ಲೀಡ್ 1

Contributed bybabitha.salian@timesgroup.com|Vijaya Karnataka

ಚಿತ್ರರಂಗದಲ್ಲಿ ನಾಯಕ ನಟರ ಮಕ್ಕಳು ಸುಲಭವಾಗಿ ಹೀರೋ ಆಗುತ್ತಾರೆ. ಆದರೆ, ಒಂದು ಕಾಲದ ಸೂಪರ್‌ಸ್ಟಾರ್‌ ನಟಿಯರ ಪುತ್ರಿಯರು ನಾಯಕಿಯಾಗಿ ಗುರುತಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಶ್ರುತಿ ಮಗಳು ಗೌರಿ, ಸುಧಾರಾಣಿ ಪುತ್ರಿ ನಿಧಿ, ಉಪ್ಪಿ ಮಗಳು ಐಶ್ವರ್ಯಾ, ಮಾಲಾಶ್ರೀ ಪುತ್ರಿ ಆರಾಧನಾ ಸೇರಿದಂತೆ ಹಲವು ನಟಿಯರ ಮಕ್ಕಳು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇವರು ನಟನೆಗೆ ಬೇಕಾದ ಎಲ್ಲಾ ತಯಾರಿ ನಡೆಸಿದ್ದರೂ, ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿಲ್ಲ.

why is the film industry tough for actresses children

ನಟಿಯರ ಮಕ್ಕಳು ಯಾಕೆ ಮಿನುಗುತ್ತಿಲ್ಲ?

ಇಂಟ್ರೊ

ಚಿತ್ರೋದ್ಯಮದಲ್ಲಿನಾಯಕ ನಟರ ಮಕ್ಕಳು ಹೀರೊ ಆಗುವುದು ಸುಲಭ. ಅದರೆ ಒಂದು ಕಾಲದಲ್ಲಿಸೂಪರ್ ಸ್ಟಾರ್ ಆಗಿ ಮರೆದ ನಟಿಯರ ಪುತ್ರಿಯರು ನಾಯಕಿಯಾಗಿ ಗುರುತಿಸಿಕೊಳ್ಳುವುದು ಸುಲಭವಲ್ಲ. ಕನ್ನಡದಲ್ಲಿಈಗ ಕೆಲವು ನಟಿಯರ ಮಕ್ಕಳು ನಟನೆಗೆ ಬರಲು ಸಿದ್ಧರಿದ್ದರೂ, ಅವರಿನ್ನೂ ಲಾಂಚ್ ಆಗಿಲ್ಲ. ಯಾಕೆ?

ಕಿರಣ್ ಚಂದ್ರ

ರಾಜಕೀಯ, ಉದ್ಯಮ, ಚಿತ್ರರಂಗದಲ್ಲಿನೆಪೋಟಿಸಂ ಹೊಸದೇನಲ್ಲ. ಅದರೆ ಪ್ರತಿಭೆ ಇದ್ದವರಷ್ಟೇ ಚಿತ್ರರಂಗದಲ್ಲಿಉಳಿಯಲು ಮತ್ತು ಬೆಳೆಯಲು ಸಾಧ್ಯ. ಈ ಕ್ಷೇತ್ರದಲ್ಲಿಪ್ರತಿಭೆ ತೋರಿಸಲು ವೇದಿಕೆ ಬೇಕು. ಅದು ಒಂದು ಕಾಲದಲ್ಲಿಬೆಳ್ಳಿತೆರೆಗೆ ರಂಗು ತುಂಬಿದ ನಟಿಯರ ಮಕ್ಕಳಿಗೆ ಸಿಗುವುದಿಲ್ಲಎಂದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬರುವ ಹೊಸ ನಟಿಯರಿಗೆ ಇಲ್ಲಿಅವಕಾಶ ಪಡೆಯುವುದು ಇನ್ನೂ ಕಷ್ಟ. ಹೀಗೆ ಒಂದು ಕಾಲದಲ್ಲಿಸ್ಯಾಂಡಲ್ ವುಡ್ ಆಳಿದ ಕೆಲವು ನಟಿಯರ ಪುತ್ರಿಯರು ಇನ್ನೂ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದು, ಅವರ ವಿವರ ಇಲ್ಲಿದೆ.

ಶ್ರುತಿ ಮಗಳು ಗೌರಿ

ಕಳೆದ ಕೆಲವು ವರ್ಷಗಳಿಂದ ಖ್ಯಾತ ನಟಿ ಶ್ರುತಿ ಮಗಳು ಗೌರಿ ಸ್ಯಾಂಡಲ್ ವುಡ್ ಗೆ ಬರುತ್ತಾರೆ ಎನ್ನಲಾಗುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ25ಕ್ಕೂ ಹೆಚ್ಚು ವರ್ಷಗಳಿಂದ ಸಕ್ರಿಯರಾಗಿರುವ ಕನ್ನಡ ನಟಿ ಶ್ರುತಿ ಮಗಳು ಗೌರಿ ಕೂಡ ಅಮ್ಮನಂತೆ ಸರಳ ಸುಂದರಿ. ಹಾಡುವುದರಲ್ಲೂಗಮನ ಸೆಳೆದಿರುವ ಅವರು ಕನ್ನಡದ ಪ್ರತಿಭಾನ್ವಿತ ನಿರ್ದೇಶಕನ ಮಗಳು. ಶ್ರುತಿಗೂ ತಮ್ಮ ಪುತ್ರಿಯನ್ನು ಒಂದೊಳ್ಳೆಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸಬೇಕೆನ್ನುವ ತುಡಿತವಿದೆ. ಅವರ ಸೋದರಿ ಮಗಳು ಕೀರ್ತಿ ಈಗಾಗಲೇ ‘ದೇವರು ಋುಜು ಮಾಡಿದನು’ ಚಿತ್ರದ ನಾಯಕಿಯಾಗಿದ್ದಾರೆ. ಸಿನಿಮಾಗೆ ಬೇಕಾದ ಎಲ್ಲಾಬಗೆಯ ತಯಾರಿ ನಡೆಸಿರುವ ಗೌರಿ ಇನ್ನೂ ಲಾಂಚ್ ಆಗಿಲ್ಲ.

ಸುಧಾರಾಣಿ ಪುತ್ರಿ ನಿಧಿ

ಬಹಳ ಸಣ್ಣ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿ ಸುಧಾರಾಣಿ ಮಗಳು ನಿಧಿ ಕೂಡ ಚಂದನವನದಲ್ಲಿಮಿಂಚುತ್ತಾರೆ ಎನ್ನಲಾಗುತ್ತಿತ್ತು. 2019ರಲ್ಲಿಜೋಗಿ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿಅವರು ನಟಿಸುವುದು ಬಹುತೇಕ ಖಚಿತಗೊಂಡಿತ್ತು. ನಿಧಿ ಕೂಡ ತನ್ನ ಅಮ್ಮನಂತೆ ನೋಡಲು ಸರಳ ಸುಂದರಿ. ಶಾಸ್ತ್ರೀಯ ನೃತ್ಯದಲ್ಲಿಪರಿಣಿತಿ ಹೊಂದಿರುವ ಅವರು ಪ್ರಾಣಿ ಪ್ರಿಯೆ ಕೂಡ ಹೌದು. ಸುಧಾರಾಣಿಗೆ ಈಗಲೂ ಸಾಕಷ್ಟು ಆಪರ್ ಗಳು ಸಿಗುತ್ತಿವೆ. ಅವರು ಇಂದಿಗೂ ಮಿಂಚುತ್ತಲೇ ಇದ್ದಾರೆ. ಆದರೆ ಅವರ ಮಗಳು ನಿಧಿಗೆ ಚಿತ್ರರಂಗಕ್ಕೆ ಬರಲು ಇನ್ನೂ ವೇದಿಕೆ ಸೃಷ್ಟಿಯಾಗಿಲ್ಲ.

ಉಪ್ಪಿ ಮಗಳು ಐಶ್ವರ್ಯಾ

ಕನ್ನಡದ ಬಹುಭಾಷಾ ನಟಿ ಪ್ರಿಯಾಂಕಾ ಉಪೇಂದ್ರ ಮಗ ಆಯುಷ್ ಹೀರೊ ಆಗಿ ಲಾಂಚ್ ಆಗಿದ್ದು, ತಮ್ಮ ಚೊಚ್ಚಲ ಸಿನಿಮಾ ಶೂಟಿಂಗ್ ನಲ್ಲಿಬಿಝಿ ಇದ್ದಾರೆ. ಮಗನಂತೆ ಮಗಳು ಐಶ್ವರ್ಯಾಳನ್ನೂ ನಟಿಯಾಗಿಸುವ ಯೋಚನೆ ಪ್ರಿಯಾಂಕಾರಿಗಿದೆ. ನಟ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಮಕ್ಕಳಿಬ್ಬರೂ ಸಿನಿಮಾ ಮೇಕಿಂಗ್ ಹಾಗೂ ಮೀಡಿಯಾ ಸಂಬಂಧಿತ ಕೋರ್ಸ್ ಮುಗಿಸಿ ಪದವಿ ಸ್ವೀಕರಿಸುವ ಸಿದ್ಧತೆಯಲ್ಲಿದ್ದಾರೆ. ಮಗಳು ಐಶ್ವರ್ಯಾ ಕೂಡ ಖ್ಯಾತ ತಮಿಳು ಹಾಗೂ ಹಿಂದಿ ಸಿನಿಮಾ ನಿರ್ದೇಶಕ ಅಟ್ಲಿನಿರ್ದೇಶನ ತಂಡದಲ್ಲಿಕೆಲಸ ಮಾಡುತ್ತಿದ್ದಾರೆ. ನಿರ್ದೇಶನದಲ್ಲಿಆಸಕ್ತಿಯಿರುವ ಐಶ್ವರ್ಯಾ ತಮ್ಮ ಅಮ್ಮನಂತೆ ಸುಂದರವಾಗಿದ್ದಾರೆ ಮತ್ತು ಉತ್ತಮ ಲಾಂಚ್ ಗಾಗಿ ಕಾಯುತ್ತಿದ್ದಾರೆ.

ಬಾಕ್ಸ್

ಮಾಲಾಶ್ರೀ ಪುತ್ರಿ ಆರಾಧನಾ

ಕನ್ನಡದ ಕನಸಿನ ರಾಣಿ, ಆ್ಯಕ್ಷನ್ ಕ್ವೀನ್ ಎಂದೇ ಕರೆಸಿಕೊಳ್ಳುವ ನಟಿ ಮಾಲಾಶ್ರೀ ಮಗಳು ಆರಾಧನಾ ಕನ್ನಡ ಸ್ಟಾರ್ ದರ್ಶನ್ ಗೆ ಜೋಡಿಯಾಗಿ ‘ಕಾಟೇರ’ ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದಾರೆ. ನಂತರ ಅವರು ಉಪ್ಪಿಯ ‘ನೆಕ್ಸ್ಟ್ ಲೆವೆಲ್ ’ ಸಿನಿಮಾಗೆ ನಾಯಕಿಯಾಗಿದ್ದಾರೆ. ಆದರೆ ಈ ಸಿನಿಮಾ ಅನೌನ್ಸ್ ಆಗಿ ಆರು ತಿಂಗಳಾಗಿದ್ದು, ಈ ಬಗ್ಗೆ ಈವರೆಗೂ ಯಾವುದೇ ಅಪ್ಡೇಟ್ ಇಲ್ಲ. ಅವರು ಸ್ಟಾರ್ ನಟಿಯ ಮಗಳಾದರೂ, ನೋಡಲು ಸುಂದರವಾಗಿದ್ದರೂ, ಚೊಚ್ಚಲ ಚಿತ್ರದಲ್ಲಿಯೇ ತಮ್ಮ ಪ್ರತಿಭೆ ನಿರೂಪಿಸಿದ್ದರೂ ಅವರನ್ನು ಸಿನಿಮಾ ಆಫರ್ ಗಳು ಹುಡುಕಿಕೊಂಡು ಬರುತ್ತಿಲ್ಲ. ಇದೇ ಥರ ನಟಿ ಜಯಮಾಲಾ ಮಗಳು ಸೌಂದರ್ಯ ಹಾಗೂ ಸುಮಿತ್ರಾ ಮಕ್ಕಳಾದ ಉಮಾ ಹಾಗೂ ನಕ್ಷತ್ರ ಕೂಡ ಒಂದೆರಡು ಸಿನಿಮಾಗಳಲ್ಲಿಮಿಂಚಿ ಮರೆಯಾಗಿದ್ದಾರೆ.