ಳಲಿದೆ.
ಕುಂಬಳೆ ಕಿದೂರು ಸಮೀಪ ದಂಡೆಗೋಳಿ ಅಮೆತ್ತೋಡು ಶ್ರೀ ಧೂಮಾವತಿ ದೈವಸ್ಥಾನದ ಪುನಃ ಪ್ರತಿಷ್ಠೆ ಹಾಗೂ ಶುದ್ಧಿಕಲಶ ಅಂಗವಾಗಿ ಫೆ.6ರಂದು ಮಧ್ಯಾಹ್ನ 12.30ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಬಿಡುಗಡೆಗೊಳಿಸುವರು. ಬ್ರಹ್ಮ ಶ್ರೀ ಚಕ್ರಪಾಣಿ ದೇವಪೂಜಿತ್ತಾಯ, ಮಾಯಿಪ್ಪಾಡಿ ಅರಮನೆಯ ಶ್ರೀದಾನಮಾರ್ತಾಂಡವರ್ಮ ರಾಜ( ರಾಮಂತರಸರು), ಸುಬ್ಬಯ್ಯ ರೈ ಇಚ್ಲಂಪಾಡಿ, ಮಂಜುನಾಥ ಆಳ್ವ ಮಡ್ವ, ಶ್ರೀಧರ ಪೂಜಾರಿ ಗೆಜ್ಜೆಗಿರಿ, ಡಿ.ಎಸ್ .ಮೋಹನ್ ಕುಮಾರ್ ಹಾಗೂ ಶಂಕರ ಟೈಲರ್ ಬೆಜಪ್ಪೆ ಉಪಸ್ಥಿತರಿರಲಿದ್ದಾರೆ.
( 4ಪಿಎಲ್ ಆನೆ: ಆನೆ ಬೈದ್ಯ ಕೃತಿ
4ಪಿಎಲ್ ಉಮೇಶ್ : ಉಮೇಶ್ ಪೆರ್ಲ ) ( ಈ ಪೋಟೋ ಬೇಡ)

